ಸಿನೆಮಾ ಸುದ್ದಿಗಳು

ಕೆಂಡಸಂಪಿಗೆ ಚೆಲುವೆ ಮಾನ್ವಿತಾಗೆ ಎಂಥ ಹುಡುಗಬೇಕಂತೆ ಗೊತ್ತಾ?!

ಕೆಂಡಸಂಪಿಗೆ ಚೆಲುವೆಯಾಗಿ ಇಂಡಸ್ಟ್ರಿಗೆ ಕಾಲಿಟ್ಟ‌ ಮಾನ್ವಿತಾ ಯಾವುದೇ ವಿವಾದಗಳಿಲ್ಲದೇ ಕನ್ನಡದ ಹ್ಯಾಟ್ರಿಕ್ ಹಿರೋ ಶಿವಣ್ಣ ಜೊತೆಗೂ ತೆರೆಮೇಲೆ‌ ಮಿಂಚಿ‌ ಭರ್ಜರಿ ಯಶಸ್ಸು‌ ಕಂಡಿದ್ದಾರೆ. ಇಂತಿಪ್ಪ ಹುಡುಗಿ ಇದೀಗ ಮದುವೆ ಕನಸಿನಲ್ಲಿ‌ ಮುಳುಗಿದ್ದಾರೆ…..ಅಯ್ಯೋ ಇಂಡಸ್ಟ್ರಿಗೆ ಬಂದು ಮೂರೆ ವರ್ಷಕ್ಕೇ ಮದುವೆ ನಾ ಅಂತ ಹುಬ್ಬೆರಸ್ತಾ ಇದ್ದಿರಾ….ಖಂಡಿತಾ ಇಲ್ಲ. ಬದಲಾಗಿ ಮಾನ್ವಿತಾ ತಮ್ಮ ಕನಸಿನ ಹುಡುಗ ಹೇಗಿರಬೇಕು ಅನ್ನೋದನ್ನು ಹೇಳಿಕೊಂಡಿದ್ದಾರೆ.

ಸಾಮಾನ್ಯ ಹುಡುಗಿಯರೇ ಬಿಳಿ ಕುದುರೆಯ ರಾಜಕುಮಾರನಿಗಾಗಿ ಕಾಯೋವಾಗ ಇನ್ನು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಮಾನ್ವಿತಾ ಗಂಡ ಆಗೋನು ಹೇಗೆಲ್ಲ ಇರಬೇಕು ಅಂದ್ಕೊಂಡಿರಬೇಕು ಅಲ್ವಾ?


ಆದರೇ ನೀವಂದುಕೊಂಡ ಹಾಗೇ ಮಾನ್ವಿತಾಗೆ ಜಿಮ್ ಬಾಡಿ,೬ ಅಡಿ ಹೈಟ್,ಅಗರ್ಭ ಶ್ರೀಮಂತ ಹುಡುಗ ಬೇಡವಂತೆ…..ಇದ್ಯಾಕೆ ಹೀಗೆ ಅಂದ್ರಾ? ಅದೇ ಮಾನ್ವಿತಾ ಸ್ಪೇಶಲ್.ಸಿನಿಮಾ ಜೊತೆ ಸಾಹಿತ್ಯದಲ್ಲೂ ಸಖತ್ ಆಸಕ್ತಿ ಹೊಂದಿರೋ‌ ಮಾನ್ವಿತಾಗೆ ಓದುವ ಹವ್ಯಾಸ ಇರೋ ಹುಡುಗನೇ ಬೇಕಂತೆ. ಅಷ್ಟೇ ಅಲ್ಲ ಸಂಗೀತ ಅಂದ್ರೆ ಮಾನ್ವಿತಾಗೆ ಪ್ರಾಣ ಹೀಗಾಗಿ‌ ಹುಡುಗನಿಗೆ ಹಾಡೋಕು ಬರಬೇಕಂತೆ. ಇನ್ನು ಕವಿತೆ ಬರೆಯೋಕೆ ಬರೋ ಹುಡುಗ ಆದ್ರೂ ಒಕೆ ಅಂತೆ. ಅಷ್ಟೇ ಅಲ್ಲ ಇನ್ನಷ್ಟು ವರ್ಷಗಳ ಕಾಲ ಮಾನ್ವಿತಾ ಇಂಡಸ್ಟ್ರಿಯಲ್ಲೇ ಮುಂದುವರಿಯುವ ಆಸೆ ಇಟ್ಕೊಂಡಿರೋದರಿಂದ ಸ್ಯಾಂಡಲವುಡ್ ನಲ್ಲೇ ಇರೋ ಹುಡುಗ ಆದ್ರೂ ಒಕೆ ಅಂತಿದ್ದಾರೆ.


ಒಟ್ಟಿನಲ್ಲಿ ಟಗರು ಬೆಡಗಿ ಮಾನ್ವಿತಾ ಹಳ್ಳಕ್ಕೆ ಬೀಳೋಕೆ ಸಿದ್ಧವಾಗಿದ್ದು ಕನಸಿನ ರಾಜ ಹೇಗಿರಬೇಕು ಎಂಬುದನ್ನು ಮುಲಾಜಿಲ್ಲದೇ ಹೇಳಿಕೊಂಡಿದ್ದಾರೆ. ಇಂಥ ಕ್ವಾಲಿಟಿ ಹುಡುಗ ಮಾನ್ವಿತಾ ಗೆ ಬೇಗ ಸಿಗಲಿ ಅನ್ನೋದು ನಮ್ಮ ಹಾರೈಕೆ!

Leave a Comment