ರಾಜಕೀಯ ಸಿನೆಮಾ ಸುದ್ದಿಗಳು

ಟ್ವಿಟ್ಟರ್ ನಲ್ಲೇ ಓಟು ಹಾಕಿದ ನಟಿ ರಮ್ಯಾ – ಕೈ ಅಭ್ಯರ್ಥಿಗೆ ಮತ ಹಾಕಲು ಊರಿಗೆ ಬಾರದ ಪದ್ಮಾವತಿ

Views:
42

ಕರ್ನಾಟಕದ ಭವಿಷ್ಯದ ರಾಜಕಾರಣಿ ಎಂದೇ ಬಿಂಬಿತವಾಗುವ ಯುವನಾಯಕಿ ಹಾಗೂ ಮಾಜಿ ಸಂಸದೆ ರಮ್ಯ ಕಾಂಗ್ರೆಸ್​ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆಯಾಗಿದ್ದರೂ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಹೌದು ಮಾಜಿ ಸಂಸದೆಯಾಗಿದ್ದರೂ ರಮ್ಯ ಮತದಾನದಿಂದ ದೂರ ಉಳಿದಿದ್ದು, ಆ ಮೂಲಕ ಅಗತ್ಯವಿದ್ದಾಗ ಮಾತ್ರ ರಾಜಕೀಯ ಮಾಡ್ತಾರಾ? ರಮ್ಯಗೆ ರಾಜಕೀಯ ಅನುಕೂಲಸಿಂಧುವಾ ಅನ್ನೋ ಅನುಮಾನ ಹುಟ್ಟುಹಾಕಿದೆ.

 
ಈ ಹಿಂದೆ ಚಿತ್ರನಟಿ ರಮ್ಯ ಕಾಂಗ್ರೆಸ್​​ನಿಂದ ಮಂಡ್ಯದ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ತಾವು ಮಂಡ್ಯದಲ್ಲಿ ಸ್ಪರ್ಧಿಸಿದ ವೇಳೆ ಮತದಾನ ಮಾಡಿದ್ದ ರಮ್ಯ, ಮಂಡ್ಯದಲ್ಲೇ ಮನೆ ಮಾಡಿ, ಜಿಲ್ಲೆಯ ಸಂಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರು. ಅದರೇ ಎಲ್ಲವೂ ಕೇವಲ ಭರವಸೆಯಾಗಿಯೇ ಉಳಿದಿದ್ದು, ಮಂಡ್ಯದಿಂದ ದೆಹಲಿಗೆ ಹಾರಿದ ರಮ್ಯ ಮತ್ತೆ ಜಿಲ್ಲೆಯತ್ತ ಮುಖ ಮಾಡಲೇ ಇಲ್ಲ.

ಈ ಭಾರಿ ಅಂಬರೀಶ್​ಗೆ ಟಿಕೇಟ್​ ತಪ್ಪಿದರೇ ರಮ್ಯ ನಿಲ್ಲುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಆದರೇ ಕಾಂಗ್ರೆಸ್​ನಿಂದ ಸ್ಪರ್ಧಿಸಿರುವ ಅಭ್ಯರ್ಥಿಯನ್ನು ಬೆಂಬಲಿಸಲು ಕೂಡ ರಮ್ಯ ಪ್ರಚಾರಕ್ಕೂ ಆಗಮಿಸಿರಲಿಲ್ಲ. ಅವಾಗಲೇ ರಮ್ಯನಿಗೆ ಮಂಡ್ಯದ ಬಗ್ಗೆ ಇರುವ ಪ್ರೀತಿ ಅರ್ಥವಾಗಿತ್ತು. ಆದರೇ ಮತದಾನಕ್ಕಾದರೂ ರಮ್ಯ ಬರುತ್ತಾರೆ ಎಂದು ಮಂಡ್ಯದ ಜನರು ನಂಬಿದ್ದರು.

ಆದರೇ ಜವಾಬ್ದಾರಿಯುತ ಸ್ಥಾನದಲ್ಲಿರುವ ರಮ್ಯ ತಮ್ಮ ಕರ್ತವ್ಯವಾಗಿರುವ ಮತದಾನವನ್ನೇ ಮರೆತಿದ್ದು ಇದೀಗ ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯ ನಗರದಲ್ಲಿರುವ ರಮ್ಯ ಮತದಾನ ಕ್ರಮ ಪಟ್ಟಿಯ ಪ್ರಕಾರ ಆಕೆಯ ಸಂಖ್ಯೆ 420. ಆದರೇ ಸಂಖ್ಯೆಯಂತೆಯೇ ರಮ್ಯಳೂ ಪಕ್ಕಾ ಪೋರ್​ ಟೆಂಟ್ವಿಯಂತೆ ವರ್ತಿಸಿದ್ದಾಳೆ. ಮತದಾನಕ್ಕೆ ಬಾರದ ನಾಯಕಿ ನಾಳೆ ತಮ್ಮ ಪ್ರತಿನಿಧಿಯಾಗಿ ಕಷ್ಟ ಸುಖಗಳಿಗೆ ಸ್ಪಂದಿಸ್ತಾರೆ ಅನ್ನೋದನ್ನು ನಂಬೋದು ಹೇಗೆ ಅಂತ ಪ್ರಶ್ನಿಸ್ತಾರೆ ಮಂಡ್ಯದ ಜನತೆ.

Leave a Comment