ಸಿನೆಮಾ

ಸ್ಟಾರ್​ ನಟರನ್ನು ನಿಖಿಲ್ ಮೀರಿಸ್ತಿರೋದೆಲ್ಲಿ ಗೊತ್ತಾ?! ಇದು ಯುವರಾಜನ ಹವಾ!

ಸಾಮಾಜಿಕ ಜಾಲತಾಣದಲ್ಲಿ ಸಿಎಂ ಪುತ್ರ ಹಾಗೂ ಯುವರಾಜ ಖ್ಯಾತಿಯ ನಿಖಿಲ್ ಕುಮಾರಸ್ವಾಮಿ ಫ್ಯಾನ್ಸ್​ ಸಂಖ್ಯೆ ಹೆಚ್ಚುತ್ತಲೆ ಇದೆ. ಇದಕ್ಕೆ ಸಾಕ್ಷಿಯಾಗ್ತಿದೆ ನಿಖಿಲ್ ಚಿತ್ರಗಳು. ಹೌದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್​ ಬಿಡುಗಡೆಗೊಂಡ ಎರಡನೇ ದಿನದಲ್ಲಿ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.

 

ಗುಳಿಕೆನ್ನೆಯ ಚೆಲುವೆ ರಚಿತಾರಾಮ್ ನಾಯಕಿಯಾಗಿರುವ ಈ ಚಿತ್ರಕ್ಕಾಗಿ ನಿಖಿಲ್ ಕುಮಾರಸ್ವಾಮಿ ಸಾಕಷ್ಟಯ ಸ್ಟಂಟ್​ಗಳನ್ನು ಕೂಡ ಅಭ್ಯಾಸ ಮಾಡಿದ್ದರು. ಇದೀಗ ಬಿಡುಗಡೆಯಾದ ಎರಡನೇ ದಿನಕ್ಕೆ ಸೀತಾರಾಮ ಕಲ್ಯಾಣ ಸ್ಟಾರ್ ನಟರ ಚಿತ್ರಗಳ ಹಾಡನ್ನು ಹಿಂದಿಕ್ಕಿ ಮುಂದೇ ಸಾಗುತ್ತಿದೆ.

ಸ್ಟಾರ್ ನಟರಾದ ಶಿವರಾಜಕುಮಾರ್ ಮತ್ತು ಸುದೀಪ್ ಅಭಿಯನದ ದಿ ವಿಲನ್​ ಚಿತ್ರದ ಹಾಡುಗಳು ಇದುವರೆಗೂ ಯೂ ಟ್ಯೂಬ್​ನಲ್ಲಿ ಹೆಚ್ಚು ಸದ್ದು ಮಾಡಿತ್ತು. ಆದರೇ ಸೀತಾರಾಮ ಕಲ್ಯಾಣ ಟೀಸರ್ ಒಂದೇ ದಿನದಲ್ಲಿ ಈ ದಾಖಲೆಗಳನ್ನು ಹಿಂದಿಕ್ಕಿ ಸಾಗುತ್ತಿದೆ.
ದಿ ವಿಲನ್​ ಚಿತ್ರದ ಟಿಕ್ ಟಿಕ್ ಹಾಡು ಬಿಡುಗಡೆಯಾದ ವಾರದಲ್ಲೇ 26.3 ಲಕ್ಷ ವಿವ್ಸ್​ಗಳನ್ನು ಪಡೆದಿದ್ದರೇ ಇದೀಗ ಸೀತಾರಾಮ ಕಲ್ಯಾಣ ಟೀಸರ್ ಎರಡು ದಿನದಲ್ಲಿ ವೀವ್ಸ್​ 32.5 ಲಕ್ಷ ಜನರ ವಿವ್ಸ್​ ಪಡೆದುಕೊಂಡಿದೆ. ದಿ ವಿಲನ್ ಹಾಡು ​​ ಜುಲೈ 13 ರಂದು ರಿಲೀಸ್ ಆಗಿದ್ದು, ಇದುವರೆಗೂ ಒಟ್ಟು 47 ಲಕ್ಷ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೇ ಯುವರಾಜ ಎಂದೆ ಕರೆಸಿಕೊಳ್ಳುವ ನಿಖಿಲ್ ಕುಮಾರಸ್ವಾಮಿ ಟೀಸರ್ ಈ ದಾಖಲೆ ಮೀರಿ ಸಾಗೋದರಲ್ಲಿ ಸಂದೇಹವೇ ಇಲ್ಲ.
ಕೇವಲ ಸೀತಾರಾಮ ಕಲ್ಯಾಣ ಮಾತ್ರವಲ್ಲ, ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯುವಾಗಿ ನಟಿಸಿರುವ ನಿಖಿಲಗಾಗಿ ವಿಶೇಷವಾದ ಟೀಸರ್ ವೊಂದನ್ನೇ ಸಿದ್ದಪಡಿಸಲಾಗಿತ್ತು. ಇದು ಕೂಡ ಸಖತ್ ಮೆಚ್ಚುಗೆ ಪಡೆದುಕೊಂಡಿದ್ದು, ದರ್ಶನ ವಿಡಿಯೋ ದಾಖಲೆಯನ್ನೇ ಮೀರಿಸಿದ್ದನ್ನು ನಾವಿಲ್ಲಿ ನೆನಪಿಸಬಹುದು.

Leave a Comment