ಸಿನೆಮಾ

ಇಷ್ಟಕ್ಕೂ ಯಜಮಾನ ಚಿತ್ರೀಕರಣದ ಸೆಟ್ ಗೆ ದರ್ಶನ ಪತ್ನಿ ಬಂದಿದ್ದೇಕೆ‌ ಗೊತ್ತಾ?

ಕನ್ನಡದ ಬಾಕ್ಸಾಪೀಸ್​ ಬಾದುಶಾ ಚಾಲೆಂಜಿಂಗ್​ ಸ್ಟಾರ್​ ಕಳೆದೆರಡು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದ್ಯಾವುದೋ ಸಿನಿಮಾ ವಿಚಾರಕ್ಕೆ ಅಂತ ನೀವಂದ್ರು ಕೊಂಡ್ರೆ ಖಂಡಿತಾ ಅಲ್ಲ. ಬದಲಾಗಿ ವೈಯಕ್ತಿಕ ವಿಚಾರಕ್ಕೆ. ವೈಯಕ್ತಿಕ ವಿಚಾರಕ್ಕಾ? ಮತ್ತೆ ಗಂಡ-ಹೆಂಡತಿ ಜಗಳ ಆಡಕೊಂಡ್ರಾ ಅಂತ ಕೇಳ್ಬೇಡಿ…ಈ ಭಾರಿಯೂ ಸುದ್ದಿಯಲ್ಲಿರೋದು ವಿಜಯಲಕ್ಷ್ಮೀ ಮತ್ತು ದರ್ಶನ ದಂಪತಿಗಳೇ…ಆದರೇ ಜಗಳವಲ್ಲ. ಮೊನ್ನೆ ಇದ್ದಕ್ಕಿದಂತೆ ದರ್ಶನ ಪತ್ನಿ ವಿಜಯಲಕ್ಷ್ಮೀ ದರ್ಶನ ಸಿನಿಮಾ ಶೂಟಿಂಗ್ ಸೆಟ್​ಗೆ ಭೇಟಿ ಕೊಟ್ಟಿದ್ದರು…..ಈ ಸಪ್ರೈಸ್​ ಭೇಟಿ ಹಿಂದಿನ ಅಸಲಿ ಸತ್ಯ ಏನು ಗೊತ್ತಾ? ಓದಿ ನೋಡಿ.


ಕನ್ನಡಕೊಬ್ಬರೇ ಡಿ.ಬಾಸ್​ ಅನ್ನಿಸಿಕೊಂಡಿರೋ ದರ್ಶನ ವೈವಾಹಿಕ ಬದುಕಿನ ಕಾರಣಕ್ಕೆ ಸುದ್ದಿಯಾಗಿ ವರ್ಷಗಳೇ ಕಳೆದಿವೆ. ಇನ್ನೇನು ಡಿವೋರ್ಸ್​ ಆಗೋಯ್ತು ಅನ್ನೋ ಹೊತ್ತಿಗೆ ಕಾಂಪ್ರಮೈಸ್​ ಮಾಡಿಕೊಂಡ ದರ್ಶನ ವಿಜಯಲಕ್ಷ್ಮೀ ಜೊತೆಗೆ ಇದ್ದಾರೆ ಅನ್ನೋ ಸುದ್ದಿ ಬಂತು. ಅದರ ನಂತರ ಒಂದಷ್ಟು ಗಾಸಿಪ್ ಹುಟ್ಟಿಕೊಂಡಿದ್ದು ಬೇರೆ ಕತೆ ಬಿಡಿ..ಇಂತಿಪ್ಪ ದರ್ಶನ ಹೊಸ ಚಿತ್ರ ಯಜಮಾನ ಶೂಟಿಂಗ್ ಸೆಟ್​ ಮೊನ್ನೆ ಸುದ್ದಿಯೊಂದನ್ನು ಸೃಷ್ಟಿಸಿ ಬಿಟ್ಟಿತ್ತು. ನೋಡಿ..ಇಷ್ಟಕ್ಕೂ ಆಗಿದ್ದೇನು ಅಂದ್ರೆ ಯಜಮಾನ ಶೂಟಿಂಗ್ ನಡಿತಾ ಇದ್ದ ಸಿನಿಮಾ ಸೆಟ್​ ಶನಿವಾರ ದರ್ಶನ ಪತ್ನಿ ವಿಜಯಲಕ್ಷ್ಮೀ ಸಪ್ರೈಸ್ ವಿಸಿಟ್ ಕೊಟ್ಟಿದ್ದರು.

