ಸಿನೆಮಾ ಸುದ್ದಿಗಳು

ದುನಿಯಾ ವಿಜಿ ಮಗ ಸಿನೆಮಾಕ್ಕೆ ಬರಲು ಭರ್ಜರಿ ತಯಾರಿ. ಈ ಪೋರನ ಗುರು ಯಾರು ಗೊತ್ತಾ? exclusive photos

Views:
82

ಅದ್ಯಾಕೋ ಗೊತ್ತಿಲ್ಲ ಕರಿ ಚಿರತೆ ದುನಿಯಾ ವಿಜಯ್ ಅಭಿನಯದ ಇತ್ತೀಚಿನ ಚಿತ್ರಗಳ್ಯಾವುದು ಅಷ್ಟೊಂದು ಸದ್ದು ಮಾಡಲೇ ಇಲ್ಲ. ಇವೆಲ್ಲದರ ಮಧ್ಯೆ ಈಗ ದುನಿಯಾ ವಿಜಿ ತಮ್ಮ ಹೊಸ ಚಿತ್ರ ಕುಸ್ತಿ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದ್ದಾರೆ. ಈ ಚಿತ್ರದಲ್ಲೊಂದು ವಿಶೇಷತೆಯಿದೆ ಅದೇನು ಗೊತ್ತಾ? ಕರಿಚಿರತೆ ತಮ್ಮ ಉತ್ತರಾಧಿಕಾರಿಯಾಗಿರುವ ಪುತ್ರ ಸಾಮ್ರಾಟ್​ನನ್ನು ಚಿತ್ರದ ಮೂಲಕ ಹಿರಿತೆರೆಗೆ ತರುತ್ತಿದ್ದಾರೆ. ಹೌದು ಸಾಮ್ರಾಟ್ ವಿಜಯ್​ ಈ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂಧಾಗಿದ್ದು, ಅದಕ್ಕಾಗಿ ಸಾಮ್ರಾಟ್​ ವಿಜಯ್ ನಡೆಸಿರುವ ವರ್ಕೌಟ್​ ನೋಡಿದ್ರೇ ನಿಮ್ಮ ನಡುಗೋದು ಗ್ಯಾರಂಟಿ.

 

ಬೇಸಿಗೆ ರಜೆಯಲ್ಲಿ ಆರಾಂ ಊಟ ಮಾಡ್ಕೊಂಡು, ಆಟ ಆಡ್ಕೊಂಡು ಇರಬೇಕಾದ ದುನಿಯಾ ವಿಜಿ ಮಗ ಸಾಮ್ರಾಟ್​​​ ದುನಿಯಾ ವಿಜಿ ಜಿಮ್​ನಲ್ಲಿ ಬ್ಯುಸಿಯಾಗಿದ್ದರು. ಹಾಗಿದ್ರೆ ಅಪ್ಪನ ಜಿಮ್​ ಮಗ ಸಾಮ್ರಾಟ್​ ಆಟ ಆಡ್ತಿದ್ದಾನೆ ಅಂದ್ರಾ? ಖಂಡಿತಾ ಇಲ್ಲ, ದುನಿಯಾ ವಿಜಿ ತಮ್ಮ ಹೊಸ ಚಿತ್ರ ಕುಸ್ತಿಯಲ್ಲಿ ಮಗನನನ್ಉ ಇಂಡಸ್ಟ್ರಿಗೆ ಪರಿಚಯಿಸುತ್ತಿದ್ದು, ಇದಕ್ಕಾಗಿ ವಿಜಿ ಮಗ ಸಾಮ್ರಾಟ್​, ತಂದೆಯಷ್ಟೇ ಕಠೋರವಾಗಿ ವರ್ಕೌಟ್​ ಮಾಡುತ್ತಿದ್ದ. ಆತನ ವರ್ಕೌಟ್​ ವಿಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳ್ತಿರಿ.


