ರಾಜಕೀಯ

ರಾಹುಲ್​ ಗಾಂಧಿಗೆ ಬುದ್ಧಿ ಹೇಳೋರ್ಯಾರು? – ಕಾಂಗ್ರೆಸ್ಸಿಗರ ಕಟ್ಟಕಡೆಯ ಪ್ರಶ್ನೆ!

ಅದ್ಯಾಕೋ ಗೊತ್ತಿಲ್ಲ ಕಾಂಗ್ರೆಸ್​ನ ಯುವರಾಜ್, ರಾಹುಲ್ ಗಾಂಧಿ ದೇಶದ ಗಡಿ ದಾಟುತ್ತಿದ್ದಂತೆ ಒಂದಲ್ಲ ಒಂದು ವಿವಾದವನ್ನ ಮೈಗೆ ಸುತ್ತಿಕೊಳ್ಳುತ್ತಾರೆ. ಇದರರ್ಥ ದೇಶದ ಒಳಗಿದ್ದಾಗ ಮುತ್ಸದ್ದಿತನ ತೋರುತ್ತಾರೆ ಎಂದಲ್ಲ. ಆದರೂ ದೇಶದ ಒಳಗಿದ್ದಾಗ ತೋರುವ ಅ್ಲಪ-ಸ್ವಲ್ಪ ವಿವೇಕವೂ ಭಾರತದಾಚೆ ಕಾರಣ ಸಿಗುವುದಿಲ್ಲ. ಅದರ ಫಲವಾಗಿ ರಾಹುಲ್​ ತಮ್ಮ ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಕಾಂಗ್ರೆಸ್ಸಿಗರು ದುರಂಹಕಾರಿಗಳು ಎಂಬ ವಿಚಾರ.

2014 ರ ವೇಳೆ ಕಾಂಗ್ರೆಸ್​ನಲ್ಲಿ ನಿಜಕ್ಕೂ ಸ್ವಲ್ಪ ಮಟ್ಟಿಗಿನ ದುರಂಹಕಾರವಿತ್ತು ಎಂದು ರಾಹುಲ್ ಗಾಂಧಿ ವಿದೇಶದ ಸಂವಾದವೊಂದರಲ್ಲಿ ಹೇಳಿರೋದು ಇದೀಗ ಹಿರಿಯ ಕಾಂಗ್ರೆಸ್ಸಿಗರಿಗೆ ಮುಜುಗರ ತಂದೊಡ್ಡಿದೆ. ಲಂಡನ್​ನ ಇಂಟರನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ಸ್ಟ್ರಾಟಜಿಕ್​ ಸ್ಟಡೀಸ್​​ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, 10 ವರ್ಷಗಳ ಕಾಲ ನಾವು ಭಾರತದಲ್ಲಿ ಅಧಿಕಾರ ಸ್ಥಾಪಿಸಿದ ಕಾರಣಕ್ಕೆ ಕಾಂಗ್ರೆಸ್ಸಿಗರಲ್ಲಿ ತಕ್ಕಮಟ್ಟಿಗೆ ದುರಂಹಕಾರವಿತ್ತು.

 

 

ಆದರೇ 2014 ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ನಾವು ಪಾಠ ಕಲಿತೆವು ಎನ್ನುವ ಮೂಲಕ ಆತ್ಮವಿಮರ್ಶೆಯ ಮಾತುಗಳನ್ನಾಡಿದ್ದಾರೆ. ರಾಹುಲ್​ ಈ ಮಾತನ್ನು ಯಾವುದೇ ಅರ್ಥದಲ್ಲಿ ಹೇಳಿದ್ದರೂ ವಿದೇಶದಲ್ಲಿ ಹೊರಬಿದ್ದ ಈ ಸತ್ಯ ಕಾಂಗ್ರೆಸ್​​ ಹಿರಿ ತಲೆಗಳ ಅಸಮಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿರೋದು ಸುಳ್ಳಲ್ಲ.

 

ಈಗಾಗಲೇ ವಿದೇಶದ ಸಾಕಷ್ಟು ಸಭೆ-ಸಂವಾದಗಳಲ್ಲಿ ರಾಹುಲ್ ಗಾಂಧಿ ತಮ್ಮ ಎಡವಟ್ಟು ಮಾತುಗಳಿಂದ ಅವಾಂತರಸೃಷ್ಟಿಷಿದ್ದು, ಇದನ್ನೇ ನಿರ್ವಹಿಸೋದು ಕಾಂಗ್ರೆಸ್ಸಿಗರಿಗೆ ತಲೆನೋವಾಗಿರುವ ಬೆನ್ನಲ್ಲೇ ಈಗ ಕಾಂಗ್ರೆಸ್​ನವರಿಗೆ ದುರಂಹಕಾರವಿತ್ತು ಎಂದು ರಾಹುಲ್​ ಹೇಳಿರೋದು ಮತ್ತಷ್ಟು ಅಸಮಧಾನ ತಂದಿದೆ. ರಾಹುಲ್​ ಗಾಂಧಿಗೆ ಬುದ್ಧಿಹೇಳೋರು ಯಾರು? ಚುನಾವಣೆ ಎದುರಲ್ಲೇ ಇವೆಲ್ಲ ಅವಾಂತರಗಳು ಬೇಕಾ ಎಂದು ಕಾಂಗ್ರೆಸ್ಸಿಗರಿಗೆ ಕೈ-ಕೈ ಹಿಸುಕಿಕೊಳ್ತಿದ್ದಾರೆ ಅಂತಿವೆ ಮೂಲಗಳು.

Leave a Comment