ಅಪರಾಧ ರಾಜಕೀಯ

ಪಾಲಿಕೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಮೇಲೆ ಆಸ್ಯಿಡ್ ದಾಳಿ- ಬೆಚ್ಚಿಬಿದ್ದ ಕರ್ನಾಟಕ!

ಪಾಲಿಕೆ ಚುನಾವಣೆಯ ವೈಷಮ್ಯ ಆಸ್ಯಿಡ್​ ಮಾದರಿಯ ರಾಸಾಯನಿಕ ದಾಳಿಯಲ್ಲಿ ಅಂತ್ಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ಕೇವಲ ಪಾಲಿಕೆಯ ಚುನಾವಣೆಯ ಗೆಲುವನ್ನು ಸಹಿಸಲಾರದೇ ಗೆದ್ದ ಅಭ್ಯರ್ಥಿ ಇನಾಯತುಲ್ಲಾ ಹಾಗೂ ಆತನ ಬೆಂಬಲಿಗರ ಮೇಲೆ ಈ ದಾಳಿ ನಡೆದಿದ್ದು, ರಾಸಾಯನಿಕ ದಾಳಿಗೆ ನಾಲ್ಕಕ್ಕು ಹೆಚ್ಚು ಜನರು ತೀವ್ರವಾದ ಸುಟ್ಟಗಾಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.

 

ವಾರ್ಡ್ ನಂಬರ್ ೧೬ ರ ಕಾಂಗ್ರೆಸ್ ಸದಸ್ಯ ಇನಾಯತುಲ್ಲಾ ಖಾನ್ ತಮ್ಮ ಪ್ರತಿಸ್ಪರ್ಧಿಯ ವಿರುದ್ಧ ಗೆಲುವು ಸಾಧಿಸಿದ್ದರು. ಈ ವೇಳೆ ಇನಾಯತುಲ್ಲಾ ಬೆಂಬಲಿಗರು ಸಂಭ್ರಮಾಚರಣೆ ಆರಂಭಿಸಿದ್ದರು. ತುಮಕೂರಿನ ವಾರ್ಡ್​ ನಂ 16 ರ ಬಾರ್ ಲೈನ್ ರಸ್ತೆಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದ್ರವರೂಪದ ರಾಸಾಯನಿಕವೊಂದನ್ನು ಇನಾಯತು ಬೆಂಬಲಿಗರ ಮೇಲೆ ಸೋಕಿ ಪರಾರಿಯಾಗಿದ್ದಾರೆ.

 

ತಕ್ಷಣವೇ ಅಸ್ವಸ್ಥರಾದ 30 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುಮಕೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆ ಬಳಿಕ ಸಹಜವಾಗಿಯೇ ಅನುಮಾನ ಸೋತ ಅಭ್ಯರ್ಥಿಯ ಕಡೆ ಹೊರಳಿದೆ.

 

 

 

ಇನ್ನು ಘಟನೆಯ ವಿವರ ತಿಳಿಯುತ್ತಿದ್ದಂತೆ ಸೊಗಡು ಶಿವಣ್ಣ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಏನೇ ಇರಲಿ, ಪಾಲಿಕೆ ಚುನಾವಣೆಯಲ್ಲೇ ಈ ಮಟ್ಟಿಗಿನ ರಾಜಕೀಯ ವೈಷಮ್ಯ ಬೆಳಕಿಗೆ ಬಂದಿರೋದು ಸಾರ್ವಜನಿಕರಲ್ಲಿ ರಾಜಕೀಯ ಕ್ಷೇತ್ರದತ್ತ ಭಯ ಮೂಡಿಸುತ್ತಿರೋದು ಸುಳ್ಳಲ್ಲ.

Leave a Comment