ರಾಜಕೀಯ ಸುದ್ದಿಗಳು

ಇನ್ಮುಂದೆ ಜೆಪಿನಗರ ನಿವಾಸವೇ ಸಿಎಂ ಅಧಿಕೃತ ನಿವಾಸ- ಅನುಗ್ರಹ-ಕಾವೇರಿಯ ವಾಸ್ತುಕಾಟಕ್ಕೆ ಬೆದರಿದ ಕುಮಾರಣ್ಣ!

ಇನ್ಮುಂದೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲ. ಹೌದು ಸಿಎಂ ಬದಲಾವಣೆಯೊಂದಿಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸವೂ ಬದಲಾಗಿದೆ. ಸಂಪ್ರದಾಯದಂತೆ ಮುಖ್ಯಮಂತ್ರಿಗಳಾಗಿ ಅಧಿಕಾರಕ್ಕೆ ಬಂದವರು ಅಧಿಕೃತ ನಿವಾಸವಾಗಿರುವ ಕಾವೇರಿಯಲ್ಲೇ ನೆಲೆಸುವುದು ವಾಡಿಕೆ. ಆದರೇ ಅತ್ಯಂತ ಹೆಚ್ಚಾಗಿ ವಾಸ್ತು ಹಾಗೂ ದೇವರನ್ನು ನಂಬುವ ನಿಯೋಜಿತ ಸಿಎಂ ಕುಮಾರಸ್ವಾಮಿ ವಾಸ್ತು ಕಾರಣ ಕೊಟ್ಟು ಅಧಿಕೃತ ಬದಲಾಯಿಸಲು ತೀರ್ಮಾನಿಸಿದ್ದಾರೆ.


ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಕಾವೇರಿ ಮತ್ತು ಅನುಗ್ರಹ ಬಳಕೆಗೆ ಅವಕಾಶವಿದೆ. ಆದರೇ ನಿಯೋಜಿತ ಸಿಎಂ ಕುಮಾರಸ್ವಾಮಿ ತಮ್ಮ ಜೆ.ಪಿ.ನಗರದ ನಿವಾಸವನ್ನೇ ಸಿಎಂ ಅಧಿಕೃತ ನಿವಾಸ ಮಾಡಿಕೊಳ್ಳಲಿದ್ದಾರೆ. ಆದರೇ ಮುಖ್ಯಮಂತ್ರಿಗಳ ಗೃಹ ಕಚೇರಿಯಾಗಿ ಕೃಷ್ಣಾ ಮುಂದುವರಿಯಲಿದೆ. ಜೆ.ಪಿ.ನಗರ ನಿವಾಸವನ್ನು ಎಚ್​ಡಿಕೆ ವಾಸ್ತು ಪ್ರಕಾರ ನವೀಕರಿಸಿಕೊಂಡಿದ್ದು, ಆ ಮನೆ ತಮಗೆ ಅದೃಷ್ಟ ತಂದಿದೆ ಎಂದು ನಂಬಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅದೇ ನಿವಾಸದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಈಗಾಗಲೇ ಈ ಬಗ್ಗೆ ಮಾಹಿತಿಯನ್ನು ಸಿಎಸ್​​ ರತ್ನಪ್ರಭಾ ಹಾಗೂ ಐಜಿಪಿ ನೀಲಮಣಿ ರಾಜುಗೆ ರವಾನಿಸಿದ್ದಾರೆ.

 

ಇನ್ನೊಂದೆಡೆ ಅನುಗ್ರಹ ನಿವಾಸದಲ್ಲಿ ವಾಸ್ತುದೋಷ ಇದೆ ಎಂಬ ಮಾತು ಈ ಹಿಂದಿನಿಂದಲೂ ಕೇಳಿ ಬಂದಿದೆ. ಅದೇ ಕಾರಣಕ್ಕೆ ಬಿಎಸ್​ವೈ ಸೇರಿದಂತೆ ಹಲವು ಸಿಎಂಗಳು ಆ ನಿವಾಸದಲ್ಲಿ ವಾಸವಿರಲಿ ನಿರಾಕರಿಸಿದ್ದರು. ಇನ್ನು ಅಲ್ಲಿಯೇ ವಾಸ್ತವ್ಯ ಹೂಡಿದ್ದ ಡಿ.ವಿ.ಸದಾನಂದ ಗೌಡರು ಕೆಲಸಮಯದಲ್ಲಿಯೇ ಅಧಿಕಾರ ಕಳೆದುಕೊಂಡಿದ್ದರು. ಹೀಗಾಗಿ ಕುಮಾರಸ್ವಾಮಿ ಸರ್ಕಾರಿ ಬಂಗ್ಲೆ ಬಿಟ್ಟು ಸ್ವಂತ ಮನೆಯನ್ನೇ ಸಿಎಂ ನಿವಾಸವಾಗಿಸಲು ಮುಂಧಾಗಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.

Leave a Comment