ಅಪರಾಧ ಸಿನೆಮಾ ಸುದ್ದಿಗಳು

ಟಿವಿ ನಿರೂಪಕ ಚಂದನ್ ಪತ್ನಿ ಮಗನನ್ನೂ ಸಾಯಿಸಿ ತಾನೂ ಆತ್ಮಹತ್ಯೆಗೆ ಯತ್ನ!! ಹೆತ್ತ ಮಗನನ್ನೇ ಸಾಯಿಸಿದ್ದು ಹೇಗೆ ಅಂತೀರಾ? ಆ ಮುದ್ದು ಮಗ ಮಾಡಿದ ತಪ್ಪಾದ್ರೂ ಏನು?

ಇತ್ತೀಚಿಗಷ್ಟೆ ಖಾಸಗಿ ವಾಹಿನಿಯ ಅಚ್ಚ ಕನ್ನಡದ ನಿರೂಪಕ ಚಂದನ್​ ಅಲಿಯಾಸ್​ ಚಂದ್ರಶೇಖರ್​ ದಾವಣಗೆರೆ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಘಟನೆಯ ನೋವು ಮಾಸುವ ಮುನ್ನವೇ ಮೃತ ನಿರೂಪಕ ಚಂದನ್​ ಪತ್ನಿ ಪುತ್ರನನ್ನು ಕೊಂದು ತಾವು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಲೆಗೆ ತೆರಳಲು ಸಿದ್ಧವಾಗಿದ್ದ ಪುತ್ರನ ಕತ್ತು ಕುಯ್ದ ಚಂದನ್ ಪತ್ನಿ ಮೀನಾ ಬಳಿಕ ಬಾತ್ ರೂಂ ತೊಳೆಯಲು ಬಳಸುವ ಆಸ್ಯಿಡ್​ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೇ 24 ರಂದು ಬೆಳಗಿನ ಜಾವ ದಾವಣಗೆರೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರ್ಯಕ್ರಮವೊಂದರ ನಿರೂಪಣೆಗಾಗಿ ತೆರಳುತ್ತಿದ್ದ ನಿರೂಪಕ ಚಂದನ್​ ಹಾಗೂ ಅವರ ಜೊತೆಗಿದ್ದ ಇನ್ನೊರ್ವ ನಿರೂಪಕಿ ಸಾವನ್ನಪ್ಪಿದ್ದರು. ಪತಿಯ ಸಾವಿನಿಂದ ನೊಂದ ಮೀನಾ ತೀವ್ರ ಆಘಾತಕ್ಕೊಳಗಾಗಿದ್ದರು. ಹೀಗಾಗಿ ಈ ರೀತಿ ವರ್ತಿಸಿದ್ದಾರೆ ಎನ್ನಲಾಗುತ್ತಿದೆ.

 

 

 

 

 

 

 

 

 

 

 

 

 

 

 

 

 

 

ಇಂದು ಬೆಳಗ್ಗೆ ಶಾಲೆಗೆ ತೆರಳಲು ಸಿದ್ಧವಾಗುತ್ತಿದ್ದ 13 ವರ್ಷದ ಪುತ್ರ ತುಷಾರ್​ ಮೇಲೆ ಏಕಾಏಕಿ ದಾಳಿ ಮಾಡಿದ ಮೀನಾ, ಮನೆಯಲ್ಲೇ ಇದ್ದ ಚಾಕು ಬಳಸಿ ಕತ್ತು ಕತ್ತರಿಸಿದ್ದಾರೆ. ತೀವ್ರ ರಕ್ತಸ್ರಾವಕ್ಕೊಳಗಾದ ತುಷಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಮೀನಾ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥಗಳಾಗಿರುವ ಮೀನಾಅವರನ್ನು ಇದೀಗ ಬೆಂಗಳೂರಿನ ಕೋಲಂಬಿಯಾ ಎಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

 

 

 

ಮೀನಾ ಸ್ಥಿತಿ ಕೂಡ ಗಂಭೀರವಾಗಿದೆ. ಮೀನಾ-ಚಂದನ್ ಆರ್ಥಿಕ ಸ್ಥಿತಿ ಸಾಕಷ್ಟು ಅನುಕೂಲವಾಗಿತ್ತು. ಆದರೇ ಚಂದನ ಸಾವನ್ನು ಜೀರ್ಣಿಸಿಕೊಳ್ಳಲಾಗದೇ ಮೀನಾ ಸಾಕಷ್ಟು ನೊಂದು ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ಈ ನಿರ್ಧಾರಕ್ಕೆ ಬಂದಂತಿದೆ. ಒಟ್ಟಿನಲ್ಲಿ ಒಂದು ಅಪಘಾತದಲ್ಲಿ ನಡೆದ ಸಾವು ಈ ಕುಟುಂಬವನ್ನೇ ಬಲಿತೆಗೆದುಕೊಂಡಿದೆ

 

 

 

https://youtu.be/hVNUzPsX-ZY

 

 

 

 

 

Leave a Comment