ರಾಜಕೀಯ ಸುದ್ದಿಗಳು

ಕುಮಾರನ ಚಿತ್ತ ರಾಮನಗರದತ್ತ- ಇದು ಚುನಾವಣೆ ಸಿದ್ಧತಾ ಭೇಟಿ!

Views:
330

ರಾಜ್ಯದ ಕಷ್ಟಗಳಿಗೆ ಮಿಡಿಯುವ ಮೊದಲೇ ತಮ್ಮ ಸಂಕಷ್ಟವನ್ನು ಸದಾಹೈಲೈಟ್ ಮಾಡಿಕೊಳ್ಳುತ್ತ ಸಾಗುತ್ತಿರುವ ಮುಖ್ಯಮಂತ್ರಿ ಮೊನ್ನೇ ಕಣ್ಣೀರಿಟ್ಟು ಸುದ್ದಿಯಾದ ಬೆನ್ನಲ್ಲೇ ಇಂದು ತಮ್ಮ ಸ್ವ ಕ್ಷೇತ್ರ ರಾಮನಗರದತ್ತ ಮುಖಮಾಡಿದ್ದಾರೆ. ಅಧಿಕೃತವಾಗಿ ಇದು ಸಿಎಂ ಕ್ಷೇತ್ರ ಭೇಟಿಯಾಗಿದ್ದರೂ ಅನಧಿಕೃತವಾಗಿ ಇದು ರಾಮನಗರದ ಚುನಾವಣಾ ಸಿದ್ಧತಾ ಭೇಟಿ ಎಂಬುದನ್ನು ತಳ್ಳಿಹಾಕುವಂತಿಲ್ಲ.

 

ಹೌದು ರಾಜಕೀಯದ ಚಾಣಕ್ಯ ಎಂದೇ ಕರೆಸಿಕೊಳ್ಳುವ‌ ದೇವೆಗೌಡರ ಪ್ರೀತಿಯ ಪುತ್ರ ಕುಮಾರಸ್ವಾಮಿ ಕೂಡ ತಂದೆಯ ಗರಡಿಯಲ್ಲೇ ಪಳಗಿದವರು.ಹೀಗಾಗಿ ರಾಜಕೀಯ ದಾಳ ಉರುಳಿಸುವುದು ಅವರಿಗೆ ಕರಗತವಾಗಿದೆ. ಈ ದಾಳದ ಮುಂದಿನ ಟಾರ್ಗೆಟ್ ರಾಮನಗರ. ಹೌದು ಪತ್ನಿ ಅನಿತಾ ಕುಮಾರಸ್ವಾಮಿಯನ್ನು ಶತಾಯ ಗತಾಯ ಶಾಸಕಿಯನ್ನಾಗಿ ಮಾಡಬೇಕೆಂಬ ಹಟ ಹೊತ್ತಿರುವ ಕುಮಾರಸ್ವಾಮಿ ಜಿಲ್ಲಾ ಜನತಾದರ್ಶನದ ನೆಪದಲ್ಲಿ ರಾಮನಗರಕ್ಕೆ ಮೊದಲು ಕಾಲಿಡುವ ಮೂಲಕ ಚುನಾವಣೆ ಸಿದ್ಧತೆ ಆರಂಭಿಸಿದ್ದಾರೆ.

ಚುನಾವಣೆ ವೇಳೆಯಲ್ಲಿ ತಾವು ಸಿಎಂ ಆದರೇ ಪ್ರತಿಜಿಲ್ಲೆಯಲ್ಲೂ ಜನತಾದರ್ಶನ ನಡೆಸಿ ಬಡವರಿಗೆ ನೆರವಾಗುವ ಭರವಸೆ ನೀಡಿದ್ದರು. ಅದರಂತೆ ಮೊದಲ‌ ಜನತಾ ದರ್ಶನವನ್ನು ರಾಮನಗರದಿಂದ ಆರಂಭಿಸಲು ನಿರ್ಧರಿಸಿದ್ದು ಸೋಮವಾರ ರಾಮನಗರಕ್ಕೆ ತೆರಳಿದ್ದಾರೆ.

