ಸಿನೆಮಾ

ಫಾರ್ಂ ಹೌಸ್ ಗೆ ಬಂದ ಅಭಿಮಾನಿಗೆ ದರ್ಶನ ಕೊಟ್ಟ ಗಿಫ್ಟ್ ಏನು ಗೊತ್ತಾ?!

Views:
82

ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ ಸದಾ ಬಡವರು-ಅಸಹಾಯಕರಿಗಾಗಿ ಮಿಡಿಯುವ ಹೃದಯ ಮನಸ್ಸು ಹೊಂದಿದ್ದಾರೆ. ಇದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ಇದೀಗ ಮತ್ತೊಮ್ಮೆ ದರ್ಶನ ತಮ್ಮ ಸ್ಟಾರ್​ ಹಮ್ಮುಬಿಮ್ಮು ಬಿಟ್ಟು ವಿಶೇಷ ಚೇತನ ಅಭಿಮಾನಿಯೊಂದಿಗೆ ತಾವೇ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ.

  
ಮೊನ್ನೆ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ದರ್ಶನ ತಮ್ಮ ಮೆಚ್ಚಿನ ಮೈಸೂರು ಫಾರ್ಂ ಹೌಸ್​ನಲ್ಲಿ ವಿಶೇಷ ಪೂಜೆ ಹಾಗೂ ಔತಣ ಹಮ್ಮಿಕೊಂಡಿದ್ದರು. ಈ ವೇಳೆ ವಿಷಯ ತಿಳಿದ ವಿಶೇಷ ಚೇತನ ಅಭಿಮಾನಿಯೊಬ್ಬರು ದರ್ಶನ ಫಾರ್ ಂ ಹೌಸ್ ಗೆ ಬಂದಿದ್ದರು. ಇದನ್ನು ಕಂಡು ಖುಷಿಯಾದ ದರ್ಶನ ಅವರಿಗೆ ವಿಶೇಷ ಸ್ವಾಗತ ಕೋರಿ ತಾವೇ ಅವರ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಜೊತೆಗ ಕೈಯ್ಯಾರೆ ಊಟ ಬಡಿಸಿ ಅವರನ್ನು ಉಪಚರಿಸಿದರು.

ಇನ್ನು ತಮ್ಮ ಸ್ಟಾರ್​​ ಹೀಗೆ ಅಭಿಮಾನಿಯನ್ನು ಉಪಚರಿಸಿದ್ದನ್ನು ಕಂಡು ಅಭಿಮಾನಿಗಳು ಸಖತ್ ಖುಷಿಯಾಗಿದ್ದು ಈ ವಿಡಿಯೋವನ್ನು ತಮ್ಮ ಟ್ವಿಟರ್​ ಪೇಸ್​ಬುಕ್​ನಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಇದೇ ಮೊದಲಲ್ಲ ಈ ಹಿಂದೆಯೂ ಹಲವಾರು ಭಾರಿ ದರ್ಶನ ತಮ್ಮ ಅಭಿಮಾನಿಗಳ ಸಹಾಯಕ್ಕೆ ಧಾವಿಸಿದ್ದು, ಆರ್ಥಿಕವಾಗಿಯೂ ಸಹಾಯ ಮಾಡಿ ಮಾದರಿ ಕಾರ್ಯ ಮಾಡಿದ್ದಾರೆ.

Leave a Comment