ರಾಜಕೀಯ ಸುದ್ದಿಗಳು

ಒಕ್ಕಲಿಗರನ್ನು ಒಲಿಸಿಕೊಳ್ಳೋಕೆ ಬಿಜೆಪಿ ಪ್ಲ್ಯಾನ್- ಶೋಭಾಗೆ ಸ್ಥಾನ- ಬಿಎಸ್ವೈ ಗೆ ಸಮಾಧಾನ!

Views:
125

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಈಗಾಗಲೇ ಅಘೋಷಿತ ಸಮರಾಭ್ಯಾಸ ಆರಂಭಗೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ೧೦೪ ಸ್ಥಾನ ಪಡೆದು ವಿಪಕ್ಷ ಸ್ಥಾನದಲ್ಲಿ ಕೂತಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಭದ್ರಗೊಳಿಸಿಕೊಳ್ಳುವ ಹುನ್ನಾರದಲ್ಲಿ ಕಾರ್ಯಪ್ರವೃತ್ತವಾಗಿದ್ದು, ಈಗಾಗಲೇ‌ ರಣತಂತ್ರ ರೂಪಿಸಿರುವ ಬಿಜೆಪಿ‌ ಮೊದಲ ಹಂತವಾಗಿ ಒಕ್ಕಲಿಗ‌ ಮತಗಳನ್ನು ಸೆಳೆಯಲು ಸಿದ್ಧವಾಗಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಶೋಭಾ ಕರಂದ್ಲಾಜೆಗೆ ಒಲಿಯುವ ಸಾಧ್ಯತೆ ಇದ್ದು ಅಧಿಕೃತ ಘೋಷಣೆಯೊಂದೆ ಬಾಕಿ ಎನ್ನಲಾಗುತ್ತಿದೆ.


ಬಿಜೆಪಿಯ ಆಂತರಿಕ‌ ನಿಯಮಗಳ ಪ್ರಕಾರ ಒಬ್ಬರಿಗೆ ಒಂದೇ ಹುದ್ದೆ ನೀಡಲಾಗುತ್ತದೆ. ಅದರೇ ಇದೀಗ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯ ವಿರೋದ ಪಕ್ಷದ ನಾಯಕರಾಗಿ ಅಯ್ಕೆಯಾಗಿದ್ದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ ಮುಂದುವರೆದಿದ್ದಾರೆ. ಈ ಪೈಕಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವುದು ಅನಿವಾರ್ಯವಾಗಿದೆ. ಹೀಗಾಗಿ ಬಿಎಸ್ ವೈ ಈ ಸ್ಥಾನವನ್ನು ಕೊಟ್ಟು ಉಳಿಸಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಆಯ್ಕೆಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.

ಅಲ್ಲದೆ ರಾಜ್ಯದಲ್ಲಿ ಪ್ರಭಲ ಜಾತಿಯಾಗಿರುವ ಒಕ್ಕಲಿಗರಿಗೆ ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ‌ ಇಲ್ಲ ಎಂಬ ಆರೋಪ ಹಲವು ಭಾರಿ ಕೇಳಿಬಂದಿದೆ. ಇದೀಗ ವಿಪಕ್ಷ‌ ನಾಯಕ‌ಸ್ಥಾನವೂ ಬಿಎಸ್ವೈ ಪಾಲಾಗಿರೋದರಿಂದ ಒಕ್ಕಲಿಗರ ಸ್ಥಾನಮಾನದ ಪ್ರಶ್ನೆ ಮತ್ತೆ‌ ಮುನ್ನಲೆಗೆ ಬಂದಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಈ ಪ್ಲ್ಯಾನ್ ಮಾಡಿದ್ದು ಶೋಭಾ ಕರಂದ್ಲಾಜೆಗೆ ರಾಜ್ಯಾಧ್ಯಕ್ಷ ಪಟ್ಟ ನೀಡುವ ಮೂಲಕ‌ ಮುಂಬರುವ ಲೋಕಸಭಾ ಎಲೆಕ್ಷನ್‌ನಲ್ಲಿ ಒಕ್ಕಲಿಗರನ್ನು ಒಲೈಸುವ ತಂತ್ರಕ್ಕೆ‌ ಮಣೆ ಹಾಕಿದೆ.
ಇನ್ನು‌ ಈ ಮೊದಲು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿ.ವಿ.ಸದಾನಂದ ಗೌಡ್ ಹಾಗೂ ಅರ್.ಅಶೋಕ್‌ ಹೆಸರು ಕೇಳಿಬಂದಿತ್ತು. ಆದರೇ ಇದಕ್ಕೆ‌ ಬಿಎಸ್ ವೈ ಒಪ್ಪಿರಲಿಲ್ಲ ಎನ್ನಲಾಗುತ್ತಿದೆ. ಇದೀಗ ಶೋಭಾ ಹೆಸರು ಪ್ರಸ್ತಾಪಕ್ಕೆ‌ ಬಂದಿರೋದರಿಂದ ಬಿಎಸ್ವೈ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಖುಷಿಯಲ್ಲಿದ್ದಾರೆ.

ಹೌದು ಶೋಭಾ ನೇಮಕದಿಂದ ಮೊದಲ‌ ಮಹಿಳಾ ರಾಜ್ಯಾಧ್ಯಕ್ಷೆ ಎಂಬ ಗೌರವ, ಒಕ್ಕಲಿಗರು ಎಂಬ ವೋಟ್ ಬ್ಯಾಂಕ್ ಜೊತೆಗೆ ಪೂರ್ಣ ಪ್ರಮಾಣದಲದಲ್ಲಿ ಅಧಿಕಾರ ತಮ್ಮ ಬಳಿಯೇ ಉಳಿಸಿಕೊಂಡಂತಾಗಲಿರೋದು ಬಿಎಸ್ ವೈ ಖುಷಿಗೆ ಕಾರಣವಾಗಿದೆ. ಬಿಜೆಪಿಯ ಚಾಣಾಕ್ಯ ಈ ತಂತ್ರಕ್ಕೆ ಒಪ್ತಾರಾ? ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟ ಒಕ್ಕಲಿಗರ ಪಾಲಾಗುತ್ತಾ ಎಂಬ ಪ್ರಶ್ನೆಗೆ ಇನ್ನು ಕೆಲವೇ ದಿನದಲ್ಲಿ ಉತ್ತರ ಸಿಗಲಿರೋದಂತು ಸತ್ಯ!

Leave a Comment