ಸಿನೆಮಾ ಸುದ್ದಿಗಳು

ಪಿಗ್ಗಿ ಪ್ರಿಯಾಂಕ ಚೋಪ್ರಾ ಬಟ್ಟೆ ಕಟ್ ಮಾಡಿದ ಕ್ರಟೆಲ್ – ಪ್ರಿಯಾಂಕ ಫ್ಯಾಶನ್ ಫೋಟೋ ವೈರಲ್

Views:
122

ಬಾಲಿವುಡ್​ ಪಿಗ್ಗಿ ಪ್ರಿಯಾಂಕ ಚೋಪ್ರಾ ಚಿತ್ರಗಳಿಂದ ಸುದ್ದಿಯಾಗೋದಿಕ್ಕಿಂತ ಜಾಸ್ತಿ ತಮ್ಮ ಆಟಿಟ್ಯೂಡ್​​ಗಳಿಂದಲೇ ಸುದ್ದಿಯಾಗ್ತಾರೆ. ಈ ಹಿಂದೆ ಪ್ರಧಾನಿ ಮೋದಿ ಎದುರು ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತು ಸುದ್ದಿಯಾಗಿದ್ದ ಪ್ರಿಯಾಂಕ್​ ಬಳಿಕ ಮೋದಿ ಭೇಟಿ ವೇಳೆ ಧರಿಸಿದ್ದ ಬಟ್ಟೆಯಿಂದಲೂ ವಿವಾದಕ್ಕೆ ಗುರಿಯಾಗಿದ್ದರು.

  

ಇಂತಿಪ್ಪ ಪ್ರಿಯಾಂಕ್ ಇದೀಗ ಮತ್ತೊಮ್ಮೆ ತಮ್ಮ ಬಟ್ಟೆಯ ತೂತಿನಿಂದ ಸುದ್ದಿಯಾಗಿದ್ದಾರೆ. ಇದೇನು ಬಟ್ಟೆಯ ತೂತಿನ ಸುದ್ದಿ ಅಂದ್ರಾ ಹೌದು ಇತ್ತೀಚಿಗೆ ಪಿಗ್ಗಿ ತೊಟ್ಟಿದ್ದ ಬಟ್ಟೆಯೊಂದು ಹರಿಯಬಾರದ ಜಾಗದಲ್ಲಿ ಹರಿದಿದ್ದು ಮಾಧ್ಯಮಗಳ ಕಣ್ಣಿಗೆ ಬಿದ್ದು ಸುದ್ದಿಯಾಗಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪ್ರಿಯಾಂಕ ಚೋಪ್ರಾ, ತಮ್ಮ ವಸ್ತ್ರವಿನ್ಯಾಸಕ ಮಿಮಿ ಕಟ್ರೆಲ್ ವಿನ್ಯಾಸಗೊಳಿಸಿರುವ ನೀಲಿ ಬಣ್ಣದ ಸೂಟ್ ಡ್ರೆಸ್ ಧರಿಸಿ ಬಂದಿದ್ದಾರೆ. ಈ ಡ್ರೆಸ್​ ನ ಜೊತೆ ಕೈಯಲ್ಲೊಂದು ಮಿನಿ ಪರ್ಸ್​ ಹಿಡಿದ ಪ್ರಿಯಾಂಕ್​​ ಎಲ್ಲರ ಗಮನ ಸೆಳೆದಿದ್ದಾರೆ. ಆದರೇ ಗಮನ ಸೆಳೆದಿದ್ದು ಡ್ರೆಸ್​ನಿಂದ ಅಲ್ಲ ಅನ್ನೋದು ಪ್ರಿಯಾಂಕ ಅಭಿಮಾನಿಗಳ ಅಂಬೋಣ.

ಯಾಕೆ ಅಂದ್ರಾ ಮಿಮಿ ಕ್ರಟೆಲ್​​ ವಿನ್ಯಾಸಗೊಳಿಸಿದ ಈ ಡ್ರೆಸ್​ ಹರಿಯಬಾರದ ಜಾಗದಲ್ಲಿ ಹರಿದಿತ್ತು. ಅಲ್ಲಲ್ಲ….ಈ ಡ್ರೆಸ್​ನ್ನು ಎದೆಯ ಭಾಗದಲ್ಲಿ ಎರಡು ಕಡೆ ಕತ್ತರಿಸಿದಂತೆ ವಿನ್ಯಾಸಗೊಳಿಸಲಾಗಿತ್ತು. ಇದು ಪ್ರಿಯಾಂಕಗೆ ಫ್ಯಾಶನ್​ ಅನ್ನಿಸಿದ್ದರೇ, ಅಭಿಮಾನಿಗಳಿಗೆ ಮುಜುಗರ ಉಂಟುಮಾಡುವಂತಿದೆ. ಅಷ್ಟೇ ಅಲ್ಲ ಈ ಪೋಟೋ ಸಖತ್​ ವೈರಲ್​ ಆಗಿದ್ದು, ಟೀಕೆಗೂ ಗುರಿಯಾಗಿದೆ.

Leave a Comment