ಸಿನೆಮಾ ಸುದ್ದಿಗಳು

ಸಾಮಾಜಿಕ‌ ಜಾಲತಾಣದಲ್ಲಿ ಸದ್ದು ಮಾಡ್ತಿದೆ ಕರಂಜಿತ್ ಕೌರ್ ಸನ್ನಿ ಲಿಯೋನ್ ಆದ ಕತೆ!

Views:
102

ಸನ್ನಿ ಲಿಯೋನ್….ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವದ ಪಡ್ಡೆಹುಡುಗರ ಫೆವರಿಟ್ ನಟಿ ಎನ್ನಿಸಿರುವ ಸನ್ನಿ ಮೇನಿಯಾ ಹದಿಹರೆಯದಿಂದ ಆರಂಭಿಸಿ ಮುದುಕರವರೆಗೂ ಎಲ್ಲ ವರ್ಗದ ಜನರ ಕನಸಿನ‌ಕನ್ಯೆಯಾಗಿ ವಿಜೃಂಭಿಸಿದಾಕೆ. ಫ್ರೀ ಇಂಟರನೆಟ್ ಯುಗದಲ್ಲಿ ಸನ್ನಿ ನೋಡದವರೇ ಅಪರೂಪ. ನೀಲಿತಾರೆಯಾಗಿ ಪ್ರಚಲಿತಕ್ಕೆ ಬಂದ ಸನ್ನಿಲಿಯೋನ್, ಈಗ ಹಾಲಿವುಡ್,ಬಾಲಿವುಡ್ ನಲ್ಲೂ ಮನೆಮಾತು.

 

ನೀಲಿತಾರೆ ಎಂಬುದನ್ನು ಬೋಲ್ಡ್ ಆಗಿ ಒಪ್ಪಿಕೊಂಡು ಟೀಕಾಕಾರರ ಬಾಯಿ ಮುಚ್ಚಿಸಿದ ಸನ್ನಿಲಿಯೋನ್ ನೀಲಿತಾರೆಯಾಗೋಕೆ ಇಷ್ಟಪಟ್ಟು ಹೋದವರಲ್ಲ, ಬಾಲ್ಯದ ಕೆಲ‌ಕಹಿ‌ಘಟನೆಗಳು ಸನ್ನಿಯನ್ನು ಆ ಪ್ರಪಂಚಕ್ಕೆ‌ ದೂಡಿದ್ದವು. ಇಷ್ಟಕ್ಕೂ ಸನ್ನಿ ಬಾಲ್ಯ, ಯವ್ವನದ ದಿನಗಳು ಹೇಗಿದ್ದವು ಅನ್ನೋ ಕುತೂಹಲ ನಿಮಗೂ‌ ಇದ್ದಿರಬಹುದು.‌ಆ ಕುತೂಹಲಕ್ಕೆ ಉತ್ತರ‌ ಸಿದ್ಧವಾಗಿದೆ.

ಅಪ್ಪಟ ಪಂಜಾಬಿ ಮೂಲದ ಹುಡುಗಿ ಕರಂಜಿತ್ ಕೌರ್, ದಿ ಅನ್ ಟೋಲ್ಡ್‌ ಸ್ಟೋರಿ ಆಫ್ ಸನ್ನಿ‌ಲಿಯೋನ್ ಚಿತ್ರದ ಮೂಲಕ ಹಾಟ್‌ ಸನ್ನಿ ಲಿಯೋನ್ ಬದುಕಿನ ಕ್ಷಣಗಳು ತೆರೆ ಮೇಲೆ ಬರಲಿವೆ. ಕರಂಜಿತ್ ಕೌರ್ ವೆಬ್ ಸೀರಿಸ್ ರೂಪದಲ್ಲಿ ಸಿದ್ಧವಾಗಿದ್ದು, ಬಾಲ್ಯದಲ್ಲಿ ಸನ್ನಿ ಎದುರಿಸಿದ ಅವಮಾನಗಳು, ತಂದೆ ಕೆಲಸ‌ ಕಳೆದುಕೊಂಡಿದ್ದರಿಂದ ಎದುರಿಸಿದ ಸಂಕಷ್ಟಗಳು ಎಲ್ಲ ಸಂಕಷ್ಟ ಗಳಿಗೆ ಉತ್ತರವಾಗಿ ಅಡಲ್ಟ್‌ ಚಿತ್ರಗಳಲ್ಲಿ ನಟಿಸಿದ್ದು ಎಲ್ಲ ಚಿತ್ರಣವನ್ನು ಈ ಚಿತ್ರ ಒಳಗೊಂಡಿದೆ.

 

 

ಸನ್ನಿ ಬಾಲಿವುಡ್ ಪಯಣಕ್ಕೂ ಈ ವೆಬ್ ಸೀರಿಸ್ ಸಾಕ್ಷಿಯಾಗಿದೆ.ಈಗಾಗಲೇ ವೆಬ್ ಸೀರಿಸ್ ನ ಟ್ರೇಲರ್‌ ರಿಲೀಸ್ ಆಗಿದ್ದು ಸಾಮಾಜಿಕ‌ ಜಾಲತಾಣದಲ್ಲಿ ಸಂಚಲನ‌ ಮೂಡಿಸಿದೆ. ಬಾಲ್ಯದ ಸನ್ನಿ ಪಾತ್ರದಲ್ಲಿ ಇಂಗ್ಲೆಂಡ್ ನ ನಟಿ ರೈಸಾ ಅಭಿನಯಿಸಿದ್ದರೇ, ಉಳಿದ ಪಾತ್ರದಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರೆ. ಸನ್ನಿ ಜೀವನದಲ್ಲಿ ದೊಡ್ಡ ಪಾತ್ರ ವಹಿಸಿದ ಪತಿ ಡೇನಿಯಲ್ ವೇಬರ್ ಪಾತ್ರವನ್ನು ದಕ್ಷಿಣ ಆಫ್ರಿಕಾದ ನಟ ಮಾರ್ಕ್ ಬಕ್ನರ್ ನಿರ್ವಹಿಸಿದ್ದಾರೆ.

ಸನ್ನಿ ಲಿಯೋನ್ ಎಂದು ಮೂಗು ಮುರಿಯುವವರಿಗೆ ಈ ವೆಬ್ ಸೀರಿಸ್ ಆಕೆಯ ಬದುಕಿನ ಇನ್ನೊಂದು ಮುಖದರ್ಶನ ಮಾಡಿಸಲಿದೆ.

Leave a Comment