ರಾಜಕೀಯ ಸಿನೆಮಾ

ನಟ ಯಶ್ ಜೊತೆ ಪತ್ನಿ ರಾಧಿಕಾ ಯಾಕಿಲ್ಲ ? ವಿರಹದ ಮತವೇಕೆ ? ಕತ್ರಿ V/S ಶ್ರೀರಾಂ

Views:
71

ಇವತ್ತು ( ಮೇ 12, ಶನಿವಾರ) ನಮ್ಮ ಕರ್ತವ್ಯವೂ, ಹಕ್ಕೂ ಆಗಿರುವ ಮತಚಲಾವಣೆಯ ದಿನ. ಇಂದು ಕಣದಲ್ಲಿರುವ ಅಭ್ಯರ್ಥಿಗಳು, ಸಚಿವರು, ಚಿತ್ರರಂಗ, ಕ್ರಿಕೆಟ್ ರಂಗದ ತಾರೆಗಳು ಕುಟುಂಬ ಸಮೇತರಾಗಿ ಮತ ಚಲಾವಣೆಗೆ ಬಂದು ಪೋಸಿನ ಜೊತೆಗೆ ಸಂದೇಶ ಕೊಡುತ್ತಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ನಾಗವಾರದಲ್ಲಿ ಮಗಳ ಜೊತೆ ಬಂದು ಮತ ಚಲಾಯಿಸಿದರು. ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ಮತ್ತು ನಟಿ ರಕ್ಷಿತಾ ಕೈ ಕೈ ಹಿಡಿದುಕೊಂಡು ಬಂದು ಮತಚಲಾಯಿಸಿದರು. ಈಗೆ ಸಾಲು ಸಾಲು ಮದುವೆಯಾಗಿರುವ ಜೋಡಿ ತಾರೆಯರು ಬಂದು ಮತಚಲಾವಣೆ ಮಾಡಿದರು. ಸಿನೇಮಾ ಸ್ಟಾರ್ ಗಳು ಮಾತ್ರವಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ತನ್ನ ಪತ್ನಿ ಜೊತೆ ಮತಚಲಾಯಿಸಿದರೆ, ಮೈಸೂರು ರಾಜ ಯದುವೀರ್ ಮೊದಲ ಬಾರಿಗೆ ಪತ್ನಿ ರಿಷಿಕಾ ಜೊತೆ ಮತದಾನ ಮಾಡಿದರು. ಆದರೆ ಯಶ್ ದು ಮಾತ್ರ ಮತದಾನದಲ್ಲಿ ವಿರಹ ಗೀತೆ.

 

 

ಯಶ್ ಕತ್ರಿಗುಪ್ಪೆಯ ಸರಕಾರಿ ಶಾಲೆಯಲ್ಲಿ ಮತಚಲಾವಣೆ ಮಾಡಲು ಆಗಮಿಸಿದರು. ಯಶ್ ಬಂದ್ರು ಅಂತ ಅಭಿಮಾನಿಗಳು ಅಕ್ಕಪಕ್ಕ ನೋಡಿದ್ರೆ ನಟಿ ರಾಧಿಕಾ ಕಾಣಿಸ್ತಾನೇ ಇಲ್ಲ. ಕೈ ಕೈ ಹಿಡಿದುಕೊಂಡು ನಡೆದುಕೊಂಡು ಬರಬೇಕಿದ್ದ ಯಶ್ ಗಡ್ಡ ಸವರಿಕೊಂಡು, ಕೂದಲು ಸರಿ ಮಾಡುತ್ತಾ ಏಕಾಂಗಿಯಾಗಿ ಬಂದಿದ್ದಾರೆ.

ಕಾರಣ ಇಷ್ಟೆ. ಯಶ್ ಮತ್ತು ರಾಧಿಕಾ ಮದುವೆಯಾಗಿ ವರ್ಷ ಕಳೆದರೂ ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಿಸಿಲ್ಲ. ರಾಧಿಕಾ ಇನ್ನೂ ಕೂಡಾ ಶ್ರೀರಾಂಪುರ ಮತದಾರರಾಗಿಯೇ ಇದ್ದಾರೆ. ರಾಧಿಕಾ ಶ್ರೀರಾಂಪುರದಲ್ಲಿ ಏಕಾಂಗಿಯಾಗಿ ಮತಚಲಾಯಿಸಿದ್ರೆ ಯಶ್ ಕತ್ರಿಗುಪ್ಪೆಯಲ್ಲಿ ಮತಚಲಾಯಿಸಿದ್ರು. ಆದರೆ ಇಬ್ಬರೂ ಕೂಡಾ ಪ್ರತ್ಯೇಕ ಮತಗಟ್ಟೆಯಲ್ಲಿ ಜನರೆಲ್ಲಾ ಮತ ಹಾಕಲು ಬರುವಂತೆ ಸಂದೇಶ ನೀಡಿದ್ರು.

Leave a Comment