ರಾಜಕೀಯ ಸಿನೆಮಾ ಸುದ್ದಿಗಳು

ಎಲ್ಲಿಯ ಅಣ್ಣಾವ್ರು… ಎಲ್ಲಿಯ ಯಶ್, ಕಿಚ್ಚ ಸುದೀಪ್ ? ಕಾಸಿಗಾಗಿ ನಟರು ಹೀಗೂ ಮಾಡಬಹುದಾ?

ಈ ಪ್ರಶ್ನೆ ನಮ್ಮದಲ್ಲ. ಸುದೀಪ್ ಮತ್ತು ಯಶ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಇಂತಹ ಪ್ರಶ್ನೆಗಳು ಕೇಳಿಬಂದಿದೆ.

ಶಿವಮೊಗ್ಗ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ರವಿಕುಮಾರ್ ಟೆಲೆಕ್ಸ್ ರವರು ತಮ್ಮ ಫೇಸ್ ಬುಕ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ :

 

ಸುದೀಪ್,ಯಶ್ ಪ್ರತಿಭಾನ್ವಿತ ನಟರು. ಇವರು ಯಾವುದಾದರೂ ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದರೆ ಅದಕ್ಕೆ ನನ್ನ ತಕರಾರಿಲ್ಲ.
ಆದರೆ ಅವರಿಬ್ಬರು ವ್ಯಕ್ತಿಗತ ನೆಲೆಯಲ್ಲಿ ಬೇರೆ ಬೇರೆ ಪಕ್ಷಗಳ ತಮ್ಮ ಆಪ್ತರ ಪರ ಪ್ರಚಾರಕ್ಕಿಳಿದಿದ್ದಾರೆ. ಪಕ್ಷಾತೀತವಾಗಿ ಇವರು ಕಾಣಿಸಿಕೊಳ್ಳುತ್ತಿದ್ದಾರೆ .ಜನರ ದುಡ್ಡು,ಪ್ರೀತಿ,ಗೌರವಗಳನ್ನು ಒಬ್ಬ ಕಲಾವಿದ ಜತನದಿಂದ ಕಾಯ್ದುಕೊಳ್ಳಬೇಕು.
ಕಾಸಿಗಾಗಿಯೋ, ಜಾತಿಗಾಗಿಯೋ ಇವರು ಓಟು ಕೇಳಲು ನಿಂತಿದ್ದಾರೆ. ಅದು ಭ್ರಷ್ಟರು, ಕಳ್ಳರ ಪರ .

ತೆರೆಯಮೇಲೆ ನಾಡು,ನುಡಿಯ ಬಗ್ಗೆ ಪುಂಖಾನುಪುಂಖ ಡೈಲಾಗ್ ಹೊಡೆಯುವ ಈ ಹೀರೋ ಗಳು ಅಸಲಿಯಾಗಿ ಈ ನಾಡ ಮಣ್ಣನ್ನು ಲೂಟಿ ಹೊಡೆದವರು, ನೆಟ್ಟಗೆ ಕನ್ನಡವನ್ನೇ ಆಡದವರ ಪರ ಮೆರವಣಿಗೆ ಹೊರಟಿರುವುದನ್ನು ಕಂಡಾಗ ಕ್ಯಾಕರಿಸಿ ಉಗಿಯಬೇಕೆನಿಸುತ್ತದೆ. ಹೀರೋ ಯಾವಾಗಲೂ ಒಂದು ಆದರ್ಶಪ್ರಾಯ ಪಾತ್ರದಲ್ಲಿ ಅಚ್ಚೋತ್ತುತ್ತಲೆ ಇರುತ್ತಾನೆ. ಸೈದ್ದಾಂತಿಕ ಸ್ಪಷ್ಟತೆ ಯೇ ಇಲ್ಲದೆ ಕಂಡ ಕಂಡವರ ಝಂಡಾ,ಅಜೆಂಡಾಗಳನ್ನು ಹಿಡಿದುಕೊಂಡು ಹೋಗುವ ಈ ನಟರು ಜನರ ವಿಶ್ವಾಸ ವನ್ನು ಗಿರವಿ ಇಡತೊಡಗಿದ್ದಾರೆ.

ಇಂತಹ ಉಡಾಳತನಗಳಿಂದ ದೂರ ಉಳಿದಿದ್ದರಿಂದಲೆ ಅಣ್ಣಾವ್ರು ಇಂದಿಗೂ ಆದರ್ಶಮೂರ್ತಿಯಾಗಿ ಆರಾಧಿಸಲ್ಪಡುತ್ತಿದ್ದಾರೆ.
ಸುದೀಪ್,ಯಶ್ ಕಲಿಯುವುದು ಬಹಳಷ್ಟಿದೆ.

ಎಲ್ಲಿಯ ಅಣ್ಣಾವ್ರು…ಎಲ್ಲಿಯ ಸುದೀಪ್,ಯಶ್….

ಇದು ರವಿಕುಮಾರ್ ಅವರ ಮಾತುಗಳು ಮಾತ್ರವಲ್ಲ. ಚಿತ್ರರಂಗದವರು ಹಣ ಪಡೆದುಕೊಂಡು ಚುನಾವಣಾ ಪ್ರಚಾರ ಮಾಡುವುದು ಅಭಿಮಾನಿಗಳಿಗೆ ಮಾಡುವ ದ್ರೋಹವಾಗುತ್ತದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಕೇಳಿಬರುತ್ತಿದೆ.

Leave a Comment