ರಾಜಕೀಯ ವಿಡಿಯೋ

ನಾಚಿ‌ ನೀರಾದಾಗ ಶೋಭಾ ಕರಂದ್ಲಾಜೆ ಹೇಗಿರುತ್ತಾರೆ ಗೊತ್ತಾ ? ಸದಾ ಬೊಬ್ಬಿರಿಯುವ ಶೋಭಾರನ್ನು ಹೀಗೂ ನೋಡಲೊಂದು ಅವಕಾಶ : EXCLUSIVE

Views:
428

ಶೋಭಾ ಕರಂದ್ಲಾಜೆ. ಹೆಸರು ಕೇಳಿದಾಕ್ಷಣ ಬೆಂಕಿ ನೆನಪಾಗುತ್ತದೆ. ಅವರ ಮೈಕ್ ಹಿಡಿದರೆಂದರೆ ಬೆಂಕಿ ಮತ್ತು ಬಿರುಗಾಳಿ ಒಟ್ಟಿಗೇ ಬಂದಂತೆ ಅನ್ನಿಸುತ್ತದೆ. ಅಂತಹ ಪ್ರಖರತೆ, ಅಂತಹ ಇರಿತ ಶೋಭಾ ಮಾತುಗಳಲ್ಲಿ ಇರುತ್ತದೆ.

ಈ ರೀತಿ ಬೆಂಕಿಯುಗುಳುವ ಶೋಭಾ ಕರಂದ್ಲಾಜೆಯ ದ್ವನಿ ಯಾವ ಗಂಡಸಿನ ಗಡಸು ದ್ವನಿಗೂ ಕಡಿಮೆಯೇನಲ್ಲ. ಹೆಣ್ಣು ಗಂಡಿಗಿಂತ ಕೀಳಲ್ಲ ಎಂಬುದಕ್ಕೆ ಶೋಭಾ ಉತ್ತಮ ಉದಾಹರಣೆ. ಗಂಡುಬೀರಿಯಂತೆ ಮಾತನಾಡುತ್ತಾರೆ, ಕೇಳೋಕೇ ಕಿರಿಕಿರಿ, ಅವರೇನು ಹೆಣ್ಣಾ ಎಂದು ಅವರ ಹಿಂದಿನಿಂದ ಆಡಿಕೊಳ್ಳುವವರು ಮಹಿಳೆಯರನ್ನು ನೋಡುವ ಮನಸ್ಥಿತಿ ಸೂಚಿಸುತ್ತದೆ.

ಹಾಗಂತ ಶೋಭಾ ಕರಂದ್ಲಾಜೆ ಇರುವುದೇ ಹಾಗೆ ಎಂದೇನಲ್ಲ. ಅವರು ಒಮ್ಮೊಮ್ಮೆ ನಾಚಿ ನೀರಾಗುತ್ತಾರೆ. ಆದರೆ ಅದನ್ನು ನೀವ್ಯಾರೂ ನೋಡೊಕೆ ಸಾಧ್ಯವಿಲ್ಲ. ಶೋಭಾ ಕರಂದ್ಲಾಜೆಯವರು ತಲೆಕೆಳಗೆ ಹಾಕಿಕೊಂಡು, ಕಾಲಿನ ಹೆಬ್ಬೆರಳಿನಿಂದ ನೆಲ ಕೆರೆಯುತ್ತಾ ನಾಚಿ ನೀರಾದ ದೃಶ್ಯವನ್ನು ನಾವು ತೋರಿಸುತ್ತೇವೆ.  ನೋಡಿ…………..

 

 

Leave a Comment