 

ಈ ಸಪ್ರೈಸ್​ ವಿಸಿಟ್ ನೂರಾರು ಚರ್ಚೆಗಳನ್ನು ಹುಟ್ಟುಹಾಕಿದ್ದಂತೂ ಸತ್ಯ….ಅಷ್ಟೇ ಅಲ್ಲ ಸಿನಿಮಾ ಗಾಸಿಪ್ ಮಂದಿಯಂತೂ, ಸೆಟ್​ನಲ್ಲೇನೋ ನಡಿತಿದೆ ಅನ್ನೋ ಕಾರಣಕ್ಕೆ ವಿಜಯಲಕ್ಷ್ಮೀ ಬಂದಿದ್ರೂ ಅಂತಾನೂ ಕತೆ ಕಟ್ಟಿಬಿಟ್ರು. ಆದರೇ ಅಸಲಿ ಕಾರಣವೇ ಬೇರೆ. ಯಜಮಾನ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆ ಅವರ ಪುತ್ರ ಚೋಟಾ ಸ್ಟಾರ್​ ವಿನೀಶ್ ಕೂಡ ಬಣ್ಣ ಹಚ್ಚುತ್ತಿದ್ದಾರೆ.

ಈಗಾಗಲೇ ಸಾಕಷ್ಡು ಭಾರಿ ದರ್ಶನ ಶೂಟಿಂಗ್ ಸೆಟ್​ ಭೇಟಿ ನೀಡಿ, ದರ್ಶನ ಆಕ್ಯ್ಟಿಂಗ್​ ನೋಡಿರೋ ವಿಜಯಲಕ್ಷ್ಮೀ ಈ ಭಾರಿ ತಮ್ಮ ಪುತ್ರನ ಆಕ್ಯ್ಟಿಂಗ್​ ನೋಡೋಕೆ ಹೋಗಿದ್ದಾರೆ. ಅಷ್ಟೇ ಅಲ್ಲ ಪುತ್ರನ ನಟನೆಯನ್ನ ನೋಡಿ ಮೆಚ್ಕೊಂಡಿದ್ದಾರೆ. ಅಪರೂಪಕ್ಕೆ ಸೆಟ್​ಗೆ ಬಂದ ಪತ್ನಿಯನ್ನು ನೋಡಿ ದರ್ಶನಕೂಡ ಖುಷಿಯಾಗಿದ್ದು, ಇಬ್ಬರು ಒಂದಷ್ಟು ಕಾಲ ಒಟ್ಟಿಗೆ ಟೈಂಸ್ಪೆಂಟ್​ ಕೂಡ ಮಾಡಿದ್ದಾರೆ.
ಇದು ದರ್ಶನ ಪುತ್ರ ವಿನೀಶ್​ ನಟನೆಯ ಎರಡನೇ ಚಿತ್ರವಾಗಿದ್ದು, ಈ ಮೊದಲು ವಿನೀಶ್​ ದರ್ಶನ ನಟನೆಯ ಐರಾವತ್ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಇತ್ತೀಚಿಗೆ ಹಿಟ್​ ಚಿತ್ರವನ್ನೇ ಕಾಣದ ದರ್ಶನ ಈ ಚಿತ್ರ ಸಾಕಷ್ಟು ನೀರಿಕ್ಷೆ ಮೂಡಿಸಿದ್ದು, ಇದರಲ್ಲಿ ಇದೇ ಮೊದಲ ಬಾರಿಗೆ ದರ್ಶನಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.

Leave a Comment