ರಾಜಕೀಯ ಸುದ್ದಿಗಳು

ಬಹುಮತ ಸಿಗದಿದ್ದರೇ ಸಾಮೂಹಿಕ ರಾಜೀನಾಮೆ? – ಕೈ-ತೆನೆ ಅಧಿಕಾರ ತಪ್ಪಿಸಲು ಸಿದ್ಧವಾಗಿದ್ಯಾ ಮಾಸ್ಟರ್​​ ಪ್ಲ್ಯಾನ್​?!

Views:
128

ಬಹುಮತ ಪಡೆಯುವಲ್ಲಿ ಬಹುತೇಕ ವಿಫಲವಾದಂತೆ ಕಂಡುಬರುತ್ತಿರುವ ಬಿಜೆಪಿ ಮುಂದಿನ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ವಿಧಾನಸಭೆಯ ಮಧ್ಯಾಹ್ನದ ಕಲಾಪ ಆರಂಭವಾಗಿದ್ದು, ಸಂಪ್ರದಾಯದಂತೆ ಬಿಎಸ್​ವೈ ಭಾಷಣ ಮಾಡಿ ಬಳಿಕ ವಿಶ್ವಾಸ ಮತ ಯಾಚಿಸಬೇಕು. ಆದರೇ ಬಹುತೇಕ ಭಾಷಣದ ಬಳಿಕ ಬಿಎಸ್​ವೈ ರಾಜೀನಾಮೆ ಪ್ರಕಟಿಸಲಿದ್ದು, ರಾಜಭವನಕ್ಕೆ ತೆರಳುತ್ತಾರೆ ಎನ್ನಲಾಗುತ್ತಿದೆ.

  

ಹೌದು ಬಿಎಸ್​ವೈ ನೇತೃತ್ವದ ಬಿಜೆಪಿ 104 ಸೀಟ್​ಗಳನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಆದರೇ ಉಳಿದ ಸೀಟುಗಳನ್ನು ಹೊಂದಿಸಿ ಸರ್ಕಾರ ರಚಿಸುವಲ್ಲಿ ಬಿಜೆಪಿ ವಿಫಲವಾದಂತೆ ತೋರುತ್ತಿದೆ. ಹೀಗಾಗಿ ಅಧಿಕಾರ ಕಳೆದುಕೊಳ್ಳುವ ಬಿಜೆಪಿ ರಣತಂತ್ರ ಕ್ಕೆ ಮುಂಧಾಗಿದ್ದು, ಬಿಜೆಪಿಯ ಚುನಾಯಿತ ಎಮ್​ಎಲ್​ಎಗಳೆಲ್ಲರೂ ಒಂದೇ ಸಲ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಇದರಿಂದ ಬಹುದೊಡ್ಡ ಪಕ್ಷವಾಗಿ ಹೊಮ್ಮಿರುವ ಬಿಜೆಪಿ ರಾಜೀನಾಮೆಯಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ. ಅಲ್ಲದೇ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರ ರಚನೆಗೂ ಈ ಸಾಮೂಹಿಕ ರಾಜೀನಾಮೆ ಅಡ್ಡಿಯಾಗಲಿದೆ. ಇದರಿಂದ ರಾಜ್ಯದ ಆಡಳಿತ ಕೇಂದ್ರದ ಕೈ ಸೇರುವ ಸಾಧ್ಯತೆಯೂ ಇದೆ.

ಹೀಗಾಗಿಯೇ ಬಿಜೆಪಿ ವರಿಷ್ಠರ ಸೂಚನೆಯಂತೆ ಒಮ್ಮೆ ಬಹುಮತ ಸಾಬೀತುಪಡಿಸಲು ವಿಫಲವಾದರೇ ರಾಜೀನಾಮೆ ತಂತ್ರ ಅನುಸರಿಸಲಿದೆ ಎನ್ನಲಾಗುತ್ತಿದೆ. ನಿನ್ನೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿಸ ಶಾಸಕ ಸಿ.ಟಿ.ರವಿ ಕೂಡ ಈ ಬಗ್ಗೆ ಮುನ್ಸೂಚನೆ ನೀಡಿದ್ದು, ಸರ್ಕಾರ ರಚನೆ ಸಾಧ್ಯವಾಗದಿದ್ದರೇ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಒಟ್ಟಿನಲ್ಲಿ ಬಿಜೆಪಿ ಅಷ್ಟು ಸುಲಭದಲ್ಲಿ ಸೋಲೋಪ್ಪಿಕೊಳ್ಳದೇ ಪ್ರತಿತಂತ್ರ ಸಿದ್ಧಪಡಿಸಿರೋದಂತು ಸ್ಪಷ್ಟ. ಇನ್ನೇನು ಕೆಲವೇ ಗಂಟೆಗಳಲ್ಲಿ ಈ ರಾಜಕೀಯ ಮೇಲಾಟದ ಚಿತ್ರ ಸ್ಪಷ್ಟವಾಗುವ ಭರವಸೆ ಇದೆ.

Leave a Comment