ಆ. 29: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ದಿಢೀರ್ ಮಹತ್ವದ ಬದಲಾವಣೆ ಮಾಡಿದೆ. ಒಂದೇ ಬಾರಿಗೆ ಬರೋಬ್ಬರಿ 15 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
ಈ ದಿಢೀರ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಎನ್. ಶಶಿಕುಮಾರ್ ಅವರನ್ನು ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿದೆ. ಅವರ ತೆರವಾದ ಸ್ಥಾನಕ್ಕೆ ನೂತನ ಕಮಿಷನರ್ ಆಗಿ ಭೂಷಣ್ ಬೊರಸೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಯಾವ ಅಧಿಕಾರಿಗಳಿಗೆ ಎಲ್ಲಿಗೆ ವರ್ಗಾವಣೆ? ಇಲ್ಲಿದೆ ಸಂಪೂರ್ಣ ಪಟ್ಟಿ:
- ಪಿ. ಹರಿಶೇಖರನ್ (ಎಡಿಜಿಪಿ): ಡಿಸಿಆರ್ಇ
- ನಂಜುಂಡಸ್ವಾಮಿ (ಎಡಿಜಿಪಿ): ರಾಜ್ಯ ಮಾನವ ಹಕ್ಕುಗಳ ಆಯೋಗ
- ದಿವ್ಯಜ್ಯೋತಿ ರೇ (ಎಡಿಜಿಪಿ): ಅಪರಾಧ ಮತ್ತು ತಾಂತ್ರಿಕ ವಿಭಾಗ
- ಅಮಿತ್ ಸಿಂಗ್ (ಐಜಿಪಿ): ಕೆಎಸ್ಆರ್ಪಿ
- ಆರ್. ಚೇತನ್ (ಐಜಿಪಿ): ಪಶ್ಚಿಮ ವಲಯ, ಮಂಗಳೂರು
- ನಿಕ್ಕಮ್ ಪ್ರಕಾಶ್ (ಐಜಿಪಿ): ಪೊಲೀಸ್ ಆಯುಕ್ತರು, ಬೆಳಗಾವಿ
- ಭೂಷಣ್ ಬೊರಸೆ (ಡಿಐಜಿಪಿ): ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ
- ಎನ್. ಶಶಿಕುಮಾರ್ (ಡಿಐಜಿಪಿ): ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ
- ಶಿವಪ್ರಕಾಶ ದೇವರಾಜ್ (ಎಸ್ಪಿ): ಮಾದಕದ್ರವ್ಯ ನಿಗ್ರಹ ಪಡೆ
- ಪದ್ಮಿನಿ ಸಾಹು (ಎಸ್ಪಿ): ಚಿಕ್ಕಬಳ್ಳಾಪುರ ಜಿಲ್ಲೆ
- ಆರ್. ಶ್ರೀನಿವಾಸಗೌಡ (ಡಿಸಿಪಿ): ಸಿಸಿಬಿ-1, ಬೆಂಗಳೂರು
- ಡಾ. ಶಿವಕುಮಾರ್ (ಎಸ್ಪಿ): ಕರ್ನಾಟಕ ಲೋಕಾಯುಕ್ತ
- ಕುಶಲ್ ಚೌಕ್ಸೆ (ಡಿಸಿಪಿ): ಆಡಳಿತ ವಿಭಾಗ, ಬೆಂಗಳೂರು ನಗರ
- ಸಾಹಿಲ್ ಬಾಗ್ಲಾ (ಎಸ್ಪಿ): ಕೊಪ್ಪಳ ಜಿಲ್ಲೆ
- ರೋಹನ್ ಜಗದೀಶ್ (ಎಸ್ಪಿ): ಬೆಂಗಳೂರು ದಕ್ಷಿಣ ಜಿಲ್ಲೆ
- ಹೆಚ್.ಎನ್. ಮಿಥುನ್ (ಎಸ್ಪಿ): ಗದಗ ಜಿಲ್ಲೆ