ಸಿನೆಮಾ ಸುದ್ದಿಗಳು

ತನಗಿಂತ 10 ವರ್ಷದ ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್​ ಮಾಡ್ತಿರೋ ಬಾಲಿವುಡ್ ನ ಈ ನಟಿಯ ಪ್ರಿಯಕರ ಯಾರು ಗೊತ್ತಾ?!

ಬಾಲಿವುಡ್​ನಿಂದ ಹಾಲಿವುಡ್​​ಗೆ ಭಡ್ತಿ ಪಡೆದು ಬ್ಯುಸಿಯಾಗಿರುವ ನಟಿ ಪ್ರಿಯಾಂಕ ಚಿತ್ರಗಳಿಗಿಂತ ಹೆಚ್ಚು ತಮ್ಮ ಪರ್ಸನಲ್ ಲೈಫ್​, ಟ್ರೆಂಡ್​,ಹೇರ್ ಸ್ಟೈಲ್​ಗಳಿಂದಲೇ ಸುದ್ದಿಯಾಗುತ್ತಾರೆ. ಈ ಭಾರಿ ಕೂಡ ಪ್ರಿಯಾಂಕ ತಮ್ಮ ಬಾಯ್​ಪ್ರೆಂಡ್​ ಕಾರಣಕ್ಕೆ ಬಿಸಿ-ಬಿಸಿ ಸುದ್ದಿಯಾಗಿದ್ದಾರೆ. ಪಿಗ್ಗಿ ತಮಗಿಂತ 10 ವರ್ಷ ಚಿಕ್ಕ ಹುಡುಗನ ಜೊತೆ ಡೇಟಿಂಗ್​ನಲ್ಲಿದ್ದಾರೆ ಅನ್ನೋದು ಈಗ ಬಾಲಿವುಡ್​-ಹಾಲಿವುಡ್​ ಅಂಗಳದಲ್ಲಿ ಚರ್ಚೆಯ ವಿಷಯ.


ಈಗಾಗಲೇ 35 ರ ಹೊಸ್ತಿಲಲ್ಲಿರುವ ಪ್ರಿಯಾಂಕ್ ಚೋಪ್ರಾ ಯಾವುದೇ ಸಂದರ್ಭದಲ್ಲೂ ತಮ್ಮ ಮದುವೆ ವಿಚಾರವನ್ನು ಬಿಚ್ಚಿಟ್ಟಿಲ್ಲ. ಹೀಗಾಗಿ ಪಿಗ್ಗಿಯ ಹುಡುಗ ಯಾರೋ ಅನ್ನೋ ಕುತೂಹಲ ಎಲ್ಲರಿಗೂ ಇದೆ. ಹೀಗೆ ಎಲ್ಲರೂ ಪಿಗ್ಗಿಯ ಕನಸಿನ ಹುಡುಗ ಯಾರು ಅನ್ನೋದನ್ನು ಹುಡುಕುತ್ತಿರುವಾಗಲೇ ಪಿಗ್ಗಿ ಅಮೇರಿಕದ ಹುಡುಗನ ಜೊತೆ ಲೇಟ್​ ನೈಟ್​ ರೆಸ್ಟೋರೆಂಟ್​ಗಳ ಅತಿಥಿಯಾಗುತ್ತಿದ್ದು, ಅಮೇರಿಕಾ ಮೂಲದ ಗಾಯಕ ನಿಕ್ ಜೋನಸ್ ಹೆಸರು ಪಿಗ್ಗಿ ಜೊತೆ ತಳಕು ಹಾಕಿಕೊಂಡಿದೆ.

 

ಕೇವಲ ಡೇಟಿಂಗ್ ಮಾತ್ರವಲ್ಲದೇ ಹುಡುಗನ ವಯಸ್ಸಿನ ಕಾರಣಕ್ಕೂ ಪ್ರಿಯಾಂಕ ಆಯ್ಕೆ ಸುದ್ದಿಯಾಗಿದ್ದು, 10 ವರ್ಷದ ಚಿಕ್ಕ ವಯಸ್ಸಿನ ಹುಡುಗನ ಜೊತೆ ಪ್ರಿಯಾಂಕ ಸರಸವಾಡ್ತಿರೋದು ಹಾಲಿವುಡ್​-ಬಾಲಿವುಡ್​ ಜನರ ಹುಬ್ಬೇರುವಂತೆ ಮಾಡಿರೋದಂತು ಸತ್ಯ.

Leave a Comment