ಸಿನೆಮಾ ಸುದ್ದಿಗಳು

ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಕನ್ನಡದ ಪವರ್ ಸ್ಟಾರ್. ಹೇಗಿತ್ತು ಗೊತ್ತಾ ಆ ವಿಶೇಷ ಸಂದರ್ಭ?

ದೇಶದ ಪವರ್ ಫುಲ್ ರಾಜಕಾರಣಿಗಳ ಸಾಲಿನಲ್ಲಿ ಮೊದಲ‌ ಸ್ಥಾನದಲ್ಲಿದ್ದಾರೆ ಪ್ರಧಾನಿ ಮೋದಿ.  ಈ ಪವರ್ ಪಿಎಂ ರನ್ನು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೇಟಿ ಮಾಡಿ ಗೌರವಿಸಿದ್ದಾರೆ.

ಹೌದು ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಬಿಜೆಪಿ‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ದೆಹಲಿಗೆ ವಾಪಸ್ಸಾಗುವ ಮುನ್ನ ಎಚ್.ಎ.ಎಲ್.ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ‌ ಜೊತೆ  ಭೇಟಿಯಾದರು.

 

ಪ್ರಧಾನಿ‌ ಮೋದಿಯವರಿಗೆ ಶಾಲು ಹೊದೆಸಿ, ಹಾರ ಹಾಕಿ ಸನ್ಮಾನಿಸಿದ ಪುನೀತ್ ರಾಜಕುಮಾರ್, ತಾವು ಬರೆದ ಡಾ. ರಾಜಕುಮಾರ್ ಪರ್ಸನ್ ಬಿಹೈಂಡ್ ದ್ ಪರ್ಸನಾಲಿಟಿ ಪುಸ್ತಕ ಹಾಗೂ ಡಾ.ರಾಜ್ ಕುಮಾರ್ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.

ಬಳಿಕ‌ ತಾವು ಪ್ರಧಾನಿ ಮೋದಿ ಭೇಟಿ ಮಾಡಿದ ವಿಚಾರವನ್ನು ಟ್ವಿಟರ್ ಹಾಗೂ ಪೇಸ್ ಬುಕ್ ನಲ್ಲಿ‌ ಹಂಚಿಕೊಂಡಿರುವ ಅಪ್ಪು, ಡೈನಾಮಿಕ್ ಪ್ರಧಾನಿ ಮೋದಿಯವರ ಸರಳತೆ ಹಾಗೂ  ಉತ್ಸಾಹವನ್ನು ಶ್ಲಾಘಿಸಿದ್ದಾರೆ. ಇನ್ನು ಸರ್ಕಾರದ ಹಲವು ಯೋಜನೆಗಳ‌ ಅಂಬಾಸಿಡರ್ ಕೂಡ ಆಗಿರುವ ಪುನೀತ್ ರಾಜಕುಮಾರ್ ಮೋದಿಯವರನ್ನು ಭೇಟಿ‌ ಮಾಡಿದ್ದು ಅಪ್ಪು ಅಭಿಮಾನಿಗಳಿಗೆ‌ ಸಂತೋಷ ತಂದಿದ್ದರೇ ಉಳಿದವರಲ್ಲಿ ರಾಜಕೀಯ ಲೆಕ್ಕಾಚಾರ ಹುಟ್ಟುಹಾಕಿದೆ.

Leave a Comment