ಅಪರಾಧ ಸುದ್ದಿಗಳು

ಶ್ರೀರಾಮಸೇನೆ ಸೇರಿದ್ಲು ರೌಡಿಯಶಸ್ವಿನಿ- ಇನ್ನು ಮೇಲೆ ಶ್ರೀರಾಮಸೇನೆ ನಗರ ಘಟಕದಲ್ಲಿ ಮೀಟರ್ ಬಡ್ಡಿಕ್ವೀನ್​ ಹವಾ!

ಪ್ರತಿಮಾತಿಗೂ ಕಟ್ಟರ್ ಹಿಂದುತ್ವವಾದಿಗಳಂತೆ ವರ್ತಿಸುವ ಶ್ರೀರಾಮಸೇನೆ ತನ್ನ ಸಿದ್ದಾಂತಗಳಲ್ಲಿ ಹಾಗೂ ನಿಯಮಗಳಲ್ಲಿ ಕಾಂಪ್ರಮೈಸ್​ ಮಾಡ್ಕೊಳ್ಳೋಕೆ ಹೊರಟಿದ್ಯಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿರೋದು ನಿನ್ನೆ ನಗರದಲ್ಲಿ ನಡೆದ ಶ್ರೀರಾಮಸೇನೆ ಪದಗ್ರಹಣ ಸಮಾರಂಭ.

ಅಷ್ಟಕ್ಕೂ ಈ ಪದಗ್ರಹಣ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಆಯ್ತಾ ಅಂತ ಕೇಳ್ಬೇಡಿ. ಹಾಗೇನು ಆಗಿಲ್ಲ. ಬದಲಾಗಿ ಶ್ರೀರಾಮಸೇನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಡಾ. ಯಶಸ್ವಿನಿ ಗೌಡ್ ಆಯ್ಕೆಯಾಗಿದ್ದಾಳೆ. ಇದರಲ್ಲೇನು ವಿಶೇಷವಿದೆ ಅಂದರೇ ಹೀಗೆ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾಗಿರೋ ಯಶಸ್ವಿನಿ ಕೇವಲ ಒರ್ವ ಹೋರಾಟಗಾರ್ತಿ ಮಹಿಳೆ ಅಂತ ನೀವಂದ್ರು ಕೊಂಡ್ರೇ ಅದು ತಪ್ಪು. ಯಶಸ್ವಿನಿ ಕೇವಲ ಸಾಮಾನ್ಯ ಹೆಣ್ಣುಮಗಳಲ್ಲ, ಅಥವಾ ಅಪ್ಪಟ ಹೋರಾಟಗಾರ್ತಿಯಲ್ಲ….ಆಕೆ ನಗರದ ಎರಡು ಪೊಲೀಸ್ ಠಾಣೆಗಳ ರೌಡಿಶೀಟರ್​.

ನಗರದಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿರುವ ಮೀಟರ್ ಬಡ್ಡಿ ದಂಧೆಯಲ್ಲಿ ಯಶಸ್ವಿನಿ ಗೌಡ್​ ದೊಡ್ಡ ಹೆಸರು. ಮೊದಲ ಗಂಡನ ಮರಣದ ಬಳಿಕ ಸಿಕ್ಕ ಇನ್ಯೂರೆನ್ಸ್​ ಹಣದಲ್ಲಿ ಈಕೆ ಬ್ಯಾಂಕ್​ ತೆರೆದು ಅಮಾಯಕರಿಗೆ ಸಾಲ ನೀಡಿ ಮೀಟರ್​ ಬಡ್ಡಿ ಹೆಸರಲ್ಲಿ ಅವರ ರಕ್ತಹೀರುವ ಈಕೆ ಬಸವನಗುಡಿ ಹಾಗೂ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ರೌಡಿಶೀಟರ್​.

