ಅಪರಾಧ ರಾಜಕೀಯ ಸುದ್ದಿಗಳು

ಮತ್ತೆ ಸಿಎಂ ಕೋಪಕ್ಕೆ ತುತ್ತಾದ ನೀಲಮಣಿರಾಜು- ಅಷ್ಟಕ್ಕೂ ಸಿಎಂ ಪೊಲೀಸ್ ಮಹಾನಿರ್ದೇಶಕಿ ವಿರುದ್ಧ ಸಿಟ್ಟಾಗಿದ್ದ್ಯಾಕೆ ಗೊತ್ತಾ?!

Views:
759

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇವಲ ಕಾಂಗ್ರೆಸ್ ನ ಕಿಂಗ್ ಅಗಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಮಾತ್ರವಲ್ಲ ಅವರ ಅವಧಿಯಲ್ಲಿ ಆಯ್ಕೆಯಾಗಿದ್ದ ಅಧಿಕಾರಿಗಳು ಅದೃಷ್ಟ ಕೈಕೊಟ್ಟಂತಿದೆ. ಪ್ರತಿ ಭಾರಿಯೂ ಅಧಿಕಾರಿಗಳೇ ನೂತನ ಸಿಎಂ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇತ್ತಿಚಿಗೇ ಮಮತಾ ಬ್ಯಾನರ್ಜಿ ವಿಚಾರದಲ್ಲಿ ಸಿಎಂರಿಂದ ತರಾಟೆಗೊಳಗಾಗಿದ್ದ ಡಿಜಿ-ಐಜಿಪಿ ನೀಲಮಣಿ ರಾಜು ನಿನ್ನೇ ಪ್ರಮಾಣವಚನ ಸಮಾರಂಭದ ಬಳಿಕ‌ ಮತ್ತೆ‌ಕರ್ತವ್ಯಲೋಪದ ಆರೋಪ ಹೊತ್ತಿದ್ದು ಕುಮರಸ್ವಾಮಿ ನೀಲಮಣಿಯವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

 

ನಿನ್ನೆ ರಾಜಭವನದ ಬಳಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವಂಚಿತರ ನೂರಾರು ಬೆಂಬಲಿಗರು‌ ನೆರೆದಿದ್ದರೇ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಶಾಸಕರ ಸಾವಿರಾರು ಹಿಂಭಾಲಕರು ಹಾಜರಾಗಿದ್ದರು. ಹೀಗಾಗಿ ಬೆಂಗಳೂರು ಪೊಲೀಸರು ಜನಸ್ಥೋಮ ನಿಯಂತ್ರಿಸುವಲ್ಲಿ ವಿಫಲರಾದರು. ಸಂಚಾರ ವ್ಯವಸ್ಥೆಯಂತೂ ಸಂಪೂರ್ಣ ಹದಗೆಟ್ಟಿತ್ತು. ಈ ವೇಳೆ ನೂತನ ಸರ್ಕಾರದ ಸ್ಪೀಕರ್ ರಮೇಶ್ ಕುಮಾರ್ ಅವರು ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೇ ಅದ್ಯಾವ ಅಧಿಕಾರಿ ಕಣ್ಣಿಗೆ ಅದೇನಾಗಿತ್ತೋ ಗೊತ್ತಿಲ್ಲ. ಸ್ಪೀಕರ್‌ ರನ್ನೇ ಸಮಾರಂಭಕ್ಕೆ ಬಿಡದೆ ಸತಾಯಿಸಿದ್ದಾರೆ. ಇದರಿಂದ ಅವಮಾನಿತರಾಗಿ ಹಿಂತಿರುಗಿದ ಸ್ಪೀಕರ್ ತಮಗಾದ ಅವಮಾನವನ್ನು ಉಲ್ಲೇಖಿಸಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

 

ಇಷ್ಟಕ್ಕೇ‌ ಮುಗಿದಿಲ್ಲ ಮಗನ ಸರ್ಕಾರದ ಸಚಿವ ಸಂಪುಟ ವೀಕ್ಷಣೆಗೆ ಖುದ್ದು ಮಾಜಿ‌ಪ್ರಧಾನಿ ದೇವೆಗೌಡರ ಪತ್ನಿ ಚೆನ್ನಮ್ಮ ರಾಜಭವನಕ್ಕೆ ಆಗಮಿಸಿದ್ದರು. ಆದರೇ ವಾಹನ ಗಳ ಭರಾಟೆಯಿಂದ ಚೆನ್ನಮ್ಮ ರಾಜಭವನದ ಸಮೀಪಕ್ಕೂ ತಲುಪಲಾಗಲಿಲ್ಲ. ಹೀಗಾಗಿ ಚೆನ್ನಮ್ಮ ನಡೆದೇ ರಾಜಭವನ ತಲುಪಿದ್ದಾರೆ.

ಈ ಎರಡು ಅವಾಂತರಗಳ ಮಾಹಿತಿ ಪಡೆದ ಸಿಎಂ ಕುಮಾರಸ್ವಾಮಿ ಅಕ್ಷರಷಃ ಕನಲಿ ಕೆಂಡವಾಗಿದ್ದು ನೀಲಮಣಿ ರಾಜು ಅವರಿಗೆ ಸಖತ್ ತರಾಟೆ ತೆಗೆದುಕೊಂಡಿದ್ದಾರೆ. ಯಾಕೆ ನಿಮ್ಮ ಪೊಲೀಸರು ಹೀಗಾಡುತ್ತಾರೆ? ಅವರಿಗೆ ನನ್ನ ತಾಯಿ ಚೆನ್ನಮ್ಮನ ಪರಿಚಯ ಇಲ್ಲವೇ? ರಮೇಶ್ ಕುಮಾರ್ ಅವರನ್ನು ಗುರುತಿಸಲಾಗಲಿಲ್ಲವೇ? ಎಂದು ಪ್ರಶ್ನಿಸಿದ್ದಲ್ಲದೇ ಈ ಹಿಂದೆ ಮಮತಾ‌ಬ್ಯಾನರ್ಜಿಗೂ ಅವಮಾನ ಮಾಡಲಾಗಿದೆ. ಹೀಗಾಗಿ‌ನೀವು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಘಟನೆಯ ಸಂಪೂರ್ಣ ವರದಿ ನೀಡುವಂತೆಯೂ ಸಿಎಂ ಆದೇಶ ನೀಡಿದ್ದಾರೆ.
ಒಟ್ಟಿನಲ್ಲಿ ಸಿದ್ಧರಾಮಯ್ಯ ಕೃಪಾಕಟಾಕ್ಷದಿಂದ ಅಧಿಕಾರಕ್ಕೆ ಬಂದ ನೀಲಮಣಿರಾಜು ಅವರು ಸಿಎಂ ಕುಮಾರಸ್ವಾಮಿ ಅವಕೃಪೆಗೆ ಒಳಗಾಗಿದ್ದು ಆಗಾಗ ಪೊಲೀಸ್ ಇಲಾಖೆಯಿಂದ ನಡೆಯುತ್ತಿರುವ ಅವಾಂತರಗಳು ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿರೋದಂತು ಸತ್ಯ!

Leave a Comment