Uncategorized

ಮಂಡ್ಯ ರಮೇಶ್ ಸಾರಥ್ಯದ ‘ರಜಾ ಮಜಾ’ಗೆ ಚಾಲನೆ

 

ಖ್ಯಾತ ನಟ, ಶ್ರೇಷ್ಠ ಹಾಸ್ಯ ಕಲಾವಿದರಾದ ಮಂಡ್ಯ ರಮೇಶ್ ನೇತೃತ್ವದ ನಟನ ಬಳಗದ ‘ರಜಾ ಮಜಾ” ಮಕ್ಕಳ ಬೇಸಿಗೆ ಶಿಬಿರಕ್ಕೆ ಮೈಸೂರಿನ ಶಾರದ ವಿಲಾಸ್ ಶತಮಾನೋ ತ್ಸವ ಭವನದಲ್ಲಿ ವಿಧ್ಯುಕ್ತ ಚಾಲನೆ ದೊರಕಿತು.

ಕಳೆದ 17 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿ, ಕಲೆಯ ಮೂಲಕ ಸ್ವಸ್ಥ ಸಮಾಜ ನಿರ್ಮಿಸುವ ಮತ್ತು ರಂಗ ಪರಂಪರೆಯನ್ನು ಯುವಕರಿಗೆ, ಮಕ್ಕಳಿಗೆ ತಲುಪಿಸಿ ಅವರೊಳಗಿನ ಮನುಷ್ಯನನ್ನ ಜಾಗೃತಗೊಳಿಸುವ ಕೆಲಸವನ್ನು ಮಾಡುತ್ತಿರುವ ಮಂಡ್ಯ ರಮೇಶ್ ಕಾಯಕವನ್ನು ಅತಿಥಿಗಳು ಮುಕ್ತ ಕಂಠದಿಂದ ಶ್ಲಾಘಿಸಿದರು. ರಂಗ ಶಿಕ್ಷಣ, ನಾಟಕ ತಯಾರಿ, ಪ್ರದರ್ಶನ, ತಿರುಗಾಟ, ಸಂವಾದ, ಪ್ರಾತ್ಯಕ್ಷಿಕೆ, ರಂಗ ಸಂಗೀತ ಕಾರ್ಯಕ್ರಮ, ರಜಾ ಮಜಾ, ನೇಪಥ್ಯ ಕಾರ್ಯಾಗಾರ.. ರಂಗ ಭೂಮಿಗೆ ಬದುಕು ಅರ್ಪಿಸಿದ ಸಾಧಕರನ್ನು ಗುರ್ತಿಸಿ, ಮುಂದಿನ ತಲೆಮಾರಿಗೆ ಪರಿಚಯಿಸಿ, ಗೌರವಿಸುವ ನಟನ ಬಳಗದ ಸೇವೆ ಅನನ್ಯವೆಂದು ಅಭಿಪ್ರಾಯಪಟ್ಟರು.

ರಂಗಭೂಮಿ ಕಲಾ ಚತುರ ಚಿತ್ರನಟ ಮುಖ್ಯಮಂತ್ರಿ ಚಂದ್ರು ನಗೆಯ ಹೊನಲನ್ನೇ ಹರಿಸಿ, ಮಕ್ಕಳ ಮನೋವಿಕಾಸಕ್ಕೆ ರಂಗಭೂಮಿ ಅತ್ಯಂತ ಚೇತೋಹಾರಿ ಸಂಜೀವಿನಿ ಎಂದು ವ್ಯಾಖ್ಯಾನಿಸಿದರು..

ಹಿರಿಯ ನಟ ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್ ‘ರಜಾ ಮಜಾ’ ಮಕ್ಕಳಿಗೆ ಸೂಕ್ತ ವೇದಿಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು,. ಮಂಡ್ಯ ರಮೇಶ್ ತಂದೆಯವರಾದ ಎನ್.ಸುಬ್ರಹ್ಮಣ್ಯಂ ಅವರು ಹಿರಿಯ ರಂಗ ಗಾಯಕಿ ಸುಭದ್ರಮ್ಮ ಮನ್ಸೂರ್ ಅವರಿಗೆ ನಟನ ಪುರಸ್ಕಾರ, ಗೌರವ ಸಮರ್ಪಣೆ ಮಾಡಿದರು. ಪ್ರಜಾವಾಣಿ ಸ್ಥಾನಿಕ ಸಂಪಾದಕ ಮರಿಯಪ್ಪ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು..‌

Leave a Comment