ಅದಲ್ಲದೇ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಈಕೆಯ ಮೇಲೆ ಹಲವು ಪ್ರಕರಣಗಳಿವೆ. ಈಕೆಯ ಪತಿ ಮಹೇಶ್ ಅಲಿಯಾಸ್ ಧಡಿಯ ಮಹೇಶ್ ಕೂಡ ನಗರದ ರೌಡಿಶೀಟರ್​ಗಳಲ್ಲಿ ಒಬ್ಬ. ಆದರೇ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಶ್ರೀರಾಮಸೇನೆ ಯಶಸ್ವಿನಿಗೆ ಮಹಿಳಾ ಘಟಕದ ಅಧ್ಯಕ್ಷೆ ಪಟ್ಟ ನೀಡಿದ್ದು, ಶ್ರೀರಾಮಸೇನೆಯ ವರ್ಚಸ್ಸಿನ ಮೇಲೆ ಹಲವು ಪ್ರಶ್ನೆ ಹುಟ್ಟುಹಾಕಿದೆ.

ನಿನ್ನೆ ನಗರದ ರಜತಾದ್ರಿ ಹೊಟೇಲ್​ನಲ್ಲಿ ನಡೆದ ಯಶಸ್ವಿನಿ ಗೌಡ್ ಪದಗ್ರಹಣ ಸಮಾರಂಭದಲ್ಲಿ ಖುದ್ದು ಶ್ರೀರಾಮಸೇನೆಯ ಸಂಸ್ಥಾಪಕ ಮುತಾಲಿಕ್ ಕೂಡ ಭಾಗಿಯಾಗಿದ್ದರು. ಮುತಾಲಿಕ್​ರಂತಹ ಹಿರಿಯರಿದ್ದು, ಯಶಸ್ವಿನಿ ಅಂತಹ ಬಡ್ಡಿಮೀಟರ್ ಮಾಫಿಯಾದ ಡಾನ್​ ಶ್ರೀರಾಮಸೇನೆಯ ಪದಾಧಿಕಾರಿಯಾಗಿದ್ದು ಮಾತ್ರ ದುರಂತವೇ ಸರಿ.

ಈ ಬಗ್ಗೆ ಶ್ರೀರಾಮಸೇನೆಯ ಮುಖಂಡರನ್ನು ಪ್ರಶ್ನಿಸಿದರೇ ಮಾಡಿದ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಬದಲು, ಉಡಾಫೆಯ ಉತ್ತರವೇ ದಕ್ಕಿತು. ಹೆಸರು ಹೇಳಲಿಚ್ಚಿಸದ ಶ್ರೀರಾಮಸೇನೆ ಮುಖಂಡರೊಬ್ಬರು, ವಿಧಾನಸೌಧದಲ್ಲೇ ನೂರಾರು ಜನ ರೌಡಿಶೀಟರ್​ಗಳು ತುಂಬಿರುವಾಗ ನಮ್ಮ ಸೇನೆಯಲ್ಲಿ ಒಬ್ಬ ಮಹಿಳೆಗೆ ಸ್ಥಾನ ನೀಡಿದ್ದು ತಪ್ಪಾ? ಇಷ್ಟಕ್ಕೂ ರೌಡಿಶೀಟರ್​ ಸಮಾಜಸೇವೆ ಮಾಡಬಾರದು ಅಂತ ಎಲ್ಲಾದ್ರೂ ರೂಲ್ಸ್​ ಇದ್ಯಾ ಅಂತ ನಮ್ಮನ್ನೇ ತಬ್ಬಿಬ್ಬು ಮಾಡಿದರು. ಒಟ್ಟಿನಲ್ಲಿ ರಾಜ್ಯದಲ್ಲಿ ಸಂಘಟನೇ ಕಾನೂನು ಕೈಗೆತ್ತಿಕೊಂಡವರ ಕೈವಶವಾಗ್ತಿರೋದು ಮಾತ್ರ ನಿಜಕ್ಕೂ ಆತಂಕಕಾರಿ ಬೆಳವಣಿಗೆ .

Leave a Comment