ರಾಜಕೀಯ ಸುದ್ದಿಗಳು

ಹೈಕೋರ್ಟ್ ನೌಕರರ ಸಂಬಳ ಪರಿಷ್ಕರಣೆ ವಿಚಾರ- ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಧಾನ!

Views:
46

ಸುಪ್ರೀಂ ಕೋರ್ಟ್​ ಆದೇಶವಿದ್ದರೂ ಹೈಕೋರ್ಟ್​ ಉದ್ಯೋಗಿಗಳ ವೇತನ ಪರಿಷ್ಕರಣೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್​​ ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಸುಪ್ರೀಂಕೋರ್ಟ್​ ಆದೇಶಕ್ಕೆ ಬೆಲೆಕೊಡದ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹೈಕೋರ್ಟ್​ ತರಾಟೆ ಬಳಿಕ ಎಚ್ಚೆತ್ತ ಸರ್ಕಾರದ ಪರವಾಗಿ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿ ಎಸ್.ಎನ್.ಪ್ರಸಾದ್ ಸರ್ಕಾರಕ್ಕೆ ಜೂನ್ ಅಂತ್ಯದೊಳಗೆ ವೇತನ ಪಾವತಿಸುವುದಾಗಿ ಮನವಿ ಮಾಡಿದ್ದಾರೆ.

 

ಹೈಕೋರ್ಟ್​ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಶ್ರೇಣಿಯ ವೇತನ ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್​ ಆದೇಶಿಸಿತ್ತು. ಆದರೂ ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ಹೈಕೋರ್ಟ್​​ ನೌಕರರು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಈ ಅಂಶವನ್ನು ಹೈಕೋರ್ಟ್​ ಗಮನಕ್ಕೆ ತಂದಿದ್ದರು.

ಹೀಗಾಗಿ ಈ ಬಗ್ಗೆ ವಿಚಾರಣೆ ನಡೆಸಿದ ಘನ ನ್ಯಾಯಾಲಯವೂ ಸರ್ಕಾರದ ಬಗ್ಗೆ ಅಸಮಧಾನ ವ್ಯಕ್ತಪಡಿಸಿತ್ತು. ಹೀಗಾಗಿ ಸರ್ಕಾರದ ಪರ ಪರಿಸ್ಕೃತ ವೇತನವನ್ನು ಜೂನ್​ ಅಂತ್ಯದೊಳಗೆ ಪಾವತಿಸುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿ ಹೈಕೋರ್ಟ್​ಗೆ ಸಲ್ಲಿಸಿದೆ. ಜೂನ್ 30 ರಂದು ನ್ಯಾಯಾಲಯ ವರದಿ ಸಲ್ಲಿಸಲು ಸೂಚಿಸಿದೆ.

Leave a Comment