ರಾಜಕೀಯ ಸುದ್ದಿಗಳು

ಬಜೆಟ್ ಅಧಿವೇಶನಕ್ಕೆ ಅಮಾವಾಸ್ಯೆ ಕಾಟ- ಮೌಡ್ಯ ನಿಷೇಧ ಮಾಡಿದವರೇ ಆಡಳಿತಕ್ಕಾಗಿ ಸಹಿಸಿಕೊಳ್ತಿದ್ದಾರಾ‌ ಅಂಧದರ್ಬಾರ?

Views:
47

ಈಗಾಗಲೇ ಸಾಲಮನ್ನಾ ಸೇರಿದಂತೆ ಹಲವು ಸವಾಲು ಎದುರಿಸುತ್ತಿರುವ ಸರ್ಕಾರ ಇದೀಗ ಅಧಿವೇಶನ ನಡೆಸುವ ಕಾಲಾವಧಿ ವಿಚಾರಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ.‌ಹೌದು ಬಜೆಟ್ ಅಧಿವೇಶನವನ್ನು ಆಷಾಢ ಹಾಗೂ ಅಮವಾಸ್ಯೆ ಕಾರಣ ನೀಡಿ ಮುಕ್ತಾಯಗೊಳಿಸಲಾಗುತ್ತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಹಲವು ಮಾಜಿ ಹಾಗೂ ಹಾಗೂ ಹಾಲಿ ಶಾಸಕರ ಅನುಭವದ ಪ್ರಕಾರ ವಿಧಾನಸಭೆಯ ಕಲಾಪ ಹಾಗೂ ಅಧಿವೇಶನಗಳನ್ನು ಸೋಮವಾರದಿಂದ ಶುಕ್ರವಾರದವರೆಗೂ ನಡೆಸಿ ಅಗತ್ಯವಿದ್ದಾಗ ಶುಕ್ರವಾರದಂದು ಅಧಿವೇಶನವನ್ನು ಸೋಮವಾರ ಕ್ಕೆ ಮುಂದೂಡುವುದು ವಾಡಿಕೆ. ಆದರೇ ಈ ಭಾರಿ ಬಜೆಟ್ ಅಧಿವೇಶನನ್ನು ೨ ನೇ ತಾರೀಕು ಸೋಮವಾರದಿಂದ ಆರಂಭಿಸಲಾಗಿದ್ದು, ಅದರಲ್ಲಿ ರಾಜ್ಯಪಾಲರ ಭಾಷಣ,ಅಗಲಿದ ಗಣ್ಯರಿಗೆ ಸಂತಾಪ ಸೇರಿ‌ ವಿವಿಧ ಚಟುವಟಿಕೆ ನಡೆದು, ಗುರುವಾರ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಲಿದ್ದಾರೆ. ಬಳಿಕ ೭ ದಿನಗಳ ಕಾಲ ಬಜೆಟ್ ಮೇಲೆ ಚರ್ಚೆ‌ಅನುಮೋದನೆ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆ ಗಳನ್ನು ೧೨ ರವರೆಗೆ ನಡೆಸಲು ತೀರ್ಮಾನಿಸಿದ್ದು ಗುರುವಾರವೇ ಅಧಿವೇಶನವನ್ನು ಮುಂದೂಡಲು ತೀರ್ಮಾನಿಸಾಗಿದೆ. ಇದಕ್ಕೆ ಮುಖ್ಯ ಕಾರಣ ಶುಕ್ರವಾರದ ಅಮಾವಾಸ್ಯೆ.

ಹೌದು ಜುಲೈ ೧೩ ರಂದು ಅಮಾವಾಸ್ಯೆಯಾಗಿದ್ದು ಅಂದಿನಿಂದ ಆಷಾಢ ಮಾಸ ಆರಂಭವಾಗೋದರಿಂದ ಸದನ ನಡೆಸೋದು ಬೇಡವೆಂದು ಜ್ಯೋತಿಷ್ಯದ ಮೇಲೆಯೇ ಸರ್ಕಾರ ಕಟ್ಟಿದ ಆಡಳಿತಾರೂಢ ಜೆಡಿಎಸ್ ನಿರ್ಧರಿಸಿದೆ. ಇದಕ್ಕೆ ಕಾಂಗ್ರೆಸ್ ಕೂಡ ಸಹಮತ ವ್ಯಕ್ತಪಡಿಸಿರೋದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಸದನಕ್ಕೂ ಅಮಾವಾಸ್ಯೆ ಭೀತಿ ತಟ್ಟಿರೋದು ತೀವ್ರ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಬಿಜೆಪಿ ನಾಯಕರು, ಹಲವು ಶಾಸಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಈ ಅಂಧಾದರ್ಬಾರಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ‌ಸಚಿವ ಹಾಗೂ ‌ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಕುಮಾರ್, ಜುಲೈ ೧೩ ರವರೆಗೆ ಅಧಿವೇಶನ ನಡೆಸಿ ಅಂದಿನ‌ ದಿನವನ್ನು ಶಾಸಕರಿಗೆ ಕ್ಷೇತ್ರದ ಸಮಸ್ಯೆ ಹಂಚಿಕೊಳ್ಳಲು ಅವಕಾಶ ನೀಡಬಹುದಾಗಿತ್ತು. ಆದರೇ‌ ಆಷಾಢ ಅಮಾವಾಸ್ಯೆ ಹಿನ್ನೆಲೆಯಲ್ಲಿ ಅಧಿವೇಶನ ಕೊನೆಗೊಳಿಸಲು ಸರ್ಕಾರ‌ ತೀರ್ಮಾನಿಸಿದೆ. ಇದು ಕರ್ನಾಟಕ‌ರಾಜ್ಯದ ಎಲ್ಲ ವಿಚಾರವಂತರ ಗಮನದಲ್ಲಿರಲಿ ಎಂದು ಟೀಕಿಸಿದ್ದಾರೆ .

ಅಲ್ಲದೇ ಕಾಂಗ್ರೆಸ್ ಕುರಿತು ವ್ಯಂಗ್ಯವಾಡಿರುವ ಸುರೇಶ್ ಕುಮಾರ್, ಸಮ್ಮಿಶ್ರ ಸರ್ಕಾರದ ಬಹುದೊಡ್ಡ ಭಾಗವಾಗಿರುವ ಕಾಂಗ್ರೆಸ್ಸಿಗೆ ತಾವು ತಂದಿರುವ ಮೌಡ್ಯ ನಿಷೇಧ ಕಾನೂನು ನೆನಪಿಗೆ ಬರುತ್ತಿಲ್ಲವೇ ಎಂದು ಟೀಕಿಸಿದ್ದಾರೆ.
ನಿಜವಾಗಿಯೂ ಕುಮಾರಸ್ವಾಮಿ ಸರ್ಕಾರ ಅಧಿವೇಶನದ ವಿಚಾರದಲ್ಲಿ ನಡೆದುಕೊಂಡ ರೀತಿ ಖಂಡನಾರ್ಹವಾಗಿದ್ದು ರಾಜ್ಯದ ನೂರಾರು ಪ್ರಚಲಿತ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಅಮಾವಾಸ್ಯೆ ಹೆಸರಲ್ಲಿ ಆಡಳಿತ ಯಂತ್ರ ಸ್ಥಗಿತಗೊಳಿಸಿದ್ದು ಮಾತ್ರ‌ ಯಾವುದೇ ಕಾರಣಕ್ಕೂ ಸಮರ್ಥಿನಿಯವಲ್ಲ.

Leave a Comment