ಸಾಮ್ರಾಟ್​ಗೆ ಸ್ವತಃ ದುನಿಯಾ ವಿಜಿನೇ ನಿಂತು ವ್ಯಾಯಾಮ ಮಾಡಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟ ಬಾಡಿ ಬಿಲ್ಡರ್​, ಪ್ರಸಾದ್ ಸಾಮ್ರಾಟ್ನ ಫಿಟ್ ನೆಸ್ ನೋಡಿಕೊಳ್ಳುತ್ತಿದ್ದರೇ, ಲೋಕೇಶ್ ಜಿಮ್ಯಾಸ್ಟಿಕ್ ಟ್ರೈನಿಂಗ್ ಕೊಡುತ್ತಿದ್ದಾರೆ. ಇನ್ನು ದಾವಣಗೆರೆ ಮೂಲದ ಕಾರ್ತಿಕ್ ಕಾಟೆ, ಅಪ್ಪಾಸಿ ತೇರದಾಳ್ , ಬೀರೇಶ್ ಕುಸ್ತಿ ತರಬೇತಿ ನೀಡುತ್ತಿದ್ದಾರೆ. ಸಾಮ್ರಾಟ್ ಕೆಲವೊಮ್ಮೆ ವ್ಯಾಯಾಮ ಮಾಡಲಾಗದೇ ಮೈಕೈ ನೋವಿನಿಂದ ಕಣ್ಣಿರು ಹಾಕಿದ್ರೂ ದುನಿಯಾ ವಿಜಿ ಬಿಡದೇ ವರ್ಕೌಟ್ ಮಾಡಿಸಿದ್ದಾರೆ.


ಸಾಮ್ರಾಟ್​ಗೆ ವರ್ಕೌಟ್​ ಜೊತೆ ಆಹಾರ, ಹಣ್ಣು, ಟೆಸ್ಟಿ ಹಾಗೂ ಹೆಲ್ದಿ ಫುಡ್​ ಕೊಡೋ ಜವಾಬ್ದಾರಿಯನ್ನು ದುನಿಯಾ ವಿಜಿ ಹೊತ್ತಿದ್ದಾರೆ. ಇನ್ನೆರಡು-ಮೂರು ತಿಂಗಳಲ್ಲಿ ಚಿತ್ರ ಪೂರ್ಣವಾಗಲಿದೆ. ಬೆಳಗ್ಗೆ 6 ಗಂಟೆಯಿಂದ ಎರಡು ತಾಸು ಕಾಲ ವ್ಯಾಯಾಮ ಮಾಡೋ ಸಾಮ್ರಾಟ್​ ಸಂಜೆ 4 ಗಂಟೆಯಿಂದ ಮತ್ತೆ ವರ್ಕೌಟ್​ ಶುರು ಮಾಡ್ತಾನಂತೆ. ಸತತ ಸೋಲುಗಳಿಂದ ಕಂಗಾಲಾಗಿರೋ ದುನಿಯಾ ವಿಜಿಗೆ ಈ ಚಿತ್ರ ಅತ್ಯಂತ ಪ್ರಮುಖವಾಗಿದೆ. ಅಲ್ಲದೇ ಮಗನನ್ನು ಚಿತ್ರರಂಗಕ್ಕೆ ತರಲು ಹೊರಟಿರುವ ದುನಿಯಾ ವಿಜಿ ಈ ಚಿತ್ರಕ್ಕಾಗಿ ಇನ್ನಿಲ್ಲದ ಸರ್ಕಸ್ ನಡೆಸಿದ್ದು, ಕುಸ್ತಿ ಚಿತ್ರದ ಪೋಸ್ಟರ್​ ಕೂಡ ಭರ್ಜರಿಯಾಗಿಯೇ ಮೂಡಿಬಂದಿದೆ. ಚಿತ್ರ ಹೇಗಿರುತ್ತೆ ಕಾದು ನೋಡಬೇಕು….!

Leave a Comment