ಸಿನೆಮಾ ಸುದ್ದಿಗಳು

ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ತಮನ್ನಾ- ಯಾವ ಚಿತ್ರಕ್ಕಾಗಿ ಬಣ್ಣ ಹಚ್ತಾರೆ ಗೊತ್ತಾ ತಮನ್ನಾ

ಮತ್ತೊಮ್ಮೆ ಸ್ಯಾಂಡಲವುಡ್​ ಅಂಗಳದಲ್ಲಿ ತಮನ್ನಾ ಭಾಟಿಯಾ ಸದ್ದು ಮಾಡುತ್ತಿದ್ದಾರೆ. ಹೌದು ರಾಕಿಂಗ್​ ಸ್ಟಾರ್ ಯಶ ಅವರ ಬಹುನೀರಿಕ್ಷಿತ ಚಿತ್ರ ಕೆಜಿಎಫ್​​ಗಾಗಿ ತಮನ್ನಾ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದು, ಒಟ್ಟಾರೆ ಕೆಜಿಎಫ್​​ ಮೇಲಿನ ನೀರಿಕ್ಷೆ ಮತ್ತಷ್ಟು ಹೆಚ್ಚಿದೆ.

ಯಶ್​ ಅವರ ಬಹುನೀರಿಕ್ಷಿತವಾಗಿರುವ ಕೆಜಿಎಫ್​, ಚಿತ್ರೀಕರಣ ಆರಂಭವಾದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರಕ್ಕಾಗಿ ಯಶ್​ ಕೂಡ ತಮ್ಮ ಗೆಟಪ್​ ಬದಲಾಯಿಸಿಕೊಂಡಿದ್ದು, ಗಡ್ಡ-ಮೀಸೆ ಬೆಳೆಸಿಕೊಂಡು ಮಾಸ್​​ ಲುಕ್​ ಹೆಚ್ಚಿಸಿಕೊಂಡಿದ್ದಾರೆ.
ಇದೀಗ ಈ ಚಿತ್ರದ ಹಾಡುವೊಂದಕ್ಕಾಗಿ ಹಾಟ್ ಹಾಟ್ ಬೆಡಗಿ ತಮನ್ನಾ ಭಾಟಿಯಾ ಕನ್ನಡಕ್ಕೆ ಬರಲಿದ್ದು, ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ಈ ವಿಚಾರವನ್ನು ತಮ್ಮ ಟ್ವಿಟರ್​​ ನಲ್ಲಿ ಹೇಳಿಕೊಂಡಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೇ ಈ ಚಿತ್ರದಲ್ಲಿ ನಟಿ ತಮನ್ನಾ ಕನ್ನಡ ಹಳೆಯ ಮಾದಕ ಗೀತೆಯೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ.

1970 ರಲ್ಲಿ ಮೂಡಿಬಂದ ಪರೋಪಕಾರಿ ಚಿತ್ರದಲ್ಲಿ ಮೂಡಿಬಂದ ಈ ಗೀತೆಯನ್ನು ಮತ್ತೆ ಕೆಜಿಎಫ್​ನಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಇದೇ ಹಾಡನ್ನು ಮತ್ತೆ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಹಿಂದೆ ಈ ಸಾಂಗ್​ಗಾಗಿ ಕಾಜಲ್ ಅರ್ಗವಾಲ್, ಲಕ್ಷ್ಮೀ ರೈ ,ನೋರಾ ಹೆಸರುಗಳು ಕೂಡ ಕೇಳಿಬಂದಿದ್ದವು.

ಆದರೇ ಈ ಹಾಡಿನ ಚಿತ್ರೀಕರಣಕ್ಕೆ ತಮನ್ನಾ ಆಯ್ಕೆ ಮಾಡಲಾಗಿದ್ದು, ಇದು ಎರಡನೇ ಭಾರಿ ತಮನ್ನಾ ಕನ್ನಡಕ್ಕೆ ಬರುತ್ತಿದ್ದಾರೆ. ಈ ಹಿಂದೆ ನಿಖಿಲ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಚಿತ್ರದಲ್ಲಿದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದ ತಮನ್ನಾ ಅದರ ಬಳಿ ಇದೀಗ ಸೀತಾರಾಮ ಕಲ್ಯಾಣಕ್ಕಾ ಚಿತ್ರಕ್ಕಾಗಿ ಮತ್ತೆ ಕನ್ನಡದತ್ತ ಮುಖಮಾಡಿದ್ದಾರೆ.

Leave a Comment