ಅಪರಾಧ ಸಿನೆಮಾ ಸುದ್ದಿಗಳು

ಶ್ರೀದೇವಿ ಸಾವಿನಲ್ಲಿ ಅನುಮಾನವಿದೆ- ನಿರ್ಮಾಪಕನ ಅನುಮಾನಕ್ಕೆ ಕೋರ್ಟ್​ ಹೇಳಿದ್ದೇನು ಗೊತ್ತಾ?!

ಮೊದಲ ಮಹಿಳಾ ಸೂಪರ್ ಸ್ಟಾರ್ ಇಮೇಜ್ ಹೊಂಗಿದ್ದ ಬಾಲಿವುಡ್​ ನಟಿ ಶ್ರೀದೇವಿ ಸಾವಿನ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ. ಕಳೆದ ಫೆಬ್ರವರಿ 24 ರಂದು ವಿವಾಹ ಸಮಾರಂಭವೊಂದಕ್ಕಾಗಿ ದುಬೈಗೆ ತೆರಳಿದ್ದ ಶ್ರೀದೇವಿ ಅಲ್ಲಿಯೇ ಹೊಟೇಲ್​ವೊಂದರಲ್ಲಿ ಬಾತ್ ಟಬ್​ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

   
ಆದರೇ ದುಬೈನಲ್ಲಿ ನಡೆದ ಶ್ರೀದೇವಿ ಸಾವು ಹಲವು ಅನುಮಾನ ಮೂಡಿಸಿತ್ತು. ಆದರೇ ತನಿಖೆ ನಡೆಸಿದ ದುಬೈ ಪೊಲೀಸರು ಆಕೆಯ ಸಾವು ನೀರಿನಲ್ಲಿ ಮುಳುಗಿದ್ದರಿಂದ ನಡೆದಿದೆ ಎಂದಿದ್ದರು. ಈ ಮಧ್ಯೆ ಶ್ರೀದೇವಿ ಅಭಿಮಾನಿಯಾಗಿದ್ದ ಚಿತ್ರನಿರ್ಮಾಪಕ ಸುನೀಲ್ ಸಿಂಗ್ ಎಂಬುವವರು ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ದೆಹಲಿಯ ಹೈಕೋರ್ಟ್​ನಲ್ಲಿ ಸುನೀಲ್ ಸಿಂಗ್ ಅರ್ಜಿ ತಿರಸ್ಕರಿಸಿತ್ತು. ಆ ಬಳಿಕ ಸುನೀಲ್ ಸಿಂಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುನೀಲ್ ಸಿಂಗ್ ಅರ್ಜಿಯಲ್ಲಿ ಶ್ರೀದೇವಿ ಹೆಸರಿನಲ್ಲಿದ್ದ ದುಬಾರಿ ಮೊತ್ತದ ವಿಮೆ ಹಣಕ್ಕಾಗಿ ಶ್ರೀದೇವಿ ಹತ್ಯೆ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​​ ಈ ಅಂಶಗಳಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದು, ಪ್ರಕರಣ ವಜಾಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಶ್ರೀದೇವಿ ಸಾವಿನ ಕುರಿತು ಅಭಿಮಾನಿಗಳಲ್ಲಿ ಉಂಟಾಗಿದ ಅನುಮಾನಗಳಿಗೆ ತೆರೆ ಬಿದ್ದಂತಾಗಿದೆ.

Leave a Comment