ಮೊದಲು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಿರುವ ಸಿಎಂ ಕುಮಾರಸ್ವಾಮಿ ಬಳಿಕ ಜನತಾ ದರ್ಶನ ಕೂಡ ನಡೆಸಲಿದ್ದಾರೆ. ಇವರಿಗೆ ಸಚಿವ ಡಿ.ಕೆ.ಶಿವಕುಮಾರ್ ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಈ ಮಧ್ಯೆ ಭೇಟಿ ಮೂಲ‌ಉದ್ದೇಶ ಪತ್ನಿಗೆ ರಾಮನಗರದ ಉಪಚುನಾವಣೆಯಲ್ಲಿ ಟಿಕೇಟ್ ನೀಡುವ ವಿಚಾರದ ಬಗ್ಗೆ ಸ್ಥಳೀಯ ಮುಖಂಡರ ಜೊತೆ ಚರ್ಚಿಸುವುದಾಗಿದ್ದು, ಅಚರ ಮನವೊಲಿಸಿ ಪತ್ನಿಯ ಸ್ಥಾನ ಭದ್ರಪಡಿಸಲು ಸಿಎಂ ಕುಮಾರಸ್ವಾಮಿ ಈ ಸರ್ಕಸ್ ನಡೆಸಿದ್ದಾರೆ ಎನ್ನಲಾಗುತ್ತಿದೆ.


ಚುನಾವಣೆ ವೇಳೆಯೇ ಅನಿತಾ ಕುಮಾರಸ್ವಾಮಿಗೆ ಸೀಟು ನೀಡಿದರೇ ಅದು ಕುಟುಂಬದ ಇತರ ಟಿಕೇಟ್ ಆಕಾಂಕ್ಷಿಗಳಾದ ಭವಾನಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಬೇಸರ ತರೋ ಸಾಧ್ಯತೆಗಳಿತ್ತು.‌ಹೀಗಾಗಿ ಆ ವೇಳೆ ಇಬ್ಬರಿಗೆ ಟಿಕೇಟ್ ಎಂಬ ಮಾತಿಗೆ ಬದ್ಧರಾಗಿದ್ದಂತೆ ನಟಿಸಿ ಈಗ ರಾಮನಗರದ ಮೂಲಕ ಗೌಡ್ರು ತಮ್ಮ ಸೊಸೆಯನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸುವ ಪ್ರಯತ್ನ ನಡೆಸಿದ್ದಾರೆ ಅದಕ್ಕೆ ಪೂರಕವಾಗಿ ಸಿಎಂ ಕುಮಾರಸ್ವಾಮಿ ಇಂದು ರಾಮನಗರದತ್ತ ಹೆಜ್ಜೆ ಹಾಕಿದ್ದಾರೆ.
ರಾಜ್ಯದ‌ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಆ ಸ್ಥಳಗಳಿಗೆ ಭೇಟಿ ನೀಡುವ ಬದಲು ಸಿಎಂ ಮೊದಲೇ ರಾಮನಗರವನ್ನು ಆಯ್ಕೆ‌ಮಾಡಿಕೊಂಡಿರೋದು ಈ ವಾದಕ್ಕೆ ಪುಷ್ಠಿ ನೀಡುತ್ತಿದೆ. ಹೀಗಾಗಿ ‌ರಾಮನಗರದಲ್ಲಿ ಗೌಡ್ರ ಕುಟುಂಬ ರಾಜಕಾರಣದ ಇನ್ನೊಂದು ಕವಲು ಟಿಸಿಲೊಡೆಯುವ‌ ಮುನ್ಸೂಚನೆ ದೊರೆತಂತಾಗಿದೆ.

Leave a Comment