ಅಪರಾಧ ರಾಜಕೀಯ

ರೆಡ್ಡಿ ಪ್ರಚಾರದ ಓಟಕ್ಕೆ ಸುಪ್ರೀಂಕೋರ್ಟ್​ ಬ್ರೇಕ್​​- ನೆಮ್ಮದಿ ನಿಟ್ಟುಸಿರು ಬಿಟ್ಟ ಬಿಜೆಪಿ ಹೈಕಮಾಂಡ್​!

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿರುವ ಅಮಿತ್ ಶಾ ಕೆಲದಿನಗಳ ಹಿಂದೆ ರಾಜ್ಯಕ್ಕೆ ಬಂದವರು ಮಾಜಿ ಸಚಿವ ಗಣಿ-ಧಣಿ ಜನಾರ್ಧನ್​ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದರು. ಆದರೂ ಬಿಜೆಪಿ ಚುನಾವಣಾ ಪ್ರಚಾರದ ವೇದಿಕೆಗಳಲ್ಲಿ ರೆಡ್ಡಿ ಎಗ್ಗಿಲ್ಲದೇ ಪಾಲ್ಗೊಳ್ಳಲು ಆರಂಭಿಸಿದ್ದರು. ಸ್ವತಃ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಜೊತೆಗೆ ರೆಡ್ಡಿ ಪ್ರಚಾರದ ವೇದಿಕೆ ಹಂಚಿಕೊಂಡಿದ್ದರು. ಆದರೇ ಇದೀಗ ಬಿಜೆಪಿ ಚುನಾವಣೆ ಪ್ರಚಾರದಲ್ಲಿ ತಾವೇ ರಾಜನಾಗಲೂ ಹೊರಟಿದ್ದ ರೆಡ್ಡಿಯವರ ಓಟಕ್ಕೆ ಇದೀಗ ಸುಪ್ರೀಂಕೋರ್ಟ್​ ಬ್ರೇಕ್​ ಹಾಕಿದೆ.

 

ಹೌದು ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಶ್ರೀರಾಮಲು ಅವರನ್ನು ಗೆಲ್ಲಿಸಿ ಕಳೆದುಕೊಂಡ ಪ್ರತಿಷ್ಠೆಯನ್ನು ಮರಳಿ ಪಡೆಯುವ ಕನಸಿನಲ್ಲಿದ್ದ ಜನಾರ್ಧನ ರೆಡ್ಡಿಗೆ ಸುಪ್ರೀಂ ತಡೆ ನೀಡಿದೆ. ರೆಡ್ಡಿಯವರು ಕರ್ನಾಟಕ ಚುನಾವಣೆಯಲ್ಲಿ ತಮ್ಮ ಸಹೋದರ ಜಿ. ಸೋಮಶೇಖರ ರೆಡ್ಡಿ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಬಳ್ಳಾರಿ ಪ್ರವೇಶಿಸಲು ಅನುಮತಿ ಕೋರಿ ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.
ಆದರೇ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​​ ರೆಡ್ಡಿಯವರಿಗೆ ಬಳ್ಳಾರಿಗೆ ತೆರಳಲು ಅನುಮತಿ ನೀಡುವಂತ ಪೂರಕವಾದ ಯಾವುದೇ ಅಂಶಗಳು ಅರ್ಜಿಯಲ್ಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದಿರುವ ರೆಡ್ಡಿಗೆ ಬಳ್ಳಾರಿಗೆ ತೆರಳಲು ಕೋರ್ಟ್ ಅನುಮತಿ ನೀಡಿಲ್ಲ.


ಸ್ವತಃ ಟಿಕೇಟ್ ಆಕಾಂಕ್ಷಿಯಾಗಿದ್ದ ರೆಡ್ಡಿ ಬಿಜೆಪಿ ಟಿಕೇಟ್ ನೀಡಿಲ್ಲ.ಅಲ್ಲದೇ ರೆಡ್ಡಿಯಿಂದ ಸೂಕ್ತ ಅಂತರ ಕಾಯ್ದುಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ. ಆದರೇ ಜನಾರ್ಧನ ರೆಡ್ಡಿ ಸಹೋದರ ಜಿ.ಸೋಮಶೇಖರ್ ರೆಡ್ಡಿ ಬಳ್ಳಾರಿಯಿಂದ ಸ್ಪಧಿಸುತ್ತಿದ್ದರೇ, ಹಿರಿಯ ಸಹೋದರ ಕರುಣಾಕರ್ ರೆಡ್ಡಿ ಹರಪನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಇಬ್ಬರು ಸಹೋದರರ ಜೊತೆಗೆ ಸ್ನೇಹಿತ ಶ್ರೀರಾಮುಲು ಪರ ಕೂಡ ರೆಡ್ಡಿ ಪ್ರಚಾರ ನಡೆಸಿದ್ದರು. ರೆಡ್ಡಿಯ ಈ ನಡೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ರೆಡ್ಡಿ ಓಟಕ್ಕೆ ಕೋರ್ಟ್​ ಬ್ರೇಕ್ ಹಾಕಿದೆ.

Leave a Comment