ರಾಜಕೀಯ

ಸೋತಲ್ಲೇ ಗೆಲ್ಲಲು ಸಿದ್ದು ಪ್ಲ್ಯಾನ್​- ಮೈಸೂರಿನಲ್ಲಿ ಸಿಂಹದ ಎದುರು ಸಿದ್ಧರಾಮಯ್ಯ ಪ್ರತಾಪ- ಜೆಡಿಎಸ್​-ಕಾಂಗ್ರೆಸ್​ ಮೈತ್ರಿಕೂಟದ ಎದುರು ಗೆಲ್ತಾರಾ ಪ್ರತಾಪ್ ಸಿಂಹ!

Views:
1270

ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಸೂಕ್ತಸ್ಥಾನಮಾನ ದಕ್ಕದ ಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮುನಿಸಿಕೊಂಡಿದ್ದರು, ಅಷ್ಟೇ ಹಲವು ಭಾರಿ ಪರೋಕ್ಷವಾಗಿ ತಮ್ಮ ಅಸಮಧಾನ ಪ್ರಕಟಿಸಿದ್ದರು. ಇದೀಗ ಈ ಎಲ್ಲ ಅಸಮಧಾನಗಳಿಗೆ ಹೈಕಮಾಂಡ್​ ಮದ್ದು ಹುಡುಕಿದ್ದು, ಮಾಜಿಸಿಎಂ ಸಿದ್ದು, ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೈಸೂರಿನಿಂದ ಅದೃಷ್ಟ ಪರೀಕ್ಷೆಗೆ ಮುಂಧಾಗುವ ಮುನ್ಸೂಚನೆ ದೊರೆತಿದೆ.

 

ಹೌದು ಈಗಾಗಲೇ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಸಿದ್ಧರಾಮಯ್ಯ ಚುನಾವಣಾ ಉಸ್ತುವಾರಿ ಹೊರುವ ಮುನ್ಸೂಚನೆ ದೊರೆತಿದೆ. ಹೀಗಿರುವಾಗಲೇ ಇದೀಗ ಕಾಂಗ್ರೆಸ್​ ಹೈಕಮಾಂಡ್​​ ರಾಜ್ಯದ ಪ್ರತಿಷ್ಠೆಯ ಕಣವಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಿದ್ಧರಾಮಯ್ಯ ಕಣಕ್ಕಿಳಿಸಲು ಚಿಂತನೆ ನಡೆಸಿದ ಎಂಬ ಮಾಹಿತಿ ಲಭ್ಯವಾಗಿದ್ದು ಒಂದೊಮ್ಮೆ ಸಿದ್ದು ಕಣಕ್ಕಿಳಿದರೇ ಪ್ರತಾಪ ಸಿಂಹ್​​ ಗೆ ಸಂಕಷ್ಟ ಎದುರಾಗುವ ಲಕ್ಷಣವಿದೆ.

ಕಳೆದ ಲೋಕಸಭಾ ಎಲೆಕ್ಷನ್​ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪತ್ರಕರ್ತ ಪ್ರತಾಪ್ ಸಿಂಹ್ ಕೇವಲ 30000 ಮತಗಳ ಅಂತರದಿಂದ ಗೆಲುವು ಸಾಧಿಸಿ ಲೋಕಸಭೆ ಮೆಟ್ಟಿಲೇರಿದ್ದರು. ಆದರೇ ಈ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೆ ಹಾಗೂ ಕಾಂಗ್ರೆಸ್​ನ ಹಿರಿಯ ನಾಯಕರಿಗೆ ಮತ್ತೊಮ್ಮೆ ಅವಕಾಶ ನೀಡಲು ಹೈಕಮಾಂಡ್​ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಿದ್ಧು ಮೈಸೂರಿನಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಮೈಸೂರಿನಿಂದ ಸಿದ್ಧರಾಮಯ್ಯ ಕಣಕ್ಕಿಳಿದಲ್ಲಿ, ಪ್ರತಾಪ್ ಸಿಂಹ್​ ಗೆಲುವು ಕಷ್ಟ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಯಾಕೆಂದರೇ ಮೈಸೂರು ಭಾಗದಲ್ಲಿ ಇವತ್ತಿಗೂ ಸಿದ್ಧರಾಮಯ್ಯ ಕುರುಬ ಸಮಾಜದ ಪ್ರಭಾವಿ ನಾಯಕರಾಗಿದ್ದಾರೆ. ಅಲ್ಲದೇ ಈ ಭಾರಿ ಸಮ್ಮಿಶ್ರ ಸರ್ಕಾರ ರಚಿಸಿರುವ ಜೆಡಿಎಸ್​ ಹಾಗೂ ಕಾಂಗ್ರೆಸ್​ ಜಂಟಿಯಾಗಿಯೇ ಲೋಕಸಭಾ ಚುನಾವಣೆ ಎದುರಿಸುವ ಸಾಧ್ಯತೆ ಇದೆ.

ಮೈಸೂರಿನಲ್ಲಿ ಜೆಡಿಎಸ್​-ಕಾಂಗ್ರೆಸ್​ ಒಂದಾಗಿ ಚುನಾವಣೆ ಎದುರಿಸ ಹೊರಟಲ್ಲಿ ಇತ್ತೀಚಿಗಷ್ಟೇ ರಾಜಕಾರಣದಲ್ಲಿ ಭವಿಷ್ಯ ಕಂಡುಕೊಳ್ಳುತ್ತಿರುವ ಪ್ರತಾಪ್ ಸಿಂಹ್​ ಗೆಲುವು ಸುಲಭವಲ್ಲ. ನಿನ್ನೆ ವೇಣುಗೋಪಾಲ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಇದಕ್ಕೆ ಮೈಸೂರಿನ ಕಾಂಗ್ರೆಸ್​ ಜೆಡಿಎಸ್​ ಪ್ರಮುಖರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಕೇವಲ ಸಿದ್ಧರಾಮಯ್ಯ ಮಾತ್ರವಲ್ಲದೇ ರಮಾನಾಥ ರೈ, ಕಾಗೋಡು ತಿಮ್ಮಪ್ಪ, ವಿನಯ್ ಕುಲಕರ್ಣಿ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ಸಿಗರಿಗೆ ಲೋಕಸಭೆ ಚುನಾವಣೆಯಲ್ಲಿ ಅವಕಾಶ ನೀಡಲು ಕಾಂಗ್ರೆಸ್​ ನಿರ್ಧರಿಸಿದೆ. ಅದೇನೆ ಇರಲಿ ಮೈಸೂರಿನಲ್ಲಿ ಸಿದ್ಧರಾಮಯ್ಯ ಸ್ಪರ್ಧೆಯಿಂದ ಈ ಕ್ಷೇತ್ರ ದೇಶ ಮಟ್ಟದ ಗಮನ ಸೆಳೆಯೋದರಲ್ಲಿ ಎರಡು ಮಾತಿಲ್ಲ.

Leave a Comment