Uncategorized

ಶ್ರೀವಲ್ಲಿದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ 6ನೇ ವಾರ್ಷಿಕೋತ್ಸವ

ಬೆಂಗಳೂರಿನ ಗಿರಿನಗರದಲ್ಲಿರುವ ಎಸ್ ಬಿಎಂ ಕಾಲೋನಿಯಲ್ಲಿನ ಶ್ರೀವಲ್ಲಿದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ 6ನೇ ವಾರ್ಷಿಕೋತ್ಸವದ ಅಂಗವಾಗಿ ಕಲ್ಯಾಣೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಗುರುವಾರದಂದು ವಿನಾಯಕ ಪೂಜೆ, ಗಂಗಾಪೂಜೆ, ಗೋಪೂಜೆ, ವೇದಘೋಷ ಮಂಗಳವಾದ್ಯ ಸಹಿತ ಯಾಗಶಾಲಾ ಪ್ರವೇಶ, ಸಭಾ ಪ್ರಾರ್ಥನೆ, ಗುರು ಪ್ರಾರ್ಥನೆ, ಪುಣ್ಯಾಹ ವಾಚನ, ಕಳಸ ಸ್ಥಾಪನೆ, ಕಲ್ಪೋಕ್ತ ಪೂಜೆ, ಶ್ರೀ ಸುದರ್ಶನ ಹೋಮ ಮತ್ತು ಮಹಾಪೂರ್ಣಾಹುತಿ, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ನೆರವೇರಿತು.

ಶುಕ್ರವಾರ ಬೆಳಿಗ್ಗೆ ಶ್ರೀಮಹಾಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಸರಸ್ವತಿ ಸೂಕ್ತ ಹೋಮ, ಶ್ರೀ ಸುಬ್ರಹ್ಮಣ್ಯೇಶ್ವರ ಮೂಲಮಂತ್ರ ಹೋಮ, ಶ್ರೀ ಸರ್ಪಸೂಕ್ತ ಹೋಮ, ದುರ್ಗಾ ಹೋಮಾದಿಗಳು ನೆರವೇರಿತು, ಪೂರ್ಣಾಹುತಿಯ ನಂತರ ಶ್ರದ್ಧಾ ಭಕ್ತಿಯಿಂದ ಸ್ವಾಮಿಯವರಿಗೆ ಕಲ್ಯಾಣೋತ್ಸವ ಪ್ರಾಕಾರೋತ್ಸವ ನಡೆಯಿತು.

ಋಗ್ವೇದ ಪಂಡಿತ, ಶೈವಾಗಮ ಪ್ರವೀಣರಾದ ವೈ.ಜಿ.ಸುರೇಶ ಶಾಸ್ತಿ ಅವರ ನೇತೃತ್ವದಲ್ಲಿ ಅರ್ಚಕರಾದ ಜಗನ್ನಾಥಾಚಾರ್ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಶಾಸಕ ರವಿ ಸುಬ್ರಹ್ಮಣ್ಯಂ, ಶ್ರೀವಲ್ಲಿದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಬಿ.

ವೀಣಾ ಪ್ರಸಾದ್, ಆಡಳಿತ ಮಂಡಳಿ ಸದಸ್ಯರು, ನೂರಾರು ಭಕ್ತಾದಿಗಳು ದೇವತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

 

Leave a Comment