Uncategorized ರಾಜಕೀಯ

ಆಷಾಢ ಮುಗಿದರೂ ಅತೃಪ್ತರ ಕನಸಿಗೆ ವಿಘ್ನ- ಚುನಾವಣೆ ಹಿನ್ನೆಲೆ ಸಂಪುಟ ವಿಸ್ತರಣೆ ಮತ್ತೆ ವಿಳಂಬ

Views:
29

ಜೆಡಿಎಸ್​-ಕಾಂಗ್ರೆಸ್​ ನೇತೃತ್ವದ ಮತ್ತೊಮ್ಮೆ ಅತೃಪ್ತರ ಮುನಿಸಿಗೆ ಮುನ್ನುಡಿ ಬರೆಯುವ ಲಕ್ಷಣ ದಟ್ಟವಾಗಿದೆ. ಹೌದು ಅಳುವ ಮಕ್ಕಳಿಗೆ ಚಾಕೋಲೇಟ್​ ತೋರಿಸಿ ಸುಮ್ಮನಿರಿಸುವಂತೆ ರಾಜ್ಯ ಸರ್ಕಾರ ಅತೃಪ್ತರ ಮೂಗಿಗೆ ಅಷಾಡದ ತುಪ್ಪ ಒರೆಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿತ್ತು. ಆದರೇ ಇದೀಗ ಆಷಾಢ ಮಾಸ ಮುಗಿದರೂ ಸಚಿವ ಸಂಪುಟ ವಿಸ್ತರಣೆಯಾಗುವ ಮುನ್ಸೂಚನೆ ಇಲ್ಲವಾಗಿದ್ದು, ಇದು ಅತೃಪ್ತರ ಅಸಮಧಾನಕ್ಕೆ ಕಾರಣವಾಗಿದೆ.

 

ಕಾಂಗ್ರೆಸ್​ ಹಾಗೂ ಜೆಡಿಎಸ್​ನ ಹಲವು ನಾಯಕರು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸೇರುವ ಕನಸಿನಲ್ಲಿದ್ದರು. ಆದರೇ ಬಹುತೇಕ ಕನಸು ನನಸಾಗಿರಲಿಲ್ಲ. ಈ ವೇಳೆ ಹಲವು ಹಿರಿಯ ನಾಯಕರು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಲ್ಲದೇ ಬಂಡಾಯದ ಬಾವುಟವನ್ನು ಹಾರಿಸಿದ್ದರು. ಈ ವೇಳೆ ಎಚ್ಚೆತ್ತ ಕಾಂಗ್ರೆಸ್ ಹೈಕಮಾಂಡ್​ ಬಹುತೇಕ ನಾಯಕರಿಗೆ ಆಷಾಡದ ಬಳಿಕ ಸಂಪುಟ ವಿಸ್ತರಣೆ ಮಾಡುವ ಭರವಸೆ ನೀಡಿತ್ತು. ಆದರೇ ಇದೀಗ ಆಷಾಢ ಮುಗಿಯುತ್ತ ಬಂದರೂ ಸಂಪುಟ ವಿಸ್ತರಣೆಯಾಗುವ ಲಕ್ಷಣವಿಲ್ಲ. ಕಾರಣ ಸ್ಥಳೀಯ ಸಂಸ್ಥೆಯ ಚುನಾವಣೆ ರಾಜ್ಯದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಈ ವೇಳೆ ಸಂಪುಟ ವಿಸ್ತರಣೆಯ ರಿಸ್ಕ್​ಗೆ ಕೈಹಾಕುವ ಸಾಧ್ಯತೆ ಕಡಿಮೆ ಎಂದೇ ವಿಶ್ಲೇಷಿಸಲಾಗುತ್ತಿದೆ.

 

ಇನ್ನೊಂದೆಡೆ ಈಗಾಗಲೇ ಆಷಾಡ ಮಾಸದ ಹಿನ್ನೆಲೆಯಲ್ಲಿ ಕಾದಿರುವ ನಾಯಕರು ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾದಲ್ಲಿ ಖಂಡಿತಾ ಬಂಡಾಯ ಏಳುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಿಎಂ ಕುಮಾರಸ್ವಾಮಿ ಆಷಾಡದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದಿದ್ದರು. ಅಷ್ಟೇ ಅಲ್ಲ ಇದಕ್ಕೆ ಕಾಂಗ್ರೆಸ್ ರಾಹುಲ್ ಗಾಂಧಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದರು. ಇದು ಅಸಮಧಾನಗೊಂಡವರ ಮಂದಹಾಸಕ್ಕೆ ಕಾರಣವಾಗಿತ್ತು.

ಇದೀಗ ನಿನ್ನೆ ಚುನಾವಣಾ ಆಯೋಗ ರಾಜ್ಯದ 29 ನಗರ ಸಭೆ, 53 ಪುರಸಭೆ ಹಾಗೂ 23 ಪಟ್ಟಣಪಂಚಾಯತ್​ ಗೆ ಚುನಾವಣೆ ನಡೆಸಲು ದಿನಾಂಕ ಘೋಷಿಸಿದೆ. ಅಗಸ್ಟ್ 29 ರಂದು ಚುನಾವಣೆ ನಡೆಯಲಿದ್ದು, ಸಪ್ಟೆಂಬರ್ 1 ರಂದು ಫಲಿತಾಂಷ್ ಪ್ರಕಟವಾಗಲಿದೆ. ಹೀಗಾಗಿ ಈ ವೇಳೆ ಸರ್ಕಾರ ಸಂಪುಟ ವಿಸ್ತರಣೆ ಕೈಗೊಳ್ಳೋದು ಡೌಟ್​. ಹೀಗಾಗಿ ಸ್ಥಾನ ವಂಚಿತರು ಮತ್ತಷ್ಟು ಅಸಮಧಾನಗೊಳ್ಳಲಿದ್ದು, ಜೆಡಿಎಸ್​-ಕಾಂಗ್ರೆಸ್ ಪಕ್ಷದ ಆಂತರಿಕ ಹಿತಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಜೆಡಿಎಸ್​ ಹಾಗೂ ಕಾಂಗ್ರೆಸ್​ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮುಂದುವರೆಸಬೇಕೆ ಬೇಡವೇ ಎಂಬ ಚರ್ಚೆಯಲ್ಲೂ ತೊಡಗಿರೋದರಿಂದ ಪ್ರಸಕ್ತ ಸಂಪುಟ ವಿಸ್ತರಣೆ ಕನಸಿನ ಮಾತಾಗಿದೆ. ಹೀಗಾಗಿ ಇದು ಅತೃಪ್ತರಿಗೆ ಹಿನ್ನಡೆ ಉಂಟು ಮಾಡಿದ್ದು, ಬಂಡಾಯ ಮತ್ತಷ್ಟು ತೀವ್ರವಾಗೋ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

Leave a Comment