ಅಪರಾಧ ರಾಜಕೀಯ ವಿಡಿಯೋ ಸುದ್ದಿಗಳು

ಬಿಜೆಪಿಗೆ ಸಂಬಂಧವಿಲ್ಲದ ಜನಾರ್ದನ ರೆಡ್ಡಿಗೆ ಅಮಿತ್ ಷಾ ಸಂಬಂಧ ? ಷಾ ಹೆಸರಲ್ಲಿ ಕೈ ಶಾಸಕರ ಡೀಲ್- ಅಡಿಯೋ ರಿಲೀಸ್

Views:
65

ಈಗಾಗಲೇ ಸರ್ಕಾರ ರಚನೆಗೆ ಅಂತಿಮ ಕಸರತ್ತು ನಡೆಸಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್​ ತನ್ನ ಕೊನೆಯ ಬ್ರಹ್ಮಾಸ್ತ್ರ ಬಳಸಿದೆ. ಹೌದು ಬಿಜೆಪಿ ಬಹುಮತ ಸಾಬೀತು ಪಡಿಸಲು ಶಾಸಕರ ಬೆಂಬಲ ಪಡೆಯಲು ಇನ್ನಿಲ್ಲದ ಸರ್ಕಸ್​ ನಡೆಸಿದೆ. ಇನ್ನು ಬಿಜೆಪಿ ಪರವಾಗಿ ಕಣಕ್ಕಿಳಿದಿರುವ ಗಣಿಧಣಿ ಜನಾರ್ಧನ ರೆಡ್ಡಿ, ಕಾಂಗ್ರೆಸ್​ ಶಾಸಕರೊಬ್ಬರ ಬಳಿ ನಡೆಸಿರುವ ಡೀಲ್​ ಆಡಿಯೊವೊಂದನ್ನು ಕಾಂಗ್ರೆಸ್​ ನಾಯಕ ಉಗ್ರಪ್ಪ ಬಿಡುಗಡೆಗೊಳಿಸಿದ್ದು, ಈ ಡೀಲ್​ ರಾಜಕಾರಣದ ಸಾಕ್ಷಿ ನೋಡಿ ರಾಜ್ಯವೇ ಬೆಚ್ಚಿಬಿದ್ದಿದೆ.
ಹೌದು ಅತ್ತ ನಾಳೆ 11 ಗಂಟೆಗೆ ಬಹುಮತ ಸಾಬೀತು ಪಡಿಸಲು ಬಿಜೆಪಿ ಶತಾಯ-ಗತಾಯ ಪ್ರಯತ್ನ ನಡೆಸುತ್ತಿದ್ದರೇ ಇತ್ತ ಕಾಂಗ್ರೆಸ್ ನಾಯಕ ಉಗ್ರಪ್ಪ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ, ಜನಾರ್ಧನ ರೆಡ್ಡಿ ಕಾಂಗ್ರೆಸ್​ನ ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ್ ಜೊತೆ ನಡೆಸಿದ ಸಂಭಾಷಣೆಯ ಆಡಿಯೋವೊಂದನ್ನು ವಂದನ್ನು ಬಿಡುಗಡೆ ಮಾಡಿದ್ದಾರೆ.

 

ಈ ಆಡಿಯೋದಲ್ಲಿ ಜನಾರ್ಧನ ರೆಡ್ಡಿ ಮಾತುಕತೆ ಸ್ಪಷ್ಟವಾಗಿದ್ದು, ಬಸನಗೌಡ್​ ಅವರಿಗೆ ಒಳ್ಳೆಯ ಸ್ಥಾನಮಾನ ನೀಡುವ ಆಮಿಷವೊಡ್ಡಿ ಬಿಜೆಪಿಗೆ ಆಹ್ವಾನಿಸಿದ್ದಾರೆ. ಆದರೇ ಬಸನಗೌಡ್​ ಇದನ್ನು ನಿರಾಕರಿಸಿದ್ದಾರೆ. ಆದರೂ ಪಟ್ಟು ಬಿಡದ ರೆಡ್ಡಿ ಅವರಿಗೆ ರಾಜೂ ನಾಯಕ್, ಶಿವನಗೌಡ್ ನಾಯಕ ಸೇರಿದಂತೆ ಹಲವರ ಉದಾಹರಣೆ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇದೀಗ ಈ ಆಡಿಯೋ ಬಿಡುಗಡೆ ಮಾಡಿರುವ ನಾಯಕ ಉಗ್ರಪ್ಪ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ರಾಜಭವನವನ್ನು ಬಿಜೆಪಿ ಕಚೇರಿ ಮಾಡಿಕೊಂಡಿರುವ ನಾಯಕರು ನಮ್ಮ ಶಾಸಕರನ್ನು 100 ಕೋಟಿ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಈ ಆಡಿಯೋವೇ ಸಾಕ್ಷಿ. ಕೇವಲ ಇದು ಮಾತ್ರವಲ್ಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಾಸಕರೊಂದಿಗೆ ನಡೆಸಿದ ಮಾತುಕತೆಯ ಆಡಿಯೋ ಕೂಡ ಇದೆ. ಅದನ್ನು ಸಧ್ಯದಲ್ಲೇ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಡೋಲಾಯಮಾನ ಭವಿಷ್ಯದ ಭೀತಿಯಲ್ಲಿರುವ ಬಿಜೆಪಿಗೆ ಈ ಆಡಿಯೋ ಮತ್ತಷ್ಟು ನಷ್ಟ ತಂದೊಡ್ಡುವ ಭೀತಿ ಸೃಷ್ಟಿಯಾಗಿದೆ.

Leave a Comment