ಅಂಕಣ ಸುದ್ದಿಗಳು

ಯಾವಾಗ ದಾನ ಮಾಡಬೇಕು.? ದಾನ ಯಾಕಾಗಿ ಮಾಡಬೇಕು?

ಅದೊಂದು ಕರಾಳ ರಾತ್ರಿ. ಎಲ್ಲರೂ ಮಲಗಿದ್ದಾರೆ. ಧರ್ಮರಾಜನನ್ನು ನೋಡಲು ಒಬ್ಬ ಬ್ರಾಹ್ಮಣ ಬಂದ. ತನ್ನ ಮಗನ ಉಪನಯನಕ್ಕೆ ಸಹಾಯ ಮಾಡಿರೆಂದ. ಧರ್ಮರಾಜ ಮರುದಿನ ಬೆಳಗ್ಗೆ ಬರಲು ಸೂಚಿಸಿದ. ಅದೇ ಬ್ರಾಹ್ಮಣ ಭೀಮಸೇನನ ಬಳಿಗೆ ಬಂದಾಗ ತನ್ನ ಕೈಯ್ಯಲ್ಲಿದ್ದ ಕಡಗವನ್ನು ತೆಗೆದು ಬ್ರಾಹ್ಮಣನಿಗೆ ಕೃಷ್ಣಾರ್ಪಣವೆಂದ. ಸಂತೋಷದಿಂದ ಮಧ್ಯರಾತ್ರಿ ಭೇರಿನಾದಗೈದ. ಅದನ್ನು ಕೇಳಿ ಧರ್ಮರಾಜ ಓಡಿಬಂದು ಭೀಮನನ್ನು ಪ್ರಶ್ನಿಸಲು ನಸು ನಗುತ್ತಾ ಭೀಮನೆಂದ “ನಿತ್ಯವಲ್ಲದ ಈ ಶರೀರವಿರುವಾಗ ನಾಳೆಯ ತನಕ ಬದುಕುತ್ತೇನೆ ಎಂದು ನಿನಗಿರುವ ವಿಶ್ವಾಸ ಕಂಡು ಆಶ್ಚರ್ಯವಾಗಿದೆ”. ಇದನ್ನು ಕೆಳಿದೊಡನೆಯೇ ಧರ್ಮರಾಜನಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟ.

 

ಭಗವಂತ ನಮ್ಮ ಯೋಗ್ಯ ತಾನುಸಾರವಾಗಿ ಕೊಟ್ಟ ಸಂಪತ್ತಿನಲ್ಲಿ ಕಿಂಚಿತ್ತಾದರೂ ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ದರಿದ್ರರಾಗಿ ಹುಟ್ಟುವ ಅವಕಾಶವಿಲ್ಲ. ಸಂಪತ್ತನ್ನು ಕೇವಲ ಸ್ವಾರ್ಥಕಾಗಿ ಮೀಸಲಿಟ್ಟರೆ ಪರರ ಪಾಲಾಗುವುದರಲ್ಲಿ ಸಂದೇಹವಿಲ್ಲ. ಸರ್ಪ ಸಂಪತ್ತನ್ನು ಕಾಯುತ್ತದೆಯೇ ಹೊರತು ಅದಕ್ಕೆ ಅದರಿಂದ ಪ್ರಯೋಜನವಿಲ್ಲ. ಎಷ್ಟೋ ಬಾರಿ ಜೀವನ ಪರ್ಯಂತ ದುಡಿದು ಸಂಪತ್ತನ್ನು ಸಂಗ್ರಹಿಸಿ ಕೊನೆಗೆ ಅದನ್ನು ಅನುಭವಿಸಲು ಆ ಮನುಷ್ಯನೇ ಇರುವುದಿಲ್ಲ. ಅನಿತ್ಯವಾದ ಶರೀರವಿದ್ದಾಗ ಅನಿತ್ಯವಾದ ಒಳ್ಳೆಯ ಮನಸ್ಸಿದ್ದಾಗ ಅನಿತ್ಯವಾದ ಸಂಪತ್ತಿದ್ದಾಗ ಕಿಂಚಿತ್ತಾದರೂ ದಾನ ಮಾಡಿಬಿಟ್ಟರೆ ನಿತ್ಯವಾದ ಭಗವಂತನ ಲೋಕವೇ ಪ್ರಾಪ್ತಿ.

 

Leave a Comment