Uncategorized ರಾಜಕೀಯ ಸುದ್ದಿಗಳು

ಎಚ್ ಡಿ ರೇವಣ್ಣ ಹೃದಯಕ್ಕೊಂದು ಪರಿಹಾರ ಬೇಕಿದೆ – ಮಳೆ ಪರಿಹಾರಕ್ಕಿಂತ ತುರ್ತಾಗಿ

ಸದಾಕಾಲ ಒಂದಿಲ್ಲೊಂದು ಎವಟ್ಟುಗಳಿಂದಲೇ ಸುದ್ದಿಯಾಗೋ ಕರ್ನಾಟಕದ ಸೂಪರ್ ಸಿಎಂ ಖ್ಯಾತಿಯ ಎಚ್.ಡಿ.ರೇವಣ್ಣ ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆದಿದ್ದಾರೆ. ನೆರೆ ಸಂತ್ರಸ್ಥರನ್ನು ಭೇಟಿ ಮಾಡಲು ಹೋದ ರೇವಣ್ಣ, ಸಂತ್ರರಿಗೆ ಹಂಚಲು ತರಲಾದ ಬಿಸ್ಕಿಟ್​​ಗಳನ್ನು ಜನರೆಡೆಗೆ ಎಸೆದು ಅವಾಂತರ ಸೃಷ್ಟಿಸಿದ್ದು, ಸಚಿವರೊಬ್ಬರ ಈ ಅವಮಾನಕರ ವರ್ತನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

ಹಾಸನದ ರಾಮನಾಥಪುರದಲ್ಲಿ ಸಂತ್ರಸ್ಥರ ಭೇಟಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭೇಟಿ ಮಾಡಿದ್ದರು. ಈ ವೇಳೆ ಸಂತ್ರಸ್ಥರ ಯೋಗಕ್ಷೇಮ ವಿಚಾರಿಸಿದ ರೇವಣ್ಣ, ಜನರಿಂದ ದೂರದಲ್ಲೇ ನಿಂತು ಮಾತನಾಡಿದರು. ಅಷ್ಟೇ ಅಲ್ಲ ಕೈಯಲ್ಲಿ ಬಿಸ್ಕಿಟ್​ ಪ್ಯಾಕ್​ ಹಿಡಿದ ರೇವಣ್ಣ ಅಕ್ಷರಷಃ ಬಿಸ್ಕೆಟ್​ ಪ್ಯಾಕ್​ಗಳನ್ನು ಜನರೆಡೆ ಎಸೆದರು. ಇದು ಮನೆಯಲ್ಲಿ ನಾಯಿಗಳಿಗೆ ಬಿಸ್ಕೆಟ್​ ಎಸೆಯುವಂತೆಯೇ ಇತ್ತು ಅನ್ನೋದು ದುರಂತಕರ ಸಂಗತಿ.
ಇನ್ನು ರೇವಣ್ಣ ತಮ್ಮ ಎಂದಿನ ನಿರ್ಲಕ್ಯ್ಷ ಧೋರಣೆಯಿಂದ ಈ ರೀತಿ ವರ್ತಿಸಿರೋದರು ಸ್ಥಳದಲ್ಲೇ ಇದ್ದ ಮೀಡಿಯಾ ಕ್ಯಾಮರಾಗಳಲ್ಲಿ ರೆಕಾರ್ಡ್​ ಆಗಿದ್ದು, ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ನೊಂದ ಜನರನ್ನು ಸಂತೈಸಬೇಕಾದ ರೇವಣ್ಣ ಅವರಿಗೆ ಬಿಸ್ಕೆಟ್​ ಎಸೆಯುವ ಮೂಲಕ ಅವರ ಪರಿಸ್ಥಿತಿಯನ್ನು ಅಣಕವಾಡಿದ್ದಾರೆ. ಹಾಗೂ ಅವಮಾನಿಸಿದ್ದಾರೆ ಎಂಬ ಆಕ್ರೋಶ ಎಲ್ಲೆಡೆಯಿಂದ ವ್ಯಕ್ತವಾಗಿದೆ.

ಹಾಸನ ಹಾಲುಒಕ್ಕೂಟದಿಂದ ರೇವಣ್ಣ ಒಟ್ಟು 20 ಲಕ್ಷ ಮೌಲ್ಯದ ಪರಿಹಾರ ಸಾಮಾಗ್ರಿ ವಿತರಣೆಗೆ ವ್ಯವಸ್ಥೆ ಮಾಡಿದ್ದರು. ಆದರೇ ಪರಿಹಾರ ವಿತರಿಸುವ ವೇಳೆ ಮಾತ್ರ ಈ ರೀತಿ ವರ್ತನೆ ತೋರಿದ್ದು, ಸಚಿವರ ಈ ದುರ್ವತೆನೆಗೆ ರಾಜ್ಯದಾದ್ಯಂತ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಜನರು ರೇವಣ್ಣ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

 

ಇನ್ನು ರೇವಣ್ಣ ಶಾಸ್ತ್ರ ಹಾಗೂ ವಾಸ್ತುವನ್ನು ಅತಿಯಾಗಿ ನಂಬೋ ವ್ಯಕ್ತಿ ಹೀಗಾಗಿ ಶಾಸ್ತ್ರದ ಪ್ರಕಾರ ಜನರನ್ನು ಸ್ಪರ್ಶಿಸೋದು ಸರಿಯಲ್ಲ ಎಂದು ಈ ರೀತಿ ವರ್ತಿಸಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನ್ಯೂಸ್​ ಚಾನೆಲ್​ಗಳಲ್ಲಿ ಸಚಿವರ ಈ ವರ್ತನೆ ಸುದ್ಧಿ ದೊಡ್ಡಮಟ್ಟದಲ್ಲಿ ಚರ್ಚೆಯಲ್ಲಿದೆ. ಒಟ್ಟಿನಲ್ಲಿ ರೇವಣ್ಣ ಒಂದಿಲ್ಲೊಂದು ರೀತಿಯಲ್ಲಿ ಎಡವಟ್ಟು ಮಾಡಿಕೊಳ್ಳುತ್ತ ಸುದ್ದಿಯಾಗ್ತಿರೋದಂತು ಸತ್ಯವಾಗಿದ್ದು, ಅವರು ಯಾವಾಗ ತಮ್ಮ ಜವಾಬ್ದಾರಿ ಅಥವಾ ಹೊಣೆಗಾರಿಕೆ ಅರಿತುಕೊಳ್ತಾರೆ ಅನ್ನೋದೇ ಜನರ ಪ್ರಶ್ನೆ…ಏನೇ ಇರಲಿ, ಮಾಜಿ ಪ್ರಧಾನಿಯೊಬ್ಬರ ಪುತ್ರರಾಗಿ, ಜವಾಬ್ದಾರಿಯುತ ಕ್ಯಾಬಿನೇಟ್​ ದರ್ಜೆಯ ಸಚಿವರಾಗಿ ಅಸಹಾಯಕರ ಜೊತೆ ನಡೆದುಕೊಂಡ ರೀತಿ ಮಾತ್ರ ನಿಜಕ್ಕೂ ಅಸಹ್ಯಮೂಡಿಸುವಂತಿದ್ದು, ಇದಕ್ಕೇ ವಾಸ್ತುಪ್ರಕಾರ ರೇವಣ್ಣನವರೇ ಉತ್ತರ ನೀಡಬೇಕಿದೆ.

Leave a Comment