ಸಿನೆಮಾ ಸುದ್ದಿಗಳು

ಮಾವನಿಗಾಗಿ ತೆನೆಹೊತ್ತ ನಟಿ ಅಮೂಲ್ಯ – ಗಂಡನಿಗಾಗಿ ಕಪ್ಪಗಾದ ಚೆಂದುಳ್ಳಿ ಚೆಲುವೆ

Views:
87

ಗಂಡನಿಗಾಗಿ ಹರಕೆ ಹೊತ್ತುಕೊಳ್ಳುವುದನ್ನು ಕೇಳಿದ್ದೇವೆ. ಗಂಡನಿಗಾಗಿ ಮುಖವನ್ನು ಇನ್ನಷ್ಟೂ ಬೆಳ್ಳಗಾಗಿಸಲು ಯತ್ನಿಸೋ ಪತ್ನಿಯನ್ನೂ ನೋಡಿದ್ದೇವೆ. ಆದರೆ ನಟಿ ಅಮೂಲ್ಯರದ್ದು ಉಲ್ಟಾ ಜೀವನ. ಮಾವನಿಗಾಗಿ ತೆನೆ ಹೊತ್ತು, ಗಂಡನಿಗಾಗಿ ಬಿಸಿಲಲ್ಲಿ ಕಪ್ಪಗಾಗಬೇಕು.

ಹೌದು. ಕನ್ನಡ ಚಿತ್ರರಂಗದಲ್ಲಿ ಹಾಲಿನಂತ ಚೆಲುವನ್ನು ಹೊಂದಿರುವ ಅಮೂಲ್ಯ ಬೆಂಕಿಯಂತಹ ಬಿಸಿಲಿನಲ್ಲಿ ನಡೆಯುತ್ತಿದ್ದಾರೆ. ಅದಕ್ಕೆ ಕಾರಣ ಗಂಡ ಜಗದೀಶ್.

 

ಯಾವುದೇ ರಾಜಕೀಯದ ಆಸಕ್ತಿ ಇಲ್ಲದಿದ್ದರೂ ಮಾವ ಜಿ ಎಚ್ ರಾಮಚಂದ್ರರಿಗಾಗಿ ಜೆಡಿಎಸ್ ತೆನೆ ಹೊತ್ತುಕೊಂಡಿದ್ದಾರೆ ಅಮೂಲ್ಯ. ಜಗದೀಶ್ ಅವರ ಅಪ್ಪ ಜಿ ಎಚ್ ರಾಮಚಂದ್ರ ಬಿಜೆಪಿಯಲ್ಲಿ ಕಾರ್ಪೋರೇಟರ್ ಆಗಿದ್ದರು. ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜಿ ಎಚ್ ರಾಮಚಂದ್ರ ಟಿಕೆಟ್ ಕೇಳಿದ್ದರು. ಬಿಜೆಪಿ ಟಿಕೆಟ್ ನಿರಾಕರಿಸಿದಾಗ ಜೆಡಿಎಸ್ ಸೇರಿ ರಾಮಚಂದ್ರ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

 

ರಾಮಚಂದ್ರ ಜೊತೆ ಅವರ ಸೊಸೆ ನಟಿ ಅಮೂಲ್ಯ ಕೂಡಾ ಅನಿವಾರ್ಯವಾಗಿ ಜೆಡಿಎಸ್ ಸೇರಿದ್ದಾರೆ. ಉಳಿದೆಲ್ಲಾ ನಟರು ಸ್ಟಾರ್ ನಟರಾಗಿ ಪ್ರಚಾರ ಮಾಡಿದರೆ ಅಮೂಲ್ಯ ಮಾತ್ರ ಗಂಡ ಜಗದೀಶ್ ಜೊತೆ ಬಿಸಿಲಲ್ಲಿ ನಿತ್ಯ ಪ್ರಚಾರ ಮಾಡಿ ಬಳಲಿ ಬೆಂಡಾಗುತ್ತಿದ್ದಾರೆ.

Leave a Comment