ಸಿನೆಮಾ ಸುದ್ದಿಗಳು

ದಿ ವಿಲನ್ ಹೇಗಿದೆ ಸುದೀಪ್ – ಶಿವಣ್ಣ ಲುಕ್? ನೀವೆ ನೋಡಿ!

ಕರುನಾಡಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಹಾಗೂ ಕರುನಾಡ ಚಕ್ರವರ್ತಿ ಖ್ಯಾತಿಯ ಹ್ಯಾಟ್ರಿಕ್​ ಹಿರೋ ಶಿವಣ್ಣ ಒಂದಾಗಿ ನಟಿಸ್ತಾ ಇರೋ ಚಿತ್ರವೇ ದಿ ವಿಲನ್​​. ಸ್ಯಾಂಡಲವುಡ್​​​ ಇಬ್ಬರು ಸ್ಟಾರ್​ ನಟರು ನಟಿಸುತ್ತಿರುವ ಚಿತ್ರ ಬಾಕ್ಸಾಪೀಸ್​ನಲ್ಲಿ ಮೋಡಿ ಮಾಡುವ ಭರವಸೆ ಮೂಡಿಸಿದ್ದು, ಶಿವಣ್ಣ ಮತ್ತು ಸುದೀಪ ಫ್ಯಾನ್ಸ್​​ ಥ್ರಿಲ್​ ಆಗಿದ್ದಾರೆ. ಇನ್ನು ಇತ್ತೀಚಿಗೆ ಬಿಡುಗಡೆಯಾದ ಈ ಚಿತ್ರದಲ್ಲಿನ ಶಿವಣ್ಣ ಹಾಗೂ ಸುದೀಪ್ ಲುಕ್​ ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ದಿ ವಿಲನ್​ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ತೆರೆ ಮೇಲೆ ಒಂದಾಗಿರುವ ಶಿವಣ್ಣ-ಸುದೀಪ್ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕನ್ನಡದ ಖಾಸಗಿ ಚಾನೆಲ್​ನಲ್ಲಿ ಹ್ಯಾಟ್ರಿಕ್ ಹಿರೋ ಶಿವಣ್ಣ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಸುದೀಪ್​ ಅತಿಥಿಯಾಗಿ ಭಾಗವಹಿಸಿದ್ದು, ಇದೇ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರೇಮ್ ವಿಲನ್​ ಚಿತ್ರದಲ್ಲಿನ ಶಿವಣ್ಣ-ಸುದೀಪ್ ಫಸ್ಟ್​ ಲುಕ್​ ರಿಲೀಸ್​ ಮಾಡಿದ್ದಾರೆ.

ಚಿತ್ರದ ಹೆಸರಿಗೆ ತಕ್ಕಂತೆ ಶಿವಣ್ಣ ಹಾಗೂ ಸುದೀಪ್ ಸಖತ್ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕಪ್ಪು ಬಣ್ಣದ ನಿಲುವಂಗಿಯಲ್ಲಿ ಮಿಂಚುತ್ತಿದ್ದು, ಈ ಸ್ಟಿಲ್ಸ್​ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಚಿತ್ರದಲ್ಲಿ ಯಾರು ಹೀರೋ? ಯಾರು ವಿಲನ್ ಎಂಬುದನ್ನು ನಿರ್ದೇಶಕರಾದ ಪ್ರೇಮ್​ ರಿಲೀವ್​ ಮಾಡಿಲ್ಲ. ಚಿತ್ರ ನೋಡಿದ ಬಳಿಕ ಪ್ರೇಕ್ಷಕರೇ ಹಿರೋ ಯಾರು ಎಂಬುದನ್ನು ನಿರ್ಧರಿಸಲಿ ಅಂತಾರೆ ಪ್ರೇಮ.
ಇನ್ನು ಪ್ರೇಮ ನಿರ್ದೇಶನದ ಈ ಚಿತ್ರದಲ್ಲಿ ದಿ ವಿಲನ್’ ಚಿತ್ರದಲ್ಲಿ ಸುದೀಪ್, ಶಿವರಾಜ್ ಕುಮಾರ್ ಜೊತೆಗೆ ಆಮಿ ಜಾಕ್ಸನ್ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನು ಸುದೀಪ ಹಾಗೂ ಶಿವಣ್ಣ ಒಟ್ಟಿಗೆ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಇಬ್ಬರು ನಟ ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

Leave a Comment