ಸಿನೆಮಾ ಸುದ್ದಿಗಳು

ಪುತ್ರ ಸಾಮ್ರಾಟ ಬರ್ತಡೇಗೆ ಕರಿಚಿರತೆ ಕೊಡ್ತಿರೋ ಗಿಫ್ಟ್​ ಏನು ಗೊತ್ತಾ?!

Views:
90

ಸಾಲು-ಸಾಲು ಸೋಲುಗಳಿಂದ ಕಂಗೆಟ್ಟಿರುವ ನಟ ದುನಿಯಾ ವಿಜಿ ಇದೀಗ ಕುಸ್ತಿ ಸಿನಿಮಾದ ಬಗ್ಗೆ ಸಾಕಷ್ಟು ಕನಸುಗಳನ್ನ ಇಟ್ಟುಕೊಂಡಿದ್ದಾರೆ. ತಮ್ಮ ಮಗ ಸಾಮ್ರಾಟ್​ನನ್ನು ಈ ಚಿತ್ರದ ಮೂಲಕ ಇಂಡಸ್ಟ್ರಿಗೆ ತರಲು ಹೊರಟಿದ್ದಾರೆ ಕರಿಚಿರತೆ. ಇದಕ್ಕಾಗಿ ದುನಿಯಾ ವಿಜಿ ಪುತ್ರ ಸಾಮ್ರಾಟ ಕೂಡ ದೊಡ್ಡವರು ಬೆಚ್ಚಿಬೀಳುವಂತೆ ವರ್ಕೌಟ್​ ಮಾಡಿ ಅಚ್ಚರಿ ಮೂಡಿಸಿದ್ದಾನೆ. ಜೂನ್​ 17 ರಂದು ಎಲ್ಲರ ಕುತೂಹಲಕ್ಕೆ ತೆರೆ ಬೀಳಲಿದ್ದು, ಅಂದು ಕುಸ್ತಿ ಚಿತ್ರದ ಫಸ್ಟ್​ ಲುಕ್​ ಟೀಸರ್​ ಬಿಡುಗಡೆಯಾಗಲಿದೆ.


ಜೂನ್​ 17 ರಂದು ದುನಿಯಾ ವಿಜಿ ಪ್ರೀತಿಯ ಪುತ್ರ ಸಾಮ್ರಾಟ ಹುಟ್ಟುಹಬ್ಬ. ಹೀಗಾಗಿ ಬರ್ತಡೇ ಗೆ ಸಖತ್ ಗಿಫ್ಟ್​​ ಕೊಡಲು ನಿರ್ಧರಿಸಿರುವ ದುನಿಯಾ ಚಿತ್ರದ ಟೀಸರ್​ ಬಿಡುಗಡೆ ಮಾಡಲಿದ್ದಾರೆ. ಅದರ ಜೊತೆಗೆ ಕಳೆದ ನಾಲ್ಕು ತಿಂಗಳಿನಿಂದ ಸಾಮ್ರಾಟ್​ ಆಟ-ಪಾಠ ಎಲ್ಲವನ್ನು ಬಿಟ್ಟು ನಡೆಸಿದ ಅತಿ ಕಠಿಣವಾದ ವರ್ಕೌಟ್​​ನ ವಿಡಿಯೋಗಳನ್ನು ಬಹಿರಂಗಗೊಳಿಸಲಿದ್ದಾರಂತೆ.


ಬೇಸಿಗೆ ರಜೆಯಲ್ಲಿ ಉಳಿದ ಮಕ್ಕಳೆಲ್ಲ ಆಟವಾಡುತ್ತಿದ್ದರೇ, ಸಾಮ್ರಾಟ ಮಾತ್ರ ಕಷ್ಟದಾಯಕವಾದ ವರ್ಕೌಟ್​ನಲ್ಲಿ ತೊಡಗಿದ್ದರು. ಕೆಲ ವಿಡಿಯೋಗಳಲ್ಲಿ ಸಾಮ್ರಾಟ ತಂದೆ ಮಾಡಿಸುತ್ತಿದ್ದ ವ್ಯಾಯಾಮಗಳನ್ನು ತಡೆಯಲಾಗದೇ ನೋವಿನಿಂದ ಅತ್ತಿದ್ದು ಕೂಡ ಇದೆ. ಇದೀಗ ಈ ವಿಡಿಯೋ ಸಾಮ್ರಾಟ ಹುಟ್ಟುಹಬ್ಬದಂದೇ ರಿವೀಲ್​ ಆಗಲಿದ್ದು, ದುನಿಯಾ ವಿಜಿ ಫ್ಯಾನ್ಸ್​ ಯಾವ ರೀತಿ ರಿಯಾಕ್ಟ್​ ಮಾಡ್ತಾರೆ ಕಾದುನೋಡಬೇಕಿದೆ.


ಚೂರಿ ಕಟ್ಟೆ ಖ್ಯಾತಿಯ ರಘು ಶಿವಮೊಗ್ಗ ಕುಸ್ತಿ ಚಿತ್ರವನ್ನು ನಿರ್ದೇಶಿಸಿದ್ದು, ದುನಿಯಾ ವಿಜಿ ಹೋಂ ಬ್ಯಾನರ್​ನಲ್ಲಿ ಚಿತ್ರ ಬಿಡುಗಡೆಯಾಗ್ತಿದೆ. ಇನ್ನು ಚಿತ್ರದ ಬಗ್ಗೆ ಸಾಮ್ರಾಟ ಹುಟ್ಟುಹಬ್ಬದ ದಿನ ದುನಿಯಾ ವಿಜಿ ಮತ್ತಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಸಾಧ್ಯತೆ ಕೂಡ ಇದೆ.

Leave a Comment