ರಾಜಕೀಯ ಸಿನೆಮಾ

ಉದ್ಯಮಿ ಪುತ್ರಿ ಜೊತೆ ಕುಮಾರಪುತ್ರನ ಕಲ್ಯಾಣೋತ್ಸವ- ಕುಮಾರಣ್ಣ ಮಗನ ಮದುವೆ ನೆಂಟಸ್ತನಕ್ಕೆ ಆಂಧ್ರ ಸಿಎಂ ಮಧ್ಯಸ್ತಿಕೆ!

ಅತ್ತ ಸಮ್ಮಿಶ್ರ ಸರ್ಕಾರ ಉರುಳುತ್ತೆ ಅಂತ ಕಾಂಗ್ರೆಸ್​-ಜೆಡಿಎಸ್​ ಹಾಗೂ ಬಿಜೆಪಿ ಅತೃಪ್ತರು ಕಾಯುತ್ತಿದ್ದರೇ, ಇತ್ತ ಸಿಎಂ ಕುಮಾರಸ್ವಾಮಿ ಮಾತ್ರ ಈ ತಲೆಬಿಸಿ ಬಿಟ್ಟು ತಮ್ಮ ಕುಟುಂಬ ಕಲ್ಯಾಣದತ್ತ ಚಿತ್ತ ಹರಿಸಿದ್ದಾರೆ. ಆಂಧ್ರದ ದೇವಿ ದರ್ಶನದ ಹೆಸರಿನಲ್ಲಿ ಸಿಎಂ ಕುಮಾರಸ್ವಾಮಿ ದಂಪತಿ ಸಮೇತ ಪುತ್ರನ ಕಲ್ಯಾಣೋತ್ಸವದ ಸಿದ್ಧತೆಗೆ ತೆರಳಿದ್ದಾರೆ. ಅಂದ್ರೆ ಕುಮಾರಸ್ವಾಮಿ ಪುತ್ರ ನಟ ನಿಖಿಲಕುಮಾರಸ್ವಾಮಿಗಾಗಿ ಹೆಣ್ಣು ನೋಡಲು ಆಂಧ್ರಕ್ಕೆ ತೆರಳಿದ್ದಾರೆ.

ಮೂಲಗಳ ಪ್ರಕಾರ ವಿಜಯವಾಡದ ಪ್ರತಿಷ್ಠಿತ ಪಾದರಕ್ಷೆ ಉದ್ಯಮಿ ರಘುರಾಂ ಕೃಷ್ಣಂ ಎಂಬುವವರ ಪುತ್ರಿಯನ್ನು ನಿಖಿಲಕುಮಾರಸ್ವಾಮಿಗಾಗಿ ವಿಚಾರಿಸಲಾಗಿದ್ದು, ಇಂದು ಹೆಣ್ಣುನೋಡುವ ಶಾಸ್ತ್ರ ಹಾಗೂ ಮಾತುಕತೆಗೆ ಕುಮಾರಣ್ಣ ದಂಪತಿ ಸಮೇತ ತೆರಳಿದ್ದಾರೆ. ಆದರೆ ಮಾಧ್ಯಮಗಳ ಕಣ್ಣುತಪ್ಪಿಸುವ ಉದ್ದೇಶದಿಂದ ಸಿಎಂ ಕನಕದುರ್ಗಿ ಶಕ್ತಿಪೀಠ ದರ್ಶನದ ಕತೆ ಹೇಳಿದ್ದಾರೆ ಎನ್ನಲಾಗುತ್ತಿದೆ.

 

ಇನ್ನು ಸಿಎಂ ಕುಮಾರಸ್ವಾಮಿ ಪುತ್ರನ ಮದುವೆ ಮಾತುಕತೆಗೆ ಆಂಧ್ರ ಸಿಎಂ ಮಧ್ಯಸ್ಥಿಗೆ ವಹಿಸಿದ್ದು, ಅವರ ನೇತ್ರತ್ವದಲ್ಲೇ ಮಾತುಕತೆ ನಡೆಯುತ್ತಿದೆ. ಎಲ್ಲವೂ ಗೌಡ್ರ ಲೆಕ್ಕಾಚಾರದಂತೆ ನಡೆದರೇ ನಟ ನಿಖಿಲಕುಮಾರಸ್ವಾಮಿ ಆಂಧ್ರ ಉದ್ಯಮಿಯ ಅಳಿಯನಾಗಲಿದ್ದು, ಅದ್ದೂರಿಯಾಗಿ ವಿವಾಹ ಸಧ್ಯದಲ್ಲೇ ನಡೆಯುವ ಮುನ್ಸೂಚನೆ ಇದೆ.

 

 

ಈ ಹಿಂದೆ ನಿಖಿಲಕುಮಾರಸ್ವಾಮಿಗೆ ಚಿಕ್ಕಬಳ್ಳಾಪುರದ ಶ್ರೀಮಂತ ಉದ್ಯಮಿಯೊಬ್ಬರ ಪುತ್ರಿ ಜೊತೆ ವಿವಾಹ ನಿಶ್ಚಯವಾಗಿತ್ತು. ಅದ್ದೂರಿಯಾಗಿ ನಿಶ್ಚಿತಾರ್ಥ ಶಾಸ್ತ್ರವೂ ನಡೆದಿತ್ತು. ಆಗಿನ್ನು ನಿಖಿಲಕುಮಾರಸ್ವಾಮಿ ಇಷ್ಟು ಪ್ರಸಿದ್ಧಿಗೆ ಬಂದಿರಲಿಲ್ಲ. ಇದೀಗ ಧೀಡಿರ ಆ ಕುಟುಂಬದ ಜೊತೆ ಕುಮಾರಸ್ವಾಮಿ ವಿವಾಹ ಮುರಿದುಕೊಂಡಿದ್ದು, ಹೊಸ ಬೀಗರನ್ನು ಹುಡುಕಲು ಆರಂಭಿಸಿದ್ದರು. ಕೊನೆಗೂ ಆ ಶೋಧ ಮುಕ್ತಾಯಗೊಂಡಂತಾಗಿದ್ದು, ಶ್ರೀಮಂತ ಉದ್ಯಮಿಯೊಬ್ಬರ ಬೀಗರಾಗಲು ಕುಮಾರಣ್ಣ ತುದಿಗಾಲಲ್ಲಿ ನಿಂತಿರೋದಂತು ಸತ್ಯ.

Leave a Comment