Uncategorized ಸುದ್ದಿಗಳು

ಹೋಮಿಯೋಪತಿ ಕಡೆಗಣನೆ ಸಲ್ಲದು-ನಾಡೋಜ ಡಾ.ಬಿ.ಟಿ.ರುದ್ರೇಶ್

ವಿಶ್ವ ಹೋಮಿಯೋಪತಿ ಜನಕ ಸಾಮ್ಯುಯಲ್ ಹನೆಮನ್ಸ್ ಅವರ 264ನೇ ಜಯಂತಿ ಅಂಗವಾಗಿ ಬೆಂಗಳೂರಿನ ಪುರಭವನದಲ್ಲಿ ವಿಶ್ವ ಹೋಮಿಯೋಪತಿ ದಿನಾಚರಣೆ ಆಚರಿಸಲಾಯಿತು. ದಿ ಹೋಮಿಯೋಪತಿ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಹೋಮಿಯೊಪತಿ ಮಂಡಳಿ ಅಧ್ಯಕ್ಷ, ನಾಡೋಜ ಡಾ.ಬಿ.ಟಿ.ರುದ್ರೇಶ್ ಅವರು ಹೋಮಿಯೋಪತಿ ಚಿಕಿತ್ಸಾ ಪದ್ಧತಿಯ ಪ್ರಾಶಸ್ತ್ಯದ ಬಗ್ಗೆ ಅರಿವು ಮೂಡಿಸಿದರು.

ಹೋಮಿಯೋಪತಿಯನ್ನು ಕಡೆಗಣಿಸಿ 2020ರ ವೇಳೆಗೆ ದೇಶದ ಎಲ್ಲಾ ಜನರಿಗೂ ಆರೋಗ್ಯ ಭಾಗ್ಯ ಕಲ್ಪಿಸಲು ಸಾಧ್ಯವಿಲ್ಲ, ಸರ್ಕಾರ ಹೋಮಿಯೋಪತಿ ವೈದ್ಯ ಪದ್ಧತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಹೋಮಿಯೋಪತಿ ಘಟಕಗಳ ಸ್ಥಾಪನೆಯಾಗಬೇಕು, ರಾಜ್ಯದಲ್ಲಿ 35 ಸಾವಿರ ಆಯುರ್ವೇದ ವೈದ್ಯರಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ 600 ಆಯುರ್ವೇದ ಘಕಟಕಗಳು ಕಾರ್ಯನಿರ್ವಹಿಸುತ್ತಿದೆ. ಆದರೆ, 13 ಸಾವಿರ ಹೋಮಿಯೋಪತಿ ವೈದ್ಯರಿದ್ದರೂ ಹೋಮಿಯೋಪತಿಗೆ ಕೇವಲ 40 ತಾತ್ಲಾಲಿಕ ಘಟಕ ಆರಂಭಿಸಲು ಮಾತ್ರ ಅವಕಾಶ ಮಾಡಿಕೊಟ್ಟಿದ್ದು, ಶಕ್ತಿ ತುಂಬುವ ಕೆಲಸ ಮಾಡುತ್ತಿಲ್ಲ. ಕೂಡಲೇ ಸರ್ಕಾರವು ಈ ತಾರತಮ್ಯ ನಿವಾರಿಸಿ ಕನಿಷ್ಠ 150 ಹೋಮಿಯೋಪತಿ ಘಟಕಕ್ಕೆ ಅನುಮತಿ ನೀಡಬೇಕೆಂದು ಡಾ.ಬಿ.ಟಿ.ರುದ್ರೇಶ್ ಆಗ್ರಹಿಸಿದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾತನಾಡಿ, ಒಂದೊಂದು ಮತದ ಪ್ರಾಮುಖ್ಯತೆಯನ್ನೂ ತಿಳಿಸಿ, ಪ್ರತಿಯೊಬ್ಬರೂ ಮತ ಹಕ್ಕು ಚಲಾಯಿಸಬೇಕೆಂದು ಕರೆ ನೀಡಿದರು. ನಟಿ ರೂಪಿಕಾ ಸಹಾ ತಪ್ಪದೆ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.

ಆಯುಷ್ ಇಲಾಖೆ ಆಯುಕ್ತರಾದ ಮೀನಾಕ್ಷಿ ನೇಗಿ, ಉಪ ಆಯುಕ್ತ ಸಿ.ಬಿ.ನಂಜರಾಜು, ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Comment