ರಾಜಕೀಯ

ಸಂಸದ ಕೆ.ಹೆಚ್.ಮುನಿಯಪ್ಪಗೆ ಮುಖಭಂಗ

ಚುನಾವಣೆ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ಸೋಲಿಲ್ಲದ ಸರದಾರದ ಖ್ಯಾತಿಯ ಕೆಎಚ್ ಮುನಿಯಪ್ಪಗೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಶಿಡ್ಲಘಟ್ಟದಲ್ಲಿ ಸಚಿವ ಡಿಕೆ ಶಿವಕುಮಾರ್ ಎದುರಲ್ಲಿಯೇ ಕೆಎಚ್ ಮುನಿಯಪ್ಪ ವಿರುದ್ಧ ಮುಗಿಬಿದ್ದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಕೋಲಾರದಲ್ಲೂ ಸಹ ಪ್ರಚಾರ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು

ಕೋಲಾರ ತಾಲ್ಲೂಕಿನ ವೇಮಗಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆ ಪ್ರಾರಂಭಕ್ಕೂ ಮುನ್ನ ವೇದಿಕೆಯಲ್ಲಿ ಮುಖಂಡರೊಬ್ಬರು ಮಾತನಾಡುವ ವೇಳೆ ಕೆಎಚ್ ಮುನಿಯಪ್ಪ ಸಾಧನೆ ಏನೆಂದು ಪ್ರಶ್ನಿಸಿ ಕೆಸಿ ವ್ಯಾಲಿ ನೀರಿಗೆ ಅಡ್ಡಗಾಲು ಹಾಕಿದ್ದು ಕೆಎಚ್ ಎಂದು ಆಕ್ರೋಶ ಹೊರಹಾಕಿದ್ರು. ಈ ವೇಳೆ ಪೋಲಿಸರು ಸಭೆಯಿಂದ ಮತದಾರರನ್ನು ಹೊರಹಾಕಿದ್ರು. ಇನ್ನು ಕಾರ್ಯಕ್ರಮ ಪ್ರಾರಂಭವಾದ ನಂತ್ರ ಕೆಎಚ್ ಮುನಿಯಪ್ಪ ಭಾಷಣ ಮಾಡಲು ಮುಂದಾದಾಗ ಹಿರಿಯ ಮತದಾರನೊಬ್ಬ ಕ್ಷೇತ್ರಕ್ಕೆ ಎಷ್ಟು ಕೋಟಿ ಬಿಡುಗಡೆ ಮಾಡಿಸಿರುವೆ, ಏನೇನು ಅಭಿವೃದ್ಧಿ ಮಾಡಿದ್ದೀಯ ಎಂದು ಪ್ರಶ್ನಿಸಿದ್ರು. ಈ ವೇಳೆ ಮಾಧ್ಯಮದವರು ಹಿರಿಯ ಮತದಾರನ ಕಡೆ ತಿರುಗಿ ಸೆರೆಹಿಡಿಯಲು ಮುಂದಾದಗ ಮಾಧ್ಯಮದವರ ವಿರುದ್ಧ ಕೆಹೆಚ್ ಅಸಹನೆ ವ್ಯಕ್ತಪಡಿಸಿದರು.

ರಾಜ್ಯಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದರೂ ಕೋಲಾರದಲ್ಲಿ ಮಾತ್ರ ಮೈತ್ರಿಯಲ್ಲಿ ಬಿರುಕು ಎದ್ದು ಕಾಣುತ್ತಿತ್ತು, ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಗೈರಾಗಿದ್ರು. ಮತ್ತೊಂದು ಕಡೆ ಕಾಂಗ್ರೆಸ್ ನ ಸ್ಥಳೀಯ ಮುಖಂಡರು , ವರ್ತೂರು ಪ್ರಕಾಶ್ ಬಣದ ಕಾಂಗ್ರೆಸ್ ನ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ತಾಲ್ಲೂಕು ಪಂಚಾಯತ್ ಸದಸ್ಯರು ಗೈರು ಹಾಜರಾಗಿದ್ದರು.

Leave a Comment