ಅಪರಾಧ ರಾಜಕೀಯ ಸುದ್ದಿಗಳು

TOP SECRET – ಸಿಬಿಐ ಸರ್ಚ್ ವಾರೆಂಟ್ ಬಗ್ಗೆ ಮಧ್ಯರಾತ್ರಿ ಡಿ ಕೆ ಶಿವಕುಮಾರ್ ಗೆ ಹೇಳಿದ್ಯಾರು ? EXCLUSIVE

ಸಿಬಿಐ ಅಧಿಕಾರಿಗಳು ಡಿ ಕೆ ಶಿವಕುಮಾರ್ ಮತ್ತು ಸಂಸದ ಡಿ ಕೆ ಸುರೇಶ್ ಅವರ ಸುಮಾರು 11 ಆಪ್ತರು, ಆಸ್ತಿಪಾಸ್ತಿಗಳ ಮೇಲೆ ಸರ್ಚ್ ವಾರಂಟ್ ಗೆ ಸಿದ್ದಪಡಿಸುತ್ತಾರೆ. ಸರ್ಚ್ ವಾರಂಟ್ ಅನ್ನು ಸಿಬಿಐ ನ್ಯಾಯಾಲಯದಲ್ಲಿ ಕೇಳುವುದು ಬೆಳಿಗ್ಗೆ ಹನ್ನೊಂದು ಗಂಟೆಗೆ. ಆದರೆ ಡಿ ಕೆ ಶಿವಕುಮಾರ್ ನಾಳೆ ಹನ್ನೊಂದು ಗಂಟೆಗೆ ನಮ್ಮ ವಿರುದ್ದ ಸರ್ಚ್ ವಾರಂಟ್ ಪಡೆಯಲಿದ್ದಾರೆ ಎಂದು ಮುಂಚಿನ ದಿನ ಮಧ್ಯರಾತ್ರಿ ತಿಳಿಯುತ್ತದೆ. ಅದರಂತೆ ಸರ್ಚ್ ವಾರಂಟ್ ಗಾಗಿ ಸಿಬಿಐ ನ್ಯಾಯಾಲಯಕ್ಕೆ ಹೊರಡೋ ಮುಂಚೆಯೇ ಡಿ ಕೆ ಸಹೋಧರರು ಪತ್ರಿಕಾಗೋಷ್ಠಿ ಮಾಡಿ ವಿಚಾರ ತಿಳಿಸುತ್ತಾರೆ. ಸಿಬಿಐ ಯ ಕೆಲವು ಉನ್ನತ ಅಧಿಕಾರಿಗಳನ್ನು ಹೊರತುಪಡಿಸಿ ಇನ್ಯಾರಿಗೂ ತಿಳಿಯದ ಈ ಟಾಪ್ ಸೀಕ್ರೆಟ್ ಡಿ ಕೆ ಶಿವಕುಮಾರ್ ಗೆ ತಿಳಿದಿದ್ದಾರೂ ಹೇಗೆ ? ತಿಳಿಸಿದವರು ಯಾರು ? ಎಂಬುದು ಸ್ವತಹ ಸಿಬಿಐ ಅಧಿಕಾರಿಗಳು ತಲೆಕೆರೆದುಕೊಳ್ಳುವಂತೆ ಮಾಡಿದೆ.

  

ಇದನ್ನು ಡಿ ಕೆ ಶಿವಕುಮಾರ್ ರವರೇ ಖುದ್ದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. “ನಾನು ನಿನ್ನೆ ಬಳ್ಳಾರಿ ಪ್ರವಾಸದಲ್ಲಿದ್ದೆ. ಬಳ್ಳಾರಿಯಿಂದ ವಾಪಸ್ ಬರ್ತಿರಬೇಕಾದರೆ ನನಗೊಂದು ಫೋನ್ ಕರೆ ಬಂತು. ಫೋನ್ ಎಐಸಿಸಿ ಮುಖಂಡರದ್ದು. ನಾಳೆ ನಿಮ್ಮ ವಿರುದ್ದ 11 ಕಡೆ ಸರ್ಚ್ ವಾರಂಟನ್ನು ಸಿಬಿಐ ಪಡೆದುಕೊಳ್ಳಲಿದೆ ಎಂದು ಎಐಸಿಸಿ ಮುಖಂಡರು ಹೇಳಿದರು” ಎಂದಿದ್ದಾರೆ.

ಡಿ ಕೆ ಶಿವಕುಮಾರ್ ಬೆಳಿಗ್ಗೆ 8 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತೆಯೇ ಸಿಬಿಐ ನ್ಯಾಯಾಲಯದಿಂದ ಡಿಕೆ ಬ್ರದರ್ಸ್ ವಿರುದ್ದ 11 ಸರ್ಚ್ ವಾರೆಂಟ್ ಅನ್ನು 11 ಗಂಟೆಯ ವೇಳೆ ಪಡೆದುಕೊಂಡಿತು. ಬಿಜೆಪಿ ಕೇಂದ್ರದಲ್ಲಿ ನಿನ್ನೆಮೊನ್ನೆ ಆಡಳಿತಕ್ಕೆ ಬಂದರೆ ಕಾಂಗ್ರೆಸ್ ಕಳೆದ ಅರುವತ್ತು ವರ್ಷಗಳಿಂದ ದೇಶವಾಳಿತ್ತು. ಸಿಬಿಐ ಒಳಗಡೆ ಏನಾಗುತ್ತದೆ ಎಂಬುದು ತಿಳಿಯದಷ್ಟು ಕಾಂಗ್ರೆಸ್ ವೀಕ್ ಆಗಿಲ್ಲ ಎಂದು ಸಾಭೀತು ಮಾಡಿದಂತೆ ಡಿ ಕೆ ಶಿವಕುಮಾರ್ ಪತ್ರಿಕಾಗೋಷ್ಠಿ.

Leave a Comment