ಅಪರಾಧ ರಾಜಕೀಯ ಸಿನೆಮಾ ಸುದ್ದಿಗಳು

ಲಾಂಗ್- ಮಚ್ಚು ಸುಂದರಿ ಅಂದರ್- ನಡುರಸ್ತೆಯಲ್ಲಿ ಲಾಂಗ್‌ಬೀಸಿದ್ದಕ್ಕೆ ಜೈಲು ಸೇರಿದ ಅಸ್ಮಿತಾ- ಇಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತಾ?!

೨೦ ವರ್ಷದ ಹುಡುಗಿಯರು ಫ್ಯಾಶನ್ ಶೋದಲ್ಲಿ ಮಿಂಚೋದನ್ನು ನೋಡಿದ್ದೀರಾ…ಆದರೇ ಈ ಹುಡುಗಿ ಕೈಯಲ್ಲಿ ಆಳೆತ್ತರದ ಲಾಂಗ್ ಹಿಡಿದು ಸದ್ದು ಮಾಡಿದ್ದಳು. ಹೌದು ಗುಜರಾತನ ಸೂರತ್ ನಲ್ಲಿ ನಡುರಸ್ತೆಯಲ್ಲೇ ಲಾಂಗ್ ಹಿಡಿದು ಅಂಗಡಿ ಮಾಲೀಕರನ್ನು ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ ಲೇಡಿ ಡಾನ್ ಅಸ್ಮಿತಾಳನ್ನು ಈಗ ಪೊಲೀಸರು ಬಂಧಿಸಿದ್ದಾರೆ.


ಅಂಗಡಿ ಮಾಲೀಕರೊಬ್ಬರಿಗೆ ಲಾಂಗ್‌ನಿಂದ ಬೆದರಿಸಿದ್ದ ಅಸ್ಮಿತಾ ಅವರಿಂದ ಹಣ ವಸೂಲಿ ಮಾಡುತ್ತಿದ್ದ ದೃಶ್ಯವೊಂದು ಮೊಬೈಲ್‌ನಲ್ಲಿ ರೆಕಾರ್ಡ್ ಆಗಿತ್ತು. ಅಷ್ಟೇ ಅಲ್ಲ ಅಸ್ಮಿತಾಳ ಈ ದೌರ್ಜನ್ಯ ಸಖತ್ ವೈರಲ್ ಆಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡ ಸೂರತ್ ಪೊಲೀಸರು ವಿಡಿಯೋ ಆಧರಿಸಿ ಕಾರ್ಯಾಚರಣೆ ನಡೆಸಿ ಅಸ್ಮಿತಾ ಕೈಗೆ ಕೋಳ ತೊಡಿಸಿದ್ದಾರೆ. ೨೦ ವರ್ಷದ ಅಸ್ಮಿತಾ ಸೂರತ್ ನ ವರಾಛ ನಗರದ ವರ್ಷಾ ಸೊಸೈಟಿಯ ನಿವಾಸಿ. ವಿಡಿಯೋದಲ್ಲಿ ಅಸ್ಮಿತಾ ಗೆಳೆಯನೊಂದಿಗೆ ಬೈಕ್ ನಲ್ಲಿ ಬಂದು ಇಳಿಯುವುದು ಹಾಗೂ ಅಂಗಡಿ ಮಾಲೀಕನಿಗೆ ಲಾಂಗ್ ಬೀಸಿ ಹೆದರಿಸುವ ವಿಡಿಯೋ ರೆಕಾರ್ಡ್ ಆಗಿತ್ತು.

 

 

ಇನ್ನು ಇದು ಅಸ್ಮಿತಾಳ ಫುಲ್ ಟೈಂ ಕೆಲಸ ಎನ್ನಲಾಗಿದ್ದು ದುಬಾರಿ ಬೈಕ್ ಗಳನ್ನು ಓಡಿಸುವ ಅಸ್ಮಿತಾಗೆ ಗನ್ ಹಾಗೂ ಲಾಂಗ್ ಚಲಾಯಿಸುವುದು ನೀರುಕುಡಿದಷ್ಟೆ ಸಲೀಸಂತೆ. ಈ ಹಿಂದೆ ಹೋಳಿ ಸಂದರ್ಭದಲ್ಲಿ ರಸ್ತೆಯಲ್ಲೇ ಲಾಂಗ್ ಹಿಡಿದು ದಾದಾಗಿರಿ ನಡೆಸಿದ್ದ ಅಸ್ಮಿತಾ ಜನರಿಂದ ಹಣ ಸಂಗ್ರಹಿಸಿದ ವಿಡಿಯೋ ಸಖತ್ ವೈರಲ್ ಆಗಿತ್ತು. ಒಟ್ಟಿನಲ್ಲಿ ಈಗ ಸ್ಥಳೀಯ ಪೊಲೀಸರು ಅಸ್ಮಿತಾಳಿಗೆ ಬ್ರೇಕ್ ಹಾಕಿದ್ದು ಅಂಗಡಿಕಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Leave a Comment