ಸುದ್ದಿಗಳು

ಕಾನೂನು ಸೌಲಭ್ಯ ಸರಳಗೊಳಿಸಲು ಸೂಪರ್ ಪ್ಲ್ಯಾನ್- ಬೆಂಗಳೂರು ಒನ್​ನಲ್ಲೇ ಅಗ್ರಿಮೆಂಟ್​ ಒದಗಿಸಲಿದೆ ಲೀಗಲ್ ಡೆಸ್ಕ್!

ಬೆಂಗಳೂರಿನಲ್ಲಿ ಮನೆಯನ್ನಾದರೂ ಸುಲಭವಾಗಿ ಕಟ್ಟಬಹುದು ಆದರೇ ಅಗ್ರಿಮೆಂಟ್​ ಮಾಡಿಕೊಳ್ಳೋದೇ ಕಷ್ಟ. ಆದರೇ ಇನ್ಮುಂದೆ ಈ ತಲೆನೋವಿಲ್ಲ. ಬೆಂಗಳೂರು ಮೂಲದ ಕಾನೂನು ತಜ್ಞರನ್ನ ಒಳಗೊಂಡ ಲೀಗಲ್​ ಡೆಸ್ಕ್​ ಎಂಬ ತಂಡವೊಂದು ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಮುಂಧಾಗಿದ್ದು, ಬೆಂಗಳೂರು ಒನ್​ ಸಹಯೋಗದೊಂದಿಗೆ ಆನ್​ಲೈನ್​ ಬಾಡಿಗೆ ಒಪ್ಪಂದಸೇವೆಯನ್ನು ಒದಗಿಸಲಿದೆ.

ಇದಕ್ಕಾಗಿ ಗ್ರಾಹಕರು ಮಾಡಬೇಕಾಗಿರೋದು ಇಷ್ಟೇ, ಹತ್ತಿರದ ಬೆಂಗಳೂರು ಒನ್​ ಸೆಂಟರ್​ಗೆ ಹೋಗಿ ಅಗತ್ಯ ವಿವರ ನೀಡಿ ಹಣ ಪಾವತಿಸಿ ದಾಖಲೆ ವಿಲೇವಾರಿ ಮಾಡಬೇಕಾಗಿರುವ ವಿಳಾಸ ನೀಡಬೇಕು. ಬಳಿಕ ಲೀಗಲ್ ಡೆಸ್ಕ್​ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಒಪ್ಪಂದ ಸೃಷ್ಟಿಸಲು, ಮುದ್ರಾಂಕ ಶುಲ್ಕ ಪಾವತಿಸಲು ಮತ್ತು ಗ್ರಾಹಕನರ ಮನೆ ಬಾಗಿಲಿಗೆ ಒಪ್ಪಂದದ ಪ್ರತಿಯನ್ನು ಪೊರೈಸುತ್ತದೆ.

 

ಇತ್ತೀಚಿಗೆ ಮಲ್ಲೇಶ್ವರಂನಲ್ಲಿ ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಅಶ್ವತ್ಥ ನಾರಾಯಣ ಹಾಗೂ ಚಿತ್ರನಟ ದಿಗಂತ ಚಾಲನೆ ನೀಡಿದರು. ಲೀಗಲ್ ಡೆಸ್ಕ್​.ಕಾಮ್ ತಂತ್ರಜ್ಞಾನ ಪ್ಲಾಟ್​ಫಾರಂ ಆಗಿದ್ದು, ದಾಖಲೆಯ ಪ್ರಕ್ರಿಯೆಗಳನ್ನು ಡಿಜಿಟಲೀಕರಣಕ್ಕೆ ನೆರವಾಗುತ್ತದೆ. ಈ ಸ್ಟಾರ್ಟಪ್​ ಡಿಐವೈ ಫ್ಲಾಟ್​ಪಾರ್ಂ ಆಗಿದ್ದು, ಗ್ರಾಹಕರು ಮತ್ತು ಕಾರ್ಪೋರೇಟ್​ಗಳಿಗೆ ಆನ್​ಲೈನ್​ನಲ್ಲಿ 100ಕ್ಕೂ ಹೆಚ್ಚು ಕಾನೂನು ದಾಖಲೆಗಳನ್ನು ಸಿದ್ದಪಡಿಸಲು ಮತ್ತು ಅವುಗಳನ್ನು ಆಧಾರ ಬಳಸಿ ಡಿಜಿಟಲಿ ಸಹಿ ಮಾಡಲು ನೆರವಾಗುತ್ತದೆ. ಈ ಲೀಗಲ್​ ಟೆಕ್ ಕಂಪನಿಯ ಮುಖ್ಯಕಚೇರಿಯೂ ಬೆಂಗಳೂರಿನಲ್ಲಿದ್ದು, ಚೈನೈ,ಕೊಲ್ಕತ್ತಾ,ಮುಂಬೈ ಮತ್ತು ದೆಹಲಿಯಲ್ಲಿ ಕಚೇರಿ ಹೊಂದಿದೆ. ಹೆಚ್ಚಿನ ಮಾಹಿತಿಗೆ ಅಶೋಕ್ ಕಡ್ಸೂರ್ ಸಹ-ಸಂಸ್ಥಾಪಕರು- 9845059982 ಸಂಪರ್ಕಿಸಬಹುದಾಗಿದೆ.

Leave a Comment