ರಾಜಕೀಯ ಸಿನೆಮಾ ಸುದ್ದಿಗಳು

ಮೊಳಕಾಲ್ಮೂರಿನ ಗೂಡಂಗಡಿಯಲ್ಲಿ ಟೀ ಹೇಗಿತ್ತು ಸುದೀಪ್ ಸರ್?

Views:
60

ಸಾಮಾನ್ಯವಾರಿ ಸ್ಟಾರ್​ ನಟರು ಅಭಿಮಾನಗಳ ಕಾಟನಿಂದ ತಪ್ಪಿಸಿಕೊಳ್ಳೋದಿಕ್ಕೆ ಐಷಾರಾಮಿ ಹೊಟೇಲ್​​ಗಳು ಅಥವಾ ಜನಸಾಮಾನ್ಯರ ಒಡನಾಟದಿಂದ ದೂರವಿರುವ ಸ್ಥಳಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಆದರೇ ಇದೆಲ್ಲಕ್ಕೂ ಭಿನ್ನವಾಗಿ ಸ್ಯಾಂಡಲವುಡ್​ ಚಕ್ರವರ್ತಿ ಸುದೀಪ್, ರಸ್ತೆ ಬದಿಯ ಗೂಡಂಗಡಿಯಲ್ಲಿ ಟೀ ಕುಡಿದು ಚಿತ್ರಾನ್ನ ತಿಂದು ಅಚ್ಚರಿ ಮೂಡಿಸಿದ್ದಾರೆ.

ಇಂದು ನಟ ಸುದೀಪ್, ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುದೀಪ ಪರ ಪ್ರಚಾರ ನಡೆಸಿದರು. ಮೊಳಕಾಲ್ಮೂರಿಗೆ ಹೆಲಿಕ್ಯಾಪ್ಟರ್​ನಲ್ಲಿ ಆಗಮಿಸಿದ್ದ ಸುದೀಪ, ಪ್ರಚಾರದ ಬಳಿಕ ಧೀಡಿರ ರಸ್ತೆ ಬದಿಯ ಚಿಕ್ಕ ಗೂಡಂಗಡಿಗೆ ತೆರಳಿ ಟೀ ಕುಡಿದು ಚಿತ್ರಾನ್ನ ತಿಂದರು. ಅಷ್ಟೇ ಅಲ್ಲ ಅಂಗಡಿ ನಡೆಸುತ್ತಿದ್ದ ಮಹಿಳೆಯೊಂದಿಗೆ ಮಾತನಾತಾಡಿದರು.

ಈ ವೇಳೆ ಅಂಗಡಿ ನಡೆಸುತ್ತಿದ್ದ ಮಹಿಳೆ ಕಷ್ಟದಲ್ಲಿರೋದನ್ನು ತಿಳಿದು ಕೇವಲ 1 ಟೀ ಮತ್ತು ಚಿತ್ರಾನ್ನಕ್ಕೆ 10 ಸಾವಿರ ರೂಪಾಯಿ ನೀಡಿ, ಕುಟುಂಬದ ಮಕ್ಕಳಿಗೆ ತಿಂಡಿ ಕೊಡಿಸುವಂತೆ ಹೇಳಿದರು. ಇನ್ನು ಸುದೀಪ್, ಗೂಡಂಗಡಿಗೆ ಟೀ ಕುಡಿಯಲು ಬಂದಿದ್ದನ್ನು ಕಂಡು ಅಭಿಮಾನಿಗಳು ಕಿಚ್ಚನನ್ನು ನೋಡಲು ಮುಗಿಬಿದ್ದರು. ಹೀಗಾಗಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

Leave a Comment