ರಾಜಕೀಯ ಸಿನೆಮಾ ಸುದ್ದಿಗಳು

ಮಂಡ್ಯದ ಗ್ರಾಮಸ್ಥರ ಪಾಲಿಗೆ ಬೆಳಕಾದ್ರು ಬಾಲಿವುಡ್ ಸುಂದರಿ ಆಲಿಯಾ ಭಟ್!

Views:
248

ಚಲನಚಿತ್ರಗಳಲ್ಲಿ ಬಡವರ ಸೇವಕರಂತೆ ಪಾತ್ರ‌ನಿರ್ವಹಿಸುವ ಕೆಲ ನಟ-ನಟಿಯರು ನಿಜ‌ಜೀವನದಲ್ಲೂ ಆದರ್ಶಗಳನ್ನು ಪಾಲಿಸುವ ಮೂಲಕ ಜನಮನ್ನಣೆ ಗಳಿಸುತ್ತಾರೆ. ಬಾಲಿವುಡ್ ನ ಉದಯೋನ್ಮುಖ ನಟಿ ಆಲಿಯಾ ಭಟ್‌ಕೂಡ ಇದಕ್ಕೆ ಹೊರತಲ್ಲ. ಹೌದು ಬಾಲಿವುಡ್ ನ ಈ ಬೆಡಗಿ ಕರ್ನಾಟಕದ ಜಿಲ್ಲೆಯೊಂದರ ಜನರ ಪಾಲಿಗೆ ಬೆಳಕಾಗಿದ್ದು ಜನಮೆಚ್ಚುಗೆ ಪಾತ್ರವಾಗಿದೆ.

ಸಿಲಿಕಾನ‌ಸಿಟಿ ಬೆಂಗಳೂರು‌ ಮೂಲದ ಎ.ಆರ್.ಓ.ಎಚ್.ಎ ಸಂಸ್ಥೆ ಪ್ಲಾಸ್ಟಿಕ್ ಬಾಟಲ್ ಗಳನ್ನು ಮರುಬಳಕೆ ಮಾಡಿಕೊಂಡು ವಿದ್ಯುತ್ ಇಲ್ಲದ ಹಳ್ಳಿಗಳಿಗೆ ಬೆಳಕು ಒದಗಿಸುವ ಕೆಲಸದಲ್ಲಿ ನಿರತವಾಗಿದೆ.

ಈ ಸಂಸ್ಥೆ ತಮ್ಮ ಕಾರ್ಯಕ್ರಮಕ್ಕೆ ಇನ್ನಷ್ಟು ಅನುದಾನ ಸಂಗ್ರಹಿಸುವ ನಿಟ್ಟಿನಲ್ಲಿ ಲಿಟರ್ ಆಫ್ ಲೈಟ್ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಆಲಿಯಾ ಭಟ್ ಸಂಸ್ಥೆಗೆ ಧನಸಹಾಯ ಮಾಡಿದ್ದಾರೆ.

ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್ ಕಾರ್ಯಕ್ರಮದ ಮೂಲಕ ಆಲಿಯಾ ತಮ್ಮ ಅಪಾರ ಪ್ರಮಾಣದ‌ ಡಿಸೈನರ್ ಬಟ್ಟೆಗಳನ್ನು ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಿದ್ದರು. ಇದರಲ್ಲಿ ಸಂಗ್ರಹವಾದ ಹಣವನ್ನು ಆಲಿಯಾ ಎ.ಆರ್.ಓ.ಎಚ್.ಎ ಸಂಸ್ಥೆಗೆ ನೀಡಿದ್ದಾರೆ. ಈ ಹಣದ ಸಹಾಯದಿಂದ ಮಂಡ್ಯ ಜಿಲ್ಲೆಯ ಅತ್ಯಂತ ಹಿಂದುಳಿದ ಕಿಕ್ಕೇರಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಆಲಿಯಾ ನೆರವಿನಿಂದ ಇದೀಗ ಇಲ್ಲಿಯ ೪೦ ಕುಟುಂಬಗಳಿಗೆ ವಿದ್ಯುತ್ ದೀಪ ಪಡೆಯುವ ಅದೃಷ್ಟ ಒಲಿದು ಬಂದಿದೆ. ಚಿಕ್ಕ ವಯಸ್ಸಿನಲ್ಲೇ ಆಲಿಯಾ ಕೈಗೊಂಡಿರುವ ಈ ಮಾನವೀಯ ಸೇವೆಗೆ ಎಲ್ಲ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Leave a Comment