ಸುದ್ದಿಗಳು

ಹನಿಮೂನ್​ಗಾಗಿ ಫುಲ್​ ಟ್ರೇನ್​ ಬುಕ್​ – ಇಷ್ಟಕ್ಕೂ ಆ ದಂಪತಿಗಳು ಬಂದಿದ್ದೆಲ್ಲಿಂದ ಗೊತ್ತಾ?!

ಹನಿಮೂನ್ ಅಂದಾಕ್ಷಣ ಜನರು ಏಕಾಂತಕ್ಕೆ ಅವಕಾಶವಿರೋ, ಹಿಲ್​ ಸ್ಟೇಶನ್, ರೆಸಾರ್ಟ್​ಗಳತ್ತ ಮುಖಮಾಡ್ತಾರೆ. ಆದರೆ ಇಲ್ಲೊಂದು ಜೋಡಿ ತಮ್ಮ ಹನಿಮೂನ್​ನ್ನು ಸ್ಮರಣೀಯವಾಗಿಸೋಕೆ ರೈಲ್​ನಲ್ಲಿ ಹನಿಮೂನ್​ ಆಚರಿಸಿದೆ. ಹೌದು ದಂಪತಿಗಳ ಸ್ವರ್ಗ ಎನ್ನಿಸಿರೋ ಊಟಿಯಲ್ಲಿ ಯುನೈಟೆಡ್​​ ಕಿಂಗ್​​ ಡಮ್​ನಿಂದ ಬಂದ ಗ್ರಹಾಮ್​ ವಿಲಿಯಂ ಹಾಗೂ ಸಿಲ್ವಿಯಾ ಪ್ಲಾಸಿಕ್​​ ಹೀಗೆ ವಿಭಿನ್ನ ಹನಿಮೂನ್​ ಆಚರಿಸಿಕೊಂಡ ದಂಪತಿ.

ಯುನೆಸ್ಕೋ ಪಟ್ಟಿನಲ್ಲಿ ಸ್ಥಾನ ಪಡೆದ ತಮಿಳುನಾಡಿನ ನೀಲಗಿರಿ ಮೌಂಟನ್​ ರೇಲ್ವೆ ದಕ್ಷಿಣ ಸೇಲಂ ವಿಭಾಗದಲ್ಲಿ ನೀಲಗಿರಿ ಮೌಂಟನ್​ ರೇಲ್ವೆಯ ಚಾರ್ಟಡ್​​ ಸೇವೆ ಆರಂಭಿಸಿದೆ. ಇದನ್ನು ಬಳಸಿಕೊಂಡ ಈ ಯುನೈಟೆಡ್​​ ಕಿಂಗ್​ಡಮ್​ ದಂಪತಿ ತಮ್ಮ ಹನಿಮೂನ್ ಸವಿನೆನಪಿಗಾಗಿ ಸಿಟಿಸಿಯಿಂದ ತಮಗಾಗಿಯೇ ಸಂಪೂರ್ಣ ರೈಲ್​ ಬುಕ್​ ಮಾಡಿದ್ದರು.


ಮೆಟ್ಟುಪಾಳ್ಯಂನಿಂದ 48 ಕಿಲೋಮೀಟರ್ ದೂರವನ್ನು ರೇಲ್ವೆ ಕೇಟರಿಂಗ್ ಆ್ಯಂಡ್​ ಟೂರಿಸಮ್​ ಕಾರ್ಪೋರೇಶನ್​ನಿಂದ 2.5 ಲಕ್ಷ ರೂಪಾಯಿ ಪಾವತಿಸಿ ಬುಕ್​ ಮಾಡಿದ್ದ ದಂಪತಿ, ಸುತ್ತ ಹಸಿರಿನ ಪ್ರಶಾಂತ ಅದ್ಭುತವಾದ ನೀಲಗಿರಿ ಬೆಟ್ಟದ ಅಂಚಿನಲ್ಲಿ ಇಬ್ಬರೇ ಪ್ರಯಾಣಿಸಿ ಮಧುರ ಕ್ಷಣಗಳನ್ನು ಸವಿದರು.

 


ಇನ್ನು ನೀಲಗಿರಿ ಬೆಟ್ಟದ ನಡುವಿನ ಈ ಪ್ರಯಾಣ 13 ರೈಲು ಸುರಂಗಗಳು ಹಾಗೂ ದಟ್ಟ ಕಾಡುಗಳ ನಡುವೆ ಈ ಪ್ರಯಾಣ ಒಟ್ಟು 5.5 ಗಂಟೆಗಳದ್ದಾಗಿದ್ದು, ಕುನೂರು ರೇಲ್ವೆ ನಿಲ್ದಾಣದಲ್ಲಿ ಈ ದಂಪತಿಗಳನ್ನು ರೇಲ್ವೈ ಅಧಿಕಾರಿಗಳು ಸ್ವಾಗತಿಸಿದರು. ಇನ್ನು ಈ ಸುಂದರ ಪ್ರವಾಸದ ಅನುಭವವನ್ನು ಜಗತ್ತಿನಾದ್ಯಂತ ವಿಸ್ತರಿಸುವ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗಿದೆ ಎಂದು ರೇಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ಯಾಕೇ ತಡ ನೀವು ಇಂತಹ ಅನುಭವ ಪಡೆಯೋಕೆ ಮುಂಧಾಗಿ….ನಿಮ್ಮ ಮಧುಚಂದ್ರವನ್ನು ಸ್ಮರಣೀಯವಾಗಿಸಿ.

Leave a Comment