ಜ್ಯೋತಿಷ್ಯ ರಾಜಕೀಯ ವಿಡಿಯೋ ಸುದ್ದಿಗಳು

ಬಿಎಸ್​ವೈ ಸರ್ಕಾರದ ಆಯುಷ್ಯ ಎಷ್ಟು?- ಏನಂತಾರೆ ಜ್ಯೋತಿಷ್ಯಿಗಳು?!

ಚುನಾವಣೆ ಪ್ರಚಾರದ ವೇಳೆಯೇ ಮೇ 17 ಅಥವಾ 18 ರಂದು ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎನ್ನುತ್ತಲ್ಲೇ ಇದ್ದ ಬಿ.ಎಸ್.ಯಡಿಯೂರಪ್ಪ ಕೊನೆಗೂ ನುಡಿದಂತೆ ನಡೆದಿದ್ದಾರೆ. ಹೌದು ಸಿಎಂ ಆಗಿ ಇಂದು ಮುಂಜಾನೆ 9 ಗಂಟೆಗೆ ರಾಜಭವನದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೇ ಇನ್ನು ಬಹುಮತ ಸಾಬೀತುಪಡಿಸುವ ಅಗತ್ಯವಿರೋದರಿಂದ ಕೇವಲ ಯಡಿಯೂರಪ್ಪನವರು ಮಾತ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೇ ಈ ಸರ್ಕಾರ ಎಷ್ಟು ದಿನ ಉಳಿಯುತ್ತೇ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೇ ಜ್ಯೋತಿಷ್ಯಿಗಳು ಈ ಸರ್ಕಾರದ ಆಯುಷ್ಯ ಗಟ್ಟಿಯಾಗಿದೆ ಎನ್ನುತ್ತಿದ್ದಾರೆ.


ಹೌದು ಅತ್ಯಂತ ಸಂಘರ್ಷದ ಹೊತ್ತಿನಲ್ಲಿ ಸಿ.ಎಂ.ಸಿದ್ಧರಾಮಯ್ಯ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲ ಸಾಲಮನ್ನಾ ಪ್ರಕ್ರಿಯೆಗೂ ಚಾಲನೆ ನೀಡಿದ್ದಾರೆ. ಆದರೇ ಈ ಸರ್ಕಾರ ಉಳಿಯುತ್ತಾ ಅನ್ನೋ ರಾಜ್ಯದ ಜನರನ್ನು ಕಾಡುತ್ತಿರುವ ಹೊತ್ತಿನಲ್ಲೇ ಈ ಸರ್ಕಾರದ ಆಯುಷ್ಯ ಗಟ್ಟಿಯಾಗಿದೆ ಎಂಬ ಭವಿಷ್ಯ ಜ್ಯೋತಿಷ್ಯಿಗಳಿಂದ ವ್ಯಕ್ತವಾಗಿದೆ. ಕಾಲಜ್ಯೋತಿಷ್ಯಿ ಎಂದೇ ಕರೆಯಿಸಿಕೊಳ್ಳುವ ಪ್ರಕಾಶ್ ಅಮ್ಮಣ್ಣಾಯ್ ಈ ಬಗ್ಗೆ ಮಾಹಿತಿ ನೀಡಿದ್ದು, “ಯಡಿಯೂರಪ್ಪ ಅವರು ಮಿಥುನ ಲಗ್ನದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆ ಲಗ್ನಕ್ಕೆ ಸಪ್ತಮದಲ್ಲಿ ಶನಿ, ಅಷ್ಟಮದಲ್ಲಿ ಕುಜ ಹಾಗೂ ಪಂಚಮದಲ್ಲಿ ಗುರು ಇದೆ. ಈ ಗ್ರಹ ಸ್ಥಿತಿಯ ಆಧಾರದಲ್ಲಿ ಹೇಳಬೇಕೆಂದರೆ ಈ ಸರ್ಕಾರಕ್ಕೆ ಆಯುಷ್ಯ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳಿವೆ ಎಂದಿದ್ದಾರೆ.

 

ಇಂದು ಮುಂಜಾನೆ 9 ಗಂಟೆಗೆ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಸಂದರ್ಭ ಬಿಜೆಪಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಅವಕಾಶಗಳಿವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುತ್ತಾರೋ, ಇಲ್ಲವೋ ಅದು ದೈವ ಸಂಕಲ್ಪ. ಆದರೆ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಲಗ್ನಕ್ಕೆ ದೈವಬಲ ಇದೆ. ಹೀಗಾಗಿ ಎಲ್ಲ ಅಡೆತಡೆಗಳನ್ನು ದಾಟಿ ಸಿಎಂ ಬಿಎಸ್​ವೈ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ ಅಂತಾರೆ ಅಮ್ಮಣ್ಣಾಯ.

 

ಹಾಗೆನೇ ಇನ್ನೊಬ್ಬ ಖ್ಯಾತ ಜೋತಿಷಿ ಸರಕಾರಕ್ಕೆ ಯಾವುದೇ ಬಾಧೆ ಆಗದು ಅಂತ ತಿಳಿಸಿದ್ದಾರೆ.

ಈಗಾಗಲೇ ಬಿಜೆಪಿ ನಾಯಕರು ಶತಾಯ-ಗತಾಯ ಸರ್ಕಾರ ಉಳಿಸಿಕೊಳ್ಳಲು ಸರ್ಕಸ್​ ಆರಂಭಿಸಿದ್ದಾರೆ. ಇದೀಗ ಜ್ಯೋತಿಷ್ಯದ ದೃಷ್ಟಿಯಿಂದಲೂ ಸರ್ಕಾರ ಉಳಿಯುವ ಲಕ್ಷಣವಿದೆ ಎಂದಿರೋದು ಎಲ್ಲೋ ಒಂದು ಕಡೆ ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಗೋಚರಿಸುತ್ತಿದೆ.

Leave a Comment