ರಾಜಕೀಯ ಸುದ್ದಿಗಳು

ಅತೃಪ್ತರ‌ ಕನಸಿಗೆ ಆಷಾಢ ಅಡ್ಡಿ- ಸಂಪುಟ ವಿಸ್ತರಣೆ ಇನ್ನೆರಡು ತಿಂಗಳ ಬ್ರೇಕ್!

Views:
54

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರ ಒಳಗೊಳಗೆ‌ ಕುದಿಯುವ ಅಗ್ನಿಪರ್ವತದಂತಾಗಿದೆ. ಸಚಿವ ಸ್ಥಾನ ವಂಚಿತರು ಸಂಪುಟ ಸೇರುವ ಕನಸು ಹೊತ್ತು ಪ್ರತಿನಿತ್ಯ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಮನೆ ಬಾಗಿಲಿಗೆ ಎಡತಾಕುತ್ತಲೇ‌ಇದ್ದಾರೆ. ಹೀಗಿರುವಾಗಲೇ ಸಚಿವ ಸ್ಥಾನ ಆಕಾಂಕ್ಷಿತರ ಆಸೆಗೆ ಅಷಾಡಮಾಸ ಅಡ್ಡಗಾಲಾಗಿ ನಿಂತಿದ್ದು, ಸಚಿವ ಸಂಪುಟ ವಿಸ್ತರಣೆ ಮುಂದಿನ ಎರಡು ತಿಂಗಳ ಕಾಲ‌ ಮುಂದೂಡಿಕೆಯಾಗಿದೆ.

  
ಹೌದು ಕೆಲ ತಿಂಗಳ ಹಿಂದೆಯಷ್ಟೇ ಮೌಡ್ಯ ನಿಷೇಧ ಕಾಯಿದೆ ಜಾರಿಗೊಳಿಸಿದ ಕಾಂಗ್ರೆಸ್ ಸರ್ಕಾರ ಕೇವಲ ಅಧಿಕಾರದ‌‌‌ ಆಸೆಗಾಗಿ ಈಗ ಸಹಿ ಹಾಕೋದಿಕ್ಕೂ ಶಾಸ್ತ್ರ ನೋಡುವ ಜೆಡಿಎಸ್ ಜೊತೆ ಕೈಜೋಡಿಸಿ ಮುಜುಗರಕ್ಕೆ ಒಳಗಾಗಿದೆ. ಅಲ್ಲದೇ‌ ಜೆಡಿಎಸ್ ಬರಲಿರುವ ಆಷಾಢ ಮಾಸದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಮನಸ್ಸು ಮಾಡದೇ ಇರೋದರಿಂದ ಅನಿವಾರ್ಯವಾಗಿ ಕಾಂಗ್ರೆಸ್ ಕೂಡ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರೋದನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಿಸುತ್ತಿದೆ.
ಇನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಹೈಕಮಾಂಡ್ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ‌.


ಆಷಾಢಮಾಸವನ್ನು ಶುಭಕಾರ್ಯಗಳಿಗೆ ಸೂಕ್ತವಲ್ಲ ಎಂದು ಪರಿಗಣಿಸೋದರಿಂದ ಕಾಂಗ್ರೆಸ್‌ ಕೂಡ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಗೆ ಮನಸ್ಸು ಮಾಡಿದೆ.

ಇನ್ನು ಎರಡು ಪಕ್ಷಗಳ ಈ ನಿರ್ಧಾರದಿಂದ ಈಗಾಗಲೇ ಸಚಿವ ಸ್ಥಾನದಿಂದ ವಂಚಿತರಾಗಿ ಅಸಮಧಾನಗೊಂಡಿರುವ ಶಾಸಕರುಗಳು ಹಾಗೂ ಕಾಂಗ್ರೆಸ್ ಜೆಡಿಎಸ್ ನ ಹಿರಿಯ ನಾಯಕರು ಸಹಜವಾಗಿಯೇ ಬೇಸರಗೊಂಡಿದ್ದಾರೆ. ಜುಲೈ ೧೪ ರಿಂದ ಅಗಸ್ಟ್ ೧೧ ರವರೆಗೆ ಆಷಾಢಮಾಸವಿರೋದರಿಂದ ಅಗಸ್ಟ ಅಂತ್ಯ ಅಥವಾ ಸಪ್ಟೆಂಬರ್ ಮೊದಲ‌ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಎಮ್ ಎಲ್‌ಎಗಳ ಸಚಿವರಾಗುವ ಕನಸಿಗೆ ಎರಡು ತಿಂಗಳ‌ ಬ್ರೇಕ್ ಬಿದ್ದಿರೋದಂತು ನಿಜ

Leave a Comment