ಸಿನೆಮಾ ಸುದ್ದಿಗಳು

ಚಾಲೆಂಜಿಂಗ್ ಸ್ಟಾರ್ ಈಗ ಅರಣ್ಯ ಇಲಾಖೆಯ ರಾಯಭಾರಿ!! ಪರಿಸರ ದಿನಾಚರಣೆಗೆ ಬಿಡುಗಡೆಯಾಗಲಿದೆ ದರ್ಶನ ಪರಿಸರ ಕಾಳಜಿ ವಿಡಿಯೋ!!!

Views:
75

ಚಾಲೆಂಜಿಂಗ್ ಸ್ಟಾರ್ ದರ್ಶನ, ತಮ್ಮ ಚಿತ್ರಗಳ ಜೊತೆ-ಜೊತೆಗೆ ಹವ್ಯಾಸಗಳಿಂದಲೂ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಪ್ರಾಣಿ-ಪಕ್ಷಿಗಳನ್ನು ಸಾಕುವ ಹವ್ಯಾಸ ಹೊಂದಿರುವ ದರ್ಶನಗೆ ಕಾರುಗಳ ಮೇಲೂ ತುಂಬ ಕ್ರೇಜ್​ ಇದೆ. ಇಷ್ಟೇ ಅಲ್ಲ ಅರಣ್ಯಗಳ ಮೇಲೂ ದರ್ಶನಗೆ ತುಂಬ ಪ್ರೀತಿ ಇದೆ. ಹೀಗಾಗಿ ದರ್ಶನ ಈ ಹಿಂದೆ ಅರಣ್ಯಗಳನ್ನು ಕಾಡ್ಗಿಚ್ಚಿನಿಂದ ಕಾಪಾಡುವಂತೆ ಮನವಿ ಮಾಡಿದ್ದರು, ಈಗ ಪರಿಸರ ದಿನಾಚರಣೆ ಸಂದೇಶವನ್ನು ದರ್ಶನ ನೀಡಿದ್ದು, ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನರನ್ನು ಈ ಭಾರಿ ಅರಣ್ಯ ಇಲಾಖೆ ರಾಯಭಾರಿಯಾಗಿಯನ್ನಾಗಿ ಬಳಸಿಕೊಂಡಿದೆ. ವೃಕ್ಷಗಳನ್ನು ಉಳಿಸುವಂತೆ ದರ್ಶನ ಮನವಿ ಮಾಡಿದ್ದು ಈ ವಿಡಿಯೋವನ್ನು ನಾಗರಹೊಳೆ,ಬಂಡಿಪುರ,ಮಲೆಮಹದೇಶ್ವರ ಬೆಟ್ಟ ಸೇರಿದಂತೆ ಹಲವೆಡೆ ಶೂಟ್ ಮಾಡಲಾಗಿದ್ದು, ಜೂನ್​ 5 ಪರಿಸರ ದಿನಾಚರಣೆಯಂದು ಈ ವಿಡಿಯೋವನ್ನು ರಾಜ್ಯ ಅರಣ್ಯ ಇಲಾಖೆ ಬಿಡುಗಡೆ ಮಾಡಲಿದೆ.

 

ದರ್ಶನ ತಮ್ಮ ಮೈಸೂರಿನ ತೋಟದ ಮನೆಯಲ್ಲಿ ಸಾಕಷ್ಟು ಹಸಿರುಳಿಸುವ ಕೆಲಸವನ್ನು ಮಾಡಿದ್ದು, ವಿದೇಶದ ಪ್ರಾಣಿಗಳು ಸೇರಿದಂತೆ ಕುದುರೆಯನ್ನು ಸಾಕಿದ್ದಾರೆ. ಪರಿಸರದ ಬಗ್ಗೆ ದರ್ಶನಗಿರುವ ಕಾಳಜಿ ಗಮನಿಸಿಯೇ ಅರಣ್ಯ ಇಲಾಖೆ ದರ್ಶನರನ್ನು ಈ ಭಾರಿ ರಾಯಭಾರಿಯಂತೆ ಬಳಸಿಕೊಂಡಿದೆ. ಇನ್ನು ದರ್ಶನ ಅಭಿಮಾನಿಗಳು ಈ ವಿಡಿಯೋಗಾಗಿ ಕಾದಿದ್ದಾರೆ.

Leave a Comment